WPL 2026: ಡಬ್ಲ್ಯುಪಿಎಲ್​ನಿಂದ ಹೊರಬಿದ್ದ ಭಾರತದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್

Updated on: Jan 09, 2026 | 9:50 PM

WPL 2026: ಮಹಿಳಾ ಪ್ರೀಮಿಯರ್ ಲೀಗ್ 2026 ಆರಂಭಕ್ಕೂ ಮುನ್ನವೇ ಗುಜರಾತ್ ಜೈಂಟ್ಸ್‌ಗೆ ದೊಡ್ಡ ಆಘಾತ ಎದುರಾಗಿದೆ. ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಗಾಯದಿಂದ ಇಡೀ ಆವೃತ್ತಿಯಿಂದ ಹೊರಬಿದ್ದಿದ್ದಾರೆ. 50 ಲಕ್ಷಕ್ಕೆ ಖರೀದಿಸಿದ್ದ ಭಾಟಿಯಾ, ಹರಾಜಿಗೂ ಮುನ್ನವೇ ಗಾಯಗೊಂಡಿದ್ದರಿಂದ ಬಿಸಿಸಿಐ ನಿಯಮದಂತೆ ಅವರಿಗೆ ಬದಲಿಯಾಗಿ ಯಾರನ್ನೂ ಸೇರಿಸಿಕೊಳ್ಳಲು ಗುಜರಾತ್ ಜೈಂಟ್ಸ್‌ಗೆ ಸಾಧ್ಯವಿಲ್ಲ. ಇದು ತಂಡದ ಪ್ರಶಸ್ತಿ ಕನಸುಗಳಿಗೆ ದೊಡ್ಡ ಹೊಡೆತ ನೀಡಿದೆ.

1 / 5
2026 ರ ಮಹಿಳಾ ಪ್ರೀಮಿಯರ್ ಲೀಗ್ ಜನವರಿ 9 ರಿಂದ ಆರಂಭವಾಗಿದೆ. ಆದರೆ ಟೂರ್ನಿ ಆರಂಭದ ದಿನವೇ ಗುಜರಾತ್ ಜೈಂಟ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವಿಕೆಟ್‌ಕೀಪರ್ ಬ್ಯಾಟರ್ ಯಾಸ್ತಿಕಾ ಭಾಟಿಯಾ ಗಾಯದಿಂದಾಗಿ ಇಡೀ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ಸಂಕಷ್ಟ ತಂದೊಡ್ಡಿದೆ.

2 / 5
ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಯಾಸ್ತಿಕಾ ಭಾಟಿಯಾ ಗಾಯದ ಕಾರಣದಿಂದಾಗಿ ಮಹಿಳಾ ಪ್ರೀಮಿಯರ್ ಲೀಗ್ 2026 ರಿಂದ ಹೊರಬಿದ್ದಿದ್ದಾರೆ. ಈ ಹಿಂದೆ ನಡೆದಿದ್ದ ಡಬ್ಲ್ಯುಪಿಎಲ್ ಮಿನಿ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ತಂಡವು ಭಾಟಿಯಾ ಅವರನ್ನು 50 ಲಕ್ಷ ರೂ. ನೀಡಿ ಖರೀದಿಸಿತ್ತು. ಆದಾಗ್ಯೂ, ಅವರು ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲದ ಕಾರಣ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

3 / 5
ಗುಜರಾತ್ ಜೈಂಟ್ಸ್ ತಂಡಕ್ಕೆ ಇನ್ನೊಂದು ಆಘಾತಕ್ಕಾರಿ ಸುದ್ದಿಯಿಂದರೇ ಗಾಯದಿಂದ ಚೇತರಿಸಿಕೊಳ್ಳದ ಯಾಸ್ತಿಕಾ ಭಾಟಿಯಾ ಬದಲಿಯಾಗಿ ಬೇರೆ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳುವಂತಿಲ್ಲ. ಏಕೆಂದರೆ ಯಸ್ತಿಕಾ ಭಾಟಿಯಾ ಹರಾಜಿಗೂ ಮುನ್ನವೇ ಗಾಯಗೊಂಡಿದ್ದರು. ಬಿಸಿಸಿಐ ನಿಯಮಗಳ ಪ್ರಕಾರ, ಹರಾಜಿಗೂ ಮುನ್ನ ಗಾಯಗೊಂಡ ಆಟಗಾರರ್ತಿಯರ ಬದಲಿಗೆ ಬೇರೆ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಳ್ಳುವಂತಿಲ್ಲ.

4 / 5
ಯಸ್ತಿಕಾ ಭಾಟಿಯಾ ಮೊದಲ ಸೀಸನ್‌ನಿಂದಲೂ ಲೀಗ್‌ನ ಭಾಗವಾಗಿದ್ದು, ಮೊದಲ ಮೂರು ಆವೃತ್ತಿಗಳಲ್ಲಿ ಅವರು ಎರಡು ಬಾರಿ ಪ್ರಶಸ್ತಿ ಗೆದ್ದ ಮುಂಬೈ ತಂಡದ ಭಾಗವಾಗಿದ್ದರು. ಆದಾಗ್ಯೂ, ಕಳೆದ ಸೀಸನ್‌ನಲ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದರಿಂದ ಮುಂಬೈ ಇಂಡಿಯನ್ಸ್‌ನಿಂದ ಬಿಡುಗಡೆಯಾಗಬೇಕಾಯಿತು.

5 / 5
ಇತ್ತ ಮೊದಲ ಮೂರು ಆವೃತ್ತಿಗಳಲ್ಲಿ ಗುಜರಾತ್ ಜೈಂಟ್ಸ್‌ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಮೊದಲ ಎರಡು ಆವೃತ್ತಿಗಳಲ್ಲಿ ಕೊನೆಯ ಸ್ಥಾನ ಪಡೆದಿದ್ದ ಗುಜರಾತ್, ಕಳೆದ ಆವೃತ್ತಿಯನ್ನು ಮೂರನೇ ಸ್ಥಾನದೊಂದಿಗೆ ಕೊನೆಗೊಳಿಸಿತು. ಈ ಬಾರಿ, ಗುಜರಾತ್ ಜೈಂಟ್ಸ್ ತಮ್ಮ ಮೊದಲ ಪ್ರಶಸ್ತಿಗಾಗಿ ಕಾಯುವಿಕೆಯನ್ನು ಕೊನೆಗೊಳಿಸಲು ನೋಡುತ್ತಿದೆ.