WTC Final: ಹೀಗಾದರೆ ಫೈನಲ್ಗೆ ಪ್ರವೇಶಿಸಿರುವ ಆಸ್ಟ್ರೇಲಿಯಾ ಹೊರಬೀಳಬಹುದು..!
TV9 Web | Updated By: ಝಾಹಿರ್ ಯೂಸುಫ್
Updated on:
Jan 07, 2025 | 10:32 AM
WTC 2025 Final: ಐಸಿಸಿ ನಿಯಮಗಳ ಪ್ರಕಾರ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ಗಂಟೆಯೊಳಗೆ 15 ಓವರ್ಗಳನ್ನು ಮಾಡಬೇಕು. ಗಾಯ ಅಥವಾ ಇನ್ನಿತರ ಕಾರಣಗಳ ಹೊರತಾಗಿ ಹದಿನೈದಕ್ಕಿಂತ ಕಡಿಮೆ ಓವರ್ಗಳನ್ನು ಎಸೆದರೆ ಪೆನಾಲ್ಟಿ ವಿಧಿಸಲಾಗುತ್ತದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇಂತಹದೊಂದು ಪವಾಡ ನಡೆದರೆ ಶ್ರೀಲಂಕಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು.
1 / 5
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುವುದು ಖಚಿತವಾಗಿದೆ. ಈ ಖಚಿತತೆಯ ಹೊರತಾಗಿಯೂ ಶ್ರೀಲಂಕಾ ತಂಡಕ್ಕೆ ಫೈನಲ್ಗೆ ಎಂಟ್ರಿ ಕೊಡಲು ಇನ್ನೂ ಅವಕಾಶವೊಂದಿದೆ. ಆದರೆ ಈ ಅವಕಾಶವನ್ನು ಸೃಷ್ಟಿಸಬೇಕಿರುವುದು ಶ್ರೀಲಂಕಾ ತಂಡ. ಇದರ ಜೊತೆಗೆ ಆಸ್ಟ್ರೇಲಿಯಾ ದೊಡ್ಡ ತಪ್ಪೊಂದನ್ನು ಮಾಡುವುದು ಅನಿವಾರ್ಯ.
2 / 5
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ 69.44% ಅಂಕಗಳೊಂದಿಗೆ ಸೌತ್ ಆಫ್ರಿಕಾ ಅಗ್ರಸ್ಥಾನ ಅಲಂಕರಿಸಿದೆ. ಇನ್ನು 63.73% ಹೊಂದಿರುವ ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ. ಈ ಮೂಲಕ ಉಭಯ ತಂಡಗಳು ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಇಲ್ಲಿ ಆಸ್ಟ್ರೇಲಿಯಾ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಪಂದ್ಯಗಳು ಮುಗಿದಿಲ್ಲ ಎಂಬುದು ವಿಶೇಷ.
3 / 5
ಅಂದರೆ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯನ್ನು ಶ್ರೀಲಂಕಾ ತಂಡವು 2-0 ಅಂತರದಿಂದ ಗೆದ್ದುಕೊಂಡರೆ, ಆಸ್ಟ್ರೇಲಿಯಾ ತಂಡದ ಅಂಕ 57.02% ಗೆ ಇಳಿಯಲಿದೆ. ಇದರಿಂದ ಲಂಕಾ ಪಡೆ ಫೈನಲ್ಗೆ ಅರ್ಹತೆ ಪಡೆಯುವುದಿಲ್ಲ. ಬದಲಾಗಿ ಈ ಎರಡೂ ಮ್ಯಾಚ್ಗಳಲ್ಲಿ ಆಸ್ಟ್ರೇಲಿಯಾ ತಂಡದಿಂದ ದೊಡ್ಡ ತಪ್ಪು ನಡೆಯಬೇಕು. ಅದೇನೆಂದರೆ....
4 / 5
ಸ್ಲೋ ಓವರ್ ರೇಟ್. ಶ್ರೀಲಂಕಾ ವಿರುದ್ಧದ 2 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸ್ಲೋ ಓವರ್ ರೇಟ್ ತಪ್ಪು ಮಾಡಿದರೆ ಕನಿಷ್ಠ 8 ಅಂಕಗಳನ್ನು ಕಳೆದುಕೊಳ್ಳುವುದು ಖಚಿತ. ಇದರಿಂದ ಆಸ್ಟ್ರೇಲಿಯಾ ತಂಡದ ಶೇಕಡಾವಾರು ಅಂಕಗಳಲ್ಲೂ ಬದಲಾವಣೆ ಕಂಡು ಬರಲಿದೆ. ಅಂದರೆ ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ಸರಣಿ ಸೋಲಿನ ಜೊತೆಗೆ ಎರಡು ಬಾರಿ ಸ್ಲೋ ಓವರ್ ರೇಟ್ ತಪ್ಪು ಮಾಡಿದರೆ, ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಶ್ರೀಲಂಕಾ ಫೈನಲ್ಗೆ ಅರ್ಹತೆ ಪಡೆಯಬಹುದು.
5 / 5
ಟೆಸ್ಟ್ ಕ್ರಿಕೆಟ್ನಲ್ಲಿ ಇಂತಹದೊಂದು ತಪ್ಪುಗಳು ನಡೆದಿದೆಯಾ ಎಂದು ಕೇಳಿದರೆ, ಖಂಡಿತವಾಗಿಯೂ ನಡೆದಿದೆ. 2023 ರಲ್ಲಿ ಇಂಗ್ಲೆಂಡ್ ತಂಡವು ಸ್ಲೋ ಓವರ್ ರೇಟ್ ಕಾರಣ ಒಟ್ಟು 19 ಅಂಕಗಳನ್ನು ಕಳೆದುಕೊಂಡಿತ್ತು. ಇದರಿಂದಾಗಿ ಇಂಗ್ಲೆಂಡ್ಗೆ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರುವ ಅವಕಾಶ ಕೈ ತಪ್ಪಿತ್ತು. ಹಾಗೆಯೇ ಆಸ್ಟ್ರೇಲಿಯಾ ತಂಡ ಸ್ಲೋ ಓವರ್ ರೇಟ್ ಕಾರಣ 10 ಅಂಕಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಶ್ರೀಲಂಕಾ ತಂಡವನ್ನು ಅದೃಷ್ಟ ಕೈ ಹಿಡಿದರೆ ಫೈನಲ್ಗೆ ಪ್ರವೇಶಿಸಬಹುದು.
Published On - 10:32 am, Tue, 7 January 25