WTC Final 2023: ಓವಲ್ ಮೈದಾನದಲ್ಲಿ ವೇಗಿಗಳದ್ದೇ ದರ್ಬಾರ್; ಅದರಲ್ಲೂ ಭಾರತೀಯರದ್ದೇ ಕಾರುಬಾರು..!

Updated on: Jun 02, 2023 | 11:20 AM

WTC Final 2023: ಉಭಯ ತಂಡದಲ್ಲೂ ಅನುಭವಿ ವೇಗದ ಬೌಲರ್​ಗಳ ದಂಡೆ ಇದೆ. ಇನ್ನು ಈ ಮೈದಾನದಲ್ಲಿ ಎರಡೂ ತಂಡದ ವೇಗದ ಬೌಲರ್​ಗಳ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ..

1 / 6
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಆತಿಥ್ಯವಹಿಸಲು ಲಂಡನ್‌ನ ಓವಲ್ ಮೈದಾನ ಸಜ್ಜಾಗಿದೆ. ವಿಸ್ಮಯಕಾರಿ ಸಂಗತಿ ಎಂದರೆ ಈ ಮೈದಾನದಲ್ಲಿ ಟೀಂ ಇಂಡಿಯಾದ ದಾಖಲೆಯೂ ಉತ್ತಮವಾಗಿಲ್ಲ ಅಥವಾ ಆಸ್ಟ್ರೇಲಿಯಾದ ದಾಖಲೆಯೂ ಉತ್ತಮವಾಗಿಲ್ಲ. ಅಲ್ಲದೆ ಈ ಮೈದಾನ ಸ್ಪಿನ್ನರ್​ಗಳಿಗಿಂತ ವೇಗಗಳಿಗೆ ಹೆಚ್ಚು ನೆರವಾಗಿದೆ.

2 / 6

ಭಾರತ ಮತ್ತು ಆಸ್ಟ್ರೇಲಿಯಾ ತಂಡದಲ್ಲಿ ವೇಗದ ಬೌಲಿಂಗ್ ವಿಭಾಗ ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದೆ. ಉಭಯ ತಂಡದಲ್ಲೂ ಅನುಭವಿ ವೇಗದ ಬೌಲರ್​ಗಳ ದಂಡೆ ಇದೆ. ಇನ್ನು ಈ ಮೈದಾನದಲ್ಲಿ ಎರಡೂ ತಂಡದ ವೇಗದ ಬೌಲರ್​ಗಳ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ..

3 / 6

ಈ ಮೈದಾನದಲ್ಲಿ ಎರಡೂ ತಂಡಗಳ ಬೌಲಿಂಗ್ ದಾಖಲೆಯನ್ನು ನೋಡುವುದಾದರೆ. ಇಲ್ಲಿ ಭಾರತದ ಬೌಲಿಂಗ್ ವಿಭಾಗವೇ ಮೇಲುಗೈ ಸಾಧಿಸಿದ್ದಾರೆ. ಲಂಡನ್‌ನ ಓವಲ್ ಮೈದಾನದಲ್ಲಿ ಪ್ರಸ್ತುತ ಭಾರತದ ಬೌಲರ್‌ಗಳು ಒಟ್ಟು 27 ವಿಕೆಟ್‌ಗಳನ್ನು ಕಬಳಿಸಿದ್ದರೆ, ಆಸ್ಟ್ರೇಲಿಯಾದ ಬೌಲರ್​ಗಳು 20 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 6

ಇನ್ನು ಎರಡೂ ತಂಡಗಳ ಈಗಿನ ವೇಗದ ಬೌಲರ್‌ಗಳ ವಿಚಾರಕ್ಕೆ ಬಂದರೆ, ಭಾರತದ ವೇಗಿಗಳು 12 ವಿಕೆಟ್ ಉರುಳಿಸಿದ್ದರೆ, ಆಸ್ಟ್ರೇಲಿಯಾದ ವೇಗಿಗಳು 10 ವಿಕೆಟ್ ಪಡೆದಿದ್ದಾರೆ.

5 / 6

ಪ್ರಸ್ತುತ ಟೀಂ ಇಂಡಿಯಾದ ವೇಗದ ದಾಳಿಯ ಜವಬ್ದಾರಿ ಹೊತ್ತುಕೊಂಡಿರುವ ಉಮೇಶ್, ಶಾರ್ದೂಲ್, ಶಮಿ ಹಾಗೂ ಸಿರಾಜ್ ಈ ಮೊದಲು ಈ ಮೈದಾನದಲ್ಲಿ ಆಡಿದ್ದಾರೆ. ಅದರಲ್ಲಿ ಉಮೇಶ್ ಯಾದವ್ ಟೀಂ ಇಂಡಿಯಾ ಪರ ಗರಿಷ್ಠ 6 ವಿಕೆಟ್ ಪಡೆದಿದ್ದಾರೆ. ಇವರಲ್ಲದೆ ಶಾರ್ದೂಲ್ ಠಾಕೂರ್ 3 ವಿಕೆಟ್, ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದಿದ್ದಾರೆ.

6 / 6

ಮತ್ತೊಂದೆಡೆ, ಆಸ್ಟ್ರೇಲಿಯಾದ ಬಗ್ಗೆ ಮಾತನಾಡುವುದಾದರೆ, ನಾಯಕ ಪ್ಯಾಟ್ ಕಮಿನ್ಸ್ ಗರಿಷ್ಠ 5 ವಿಕೆಟ್ ಪಡೆದಿದ್ದಾರೆ. ಇವರನ್ನು ಹೊರತುಪಡಿಸಿ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಹಾಗೂ ಜೋಶ್ ಹೇಜಲ್ ವುಡ್ 2 ವಿಕೆಟ್ ಪಡೆದಿದ್ದಾರೆ.

Loading...
Unable to load recommendations.
Follow Us