- Kannada News Photo gallery Cricket photos WTC Final 2023 IPL Hero Shubman Gill Fails in ICC WTC Final
WTC Final 2023: ನಿರೀಕ್ಷೆ ಹುಸಿಗೊಳಿಸಿದ ಐಪಿಎಲ್ ಹೀರೋ ಶುಭ್ಮನ್ ಗಿಲ್
WTC Final 2023: ಐಪಿಎಲ್ 16ನೇ ಆವೃತ್ತಿಯಲ್ಲಿ ಆಡಿದ 17 ಪಂದ್ಯಗಳಲ್ಲಿ ಬರೋಬ್ಬರ 890 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ಶುಭ್ಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಎರಡೂ ಇನ್ನಿಂಗ್ಸ್ಗಳನ್ನು ಸೇರಿಸಿ 40ರ ಗಡಿ ದಾಟುವಲ್ಲಿ ವಿಫಲರಾಗಿದ್ದಾರೆ.
Updated on: Jun 10, 2023 | 8:49 PM

ಐಪಿಎಲ್ 16ನೇ ಆವೃತ್ತಿಯಲ್ಲಿ ಆಡಿದ 17 ಪಂದ್ಯಗಳಲ್ಲಿ ಬರೋಬ್ಬರ 890 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ಶುಭ್ಮನ್ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಎರಡೂ ಇನ್ನಿಂಗ್ಸ್ಗಳನ್ನು ಸೇರಿಸಿ 40ರ ಗಡಿ ದಾಟುವಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಅಭಿಮಾನಿಗಳ ನಿರೀಕ್ಷೆಯನ್ನು ಗಿಲ್ ಹುಸಿಗೊಳಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ನೀಡಿರುವ 444 ರನ್ಗಳ ಗುರಿಯನ್ನು ಬೆನ್ನಟ್ಟಿರುವ ಭಾರತಕ್ಕೆ ಉತ್ತಮ ಆರಂಭ ನೀಡುವಲ್ಲಿ ಗಿಲ್ ವಿಫಲರಾಗಿದ್ದಾರೆ. ನಾಯಕ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಗಿಲ್ ಕೇವಲ 18 ರನ್ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು.

ಇನ್ನು ಮೊದಲ ಇನ್ನಿಂಗ್ಸ್ನಲ್ಲೂ ಗಿಲ್ ಬ್ಯಾಟಿಂಗ್ ಇದಕ್ಕಿಂತ ಭಿನ್ನವಾಗಿರಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲೂ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಗಿಲ್ ಕೇವಲ 13 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.

ಆದರೂ 2ನೇ ಇನ್ನಿಂಗ್ಸ್ನಲ್ಲಿ ಗಿಲ್ ವಿಕೆಟ್ ಬಗ್ಗೆ ಇದೀಗ ವಿವಾದ ಹುಟ್ಟಿಕೊಂಡಿದೆ. ಬೋಲ್ಯಾಂಡ್ ಬೌಲ್ ಮಾಡಿದ ಲೆಂಗ್ತ್ ಬಾಲ್ ಗಿಲ್ ಅವರ ಬ್ಯಾಟ್ನ ಅಂಚನ್ನು ತಾಗಿ ಗಲ್ಲಿಯಲ್ಲಿ ನಿಂತಿದ್ದ ಗ್ರೀನ್ ಕಡೆ ಹೋಯಿತು. ಅಲ್ಲೆ ನಿಂತಿದ್ದ ಗ್ರೀನ್, ತಮ್ಮ ಎಡಬಾಗಕ್ಕೆ ಜಿಗಿದು ಕ್ಯಾಚ್ ತೆಗೆದುಕೊಂಡರು. ಆದರೆ ಚೆಂಡು ಗ್ರೀನ್ ಕೈ ಸೇರುವುದರೊಂದಿಗೆ ನೆಲಕ್ಕೂ ತಾಗಿದೆ ಎಂಬುದು ಈಗ ಹುಟ್ಟಿಕೊಂಡಿರುವ ವಿವಾದವಾಗಿದೆ.

ಇನ್ನೊಂದು ಆಸಕ್ತಿದಾಯಕ ವಿಚಾರವೆಂದರೆ, 2ನೇ ಇನ್ನಿಂಗ್ಸ್ನಲ್ಲಿ ಬೋಲ್ಯಾಂಡ್ಗೆ ವಿಕೆಟ್ ಒಪ್ಪಿಸಿರುವ ಗಿಲ್, ತಮ್ಮ ಮೊದಲ ಇನ್ನಿಂಗ್ಸ್ನಲ್ಲೂ ಇದೇ ಬೋಲ್ಯಾಂಡ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಎರಡೂ ಇನ್ನಿಂಗ್ಸ್ಗಳಲ್ಲೂ ಕೇವಲ 34 ಎಸೆತಗಳನ್ನು ಎದುರಿಸಿದ ಗಿಲ್, ಎರಡೂ ಇನ್ನಿಂಗ್ಸ್ ಸೇರಿಸಿ, ಒಟ್ಟು 4 ಬೌಂಡರಿಗಳನ್ನೊಳಗೊಂಡಂತೆ ಕೇವಲ 31 ರನ್ ಮಾತ್ರ ಕಲೆಹಾಕಿದರು.



















