WTC Final 2023: ಆಸೀಸ್ ವಿರುದ್ಧ ಮತ್ತೊಂದು ದಾಖಲೆ ಬರೆಯುವ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ..!
Virat Kohli Records: ಕಳೆದ 24 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 48.27ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, 42 ಇನ್ನಿಂಗ್ಸ್‌ಗಳಲ್ಲಿ, 8 ಶತಕ ಹಾಗೂ 5 ಅರ್ಧ ಶತಕ ಸೇರಿದಂತೆ 1979 ರನ್ ಕಲೆಹಾಕಿದ್ದಾರೆ.
1 / 6
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಸೇರಿದಂತೆ ಉಳಿದ ಟೀಂ ಇಂಡಿಯಾ ಆಟಗಾರರು ಜೂನ್ 7 ರಿಂದ 11 ರವರೆಗೆ ಆಸ್ಟ್ರೇಲಿಯಾವನ್ನು ಎದುರಿಸಲು ತಯಾರಿ ನಡೆಸಿದ್ದಾರೆ. ಸದ್ಯ ಗಿಲ್ ಹಾಗೂ ವಿರಾಟ್ ಕೊಹ್ಲಿ ಇರುವ ಫಾರ್ಮ್ ನೋಡಿದರೆ ಆಸ್ಟ್ರೇಲಿಯಾದ ತಲೆನೋವು ಹೆಚ್ಚಾಗುತ್ತಿದೆ. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಅವರ ದಾಖಲೆ ಕೂಡ ಕಾಂಗರೂಗಳಿಗೆ ನಡುಕ ಹುಟ್ಟಿಸಿದೆ.
2 / 6
ಆಸ್ಟ್ರೇಲಿಯದ ಬೌಲರ್‌ಗಳಿಗೆ ತಮ್ಮ ವಿರುದ್ಧ ಕೊಹ್ಲಿ ಎಷ್ಟು ಅಪಾಯಕಾರಿ ಎಂಬುದು ಚೆನ್ನಾಗಿ ಗೊತ್ತಿದೆ. ಕಳೆದ 24 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 48.27ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು, 42 ಇನ್ನಿಂಗ್ಸ್‌ಗಳಲ್ಲಿ, 8 ಶತಕ ಹಾಗೂ 5 ಅರ್ಧ ಶತಕ ಸೇರಿದಂತೆ 1979 ರನ್ ಕಲೆಹಾಕಿದ್ದಾರೆ.
3 / 6
ಅಲ್ಲದೆ ಈ ವರ್ಷದ ಮಾರ್ಚ್‌ನಲ್ಲಿ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 186 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 364 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 15 ಬೌಂಡರಿ ಸಹಿತ 186 ರನ್ ಕಲೆ ಹಾಕಿದ್ದರು.
4 / 6
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ನಲ್ಲೂ ಅದೇ ಆಟವನ್ನು ಮುಂದುವರೆಸುವ ತವಕದಲ್ಲಿರುವ ಕೊಹ್ಲಿ, ಇದೇ ಕಾಂಗರೂಗಳ ವಿರುದ್ಧ ಇನ್ನು ಕೇವಲ 21 ರನ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2000 ಸಾವಿರ ರನ್‌ಗಳನ್ನು ಪೂರೈಸಿದ ದಾಖಲೆ ಬರೆಯಲಿದ್ದಾರೆ
5 / 6
ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ 108 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ 48.93 ಸರಾಸರಿಯಲ್ಲಿ 8416 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 28 ಶತಕ ಮತ್ತು 28 ಅರ್ಧ ಶತಕಗಳೂ ಸೇರಿವೆ. ಈ ದಾಖಲೆಯೊಂದಿಗೆ ವಿರಾಟ್ ಕಳೆದ ಡಬ್ಲ್ಯುಟಿಸಿ ಫೈನಲ್ನಲ್ಲಿ ಎಸಗಿದ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸಲಿದ್ದಾರೆ.
6 / 6
ವಾಸ್ತವವಾಗಿ ಭಾರತ ಈ ಟೆಸ್ಟ್ ವಿಶ್ವಕಪ್ನ ಮೊದಲ ಆವೃತ್ತಿಯಲ್ಲೂ ಫೈನಲ್ ಆಡಿತ್ತು. ಆದರೆ ಆ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋತು, ಖಾಲಿ ಕೈಯಲ್ಲಿ ತವರಿಗೆ ಮರಳಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡಿದ್ದ ವಿರಾಟ್, ಮೊದಲ ಇನ್ನಿಂಗ್ಸ್‌ನಲ್ಲಿ 44 ರನ್ ಬಾರಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 13 ರನ್‌ಗಳಿಗೆ ಸುಸ್ತಾಗಿದ್ದರು. ಕೊಹ್ಲಿಯ ಬ್ಯಾಟಿಂಗ್ ಕೂಡ ಭಾರತದ ಸೋಲಿಗೆ ಬಹುದೊಡ್ಡ ಕಾರಣವಾಗಿತ್ತು. ಇಂತಹ ಸಂದರ್ಭದಲ್ಲಿ ತಮ್ಮ ಹಿಂದಿನ ತಪ್ಪನ್ನು ಸರಿಪಡಿಸಿಕೊಂಡು ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಇನಿಂಗ್ಸ್ ಆಡುವ ಮೂಲಕ ಭಾರತಕ್ಕೆ ಐತಿಹಾಸಿಕ ಜಯ ತಂದುಕೊಡುವ ಪ್ರಯತ್ನ ಕೊಹ್ಲಿಯದ್ದಾಗಿದೆ.