Updated on: Jun 06, 2023 | 10:08 PM
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಜೂ.7) ಓವಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿರುವ ಅಂತಿಮ ಹಣಾಹಣಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಕುತೂಹಲ. ಇದಾಗ್ಯೂ ಈ ಸಲ ಭಾರತವನ್ನು ಸೋಲುಣಿಸಿ ನಾವೇ ಚಾಂಪಿಯನ್ ಪಟ್ಟ ಅಲಂಕರಿಸುತ್ತೇವೆ ಎಂದು ಸ್ಟೀವ್ ಸ್ಮಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ಮಿತ್, ಫೈನಲ್‌ನಲ್ಲಿ 2 ಉತ್ತಮ ತಂಡಗಳು ಮುಖಾಮುಖಿಯಾಗುತ್ತಿದೆ. ಹೀಗಾಗಿ ಅತ್ಯುತ್ತಮ ಕ್ರಿಕೆಟ್ ಅನ್ನು ಎದುರು ನೋಡಬಹುದು.
ಇದಾಗ್ಯೂ ನಾನು ಎದುರಾಳಿಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಾವು ಉತ್ತಮ ಪ್ರದರ್ಶನ ನೀಡುತ್ತೇವೆ. ಅಲ್ಲದೆ ಭಾರತವನ್ನು ಸೋಲಿಸುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಆಸ್ಟ್ರೇಲಿಯಾ ತಂಡದ ಉಪನಾಯಕ ಸ್ಟೀವ್ ಸ್ಮಿತ್ ತಿಳಿಸಿದ್ದಾರೆ.
ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ಉತ್ತಮವಾಗಿ ಆಡಿದ್ದೇವೆ. ಇದರ ಫಲವಾಗಿ ಇದೀಗ ಫೈನಲ್ ಆಡುತ್ತಿದ್ದೇವೆ. ಅಂತಿಮ ಪಂದ್ಯದಲ್ಲಿ ಭಾರತವನ್ನು ಸೋಲಿಸುವಷ್ಟು ನಾವು ಶಕ್ತರಾಗಿದ್ದೇವೆ. ಹೀಗಾಗಿ ಈ ಸಲ ನಾವೇ ಚಾಂಪಿಯನ್ ಪಟ್ಟ ಅಲಂಕರಿಸುತ್ತೇವೆ ಎಂದು ಸ್ಟೀವ್ ಸ್ಮಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತ ಈ ಸಲ ಕಪ್ ಗೆದ್ದೇ ಗೆಲುತ್ತೇವೆ ಎಂಬ ವಿಶ್ವಾಸದಲ್ಲಿರುವ ಸ್ಟೀವ್ ಸ್ಮಿತ್ ಅವರ ವಿಕೆಟ್ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಬಹುದು. ಏಕೆಂದರೆ ಭಾರತದ ವಿರುದ್ಧ 18 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಮಿತ್ ಒಟ್ಟು 1887 ರನ್ ಕಲೆಹಾಕಿದ್ದಾರೆ. ಈ ವೇಳೆ 8 ಶತಕಗಳು ಹಾಗೂ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಭಾರತೀಯ ಬೌಲರ್ಗಳ ಪ್ರಮುಖ ಟಾರ್ಗೆಟ್ ಸ್ಟೀವ್ ಸ್ಮಿತ್ ಆಗಿರುವುದರಲಿ ಡೌಟೇ ಇಲ್ಲ.