ICC Test Rankings: ಶತಕ ಸಿಡಿಸಿಯೂ ಕುಸಿದ ಜೈಸ್ವಾಲ್; ಮುಂದುವರೆದ ಬುಮ್ರಾ ಪಾರುಪತ್ಯ..!

Updated on: Dec 04, 2024 | 4:15 PM

ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಶತಕ ಸಿಡಿಸಿ ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಏರಿದ್ದ ಯಶಸ್ವಿ ಜೈಸ್ವಾಲ್ ಇದೀಗ ICC Test Rankings: ಒಂದು ವಾರದಲ್ಲಿಯೇ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹ್ಯಾರಿ ಬ್ರೂಕ್ ಅವರ ಉತ್ತಮ ಪ್ರದರ್ಶನದಿಂದಾಗಿ ಜೈಸ್ವಾಲ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆದರೆ ಬೌಲರ್​ಗಳ ರ್ಯಾಂಕಿಂಗ್​ನಲ್ಲಿ ತಮ್ಮ ಪಾರುಪತ್ಯ ಮುಂದುವರೆಸಿರುವ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ.

1 / 8
ಆಸ್ಟ್ರೇಲಿಯಾ ವಿರುದ್ಧ ಪರ್ತ್ ಮೈದಾನದಲ್ಲಿ ಸ್ಮರಣೀಯ ಶತಕ ಸಿಡಿಸುವುದರ ಜೊತೆಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಭರ್ಜರಿ ಮುಂಬಡ್ತಿ ಪಡೆದಿದ್ದ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಕಳೆದ ವಾರವಷ್ಟೇ ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದರು. ಆದರೀಗ ಒಂದೇ ವಾರದಲ್ಲಿ ಜೈಸ್ವಾಲ್ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್ ಮೈದಾನದಲ್ಲಿ ಸ್ಮರಣೀಯ ಶತಕ ಸಿಡಿಸುವುದರ ಜೊತೆಗೆ ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ ಭರ್ಜರಿ ಮುಂಬಡ್ತಿ ಪಡೆದಿದ್ದ ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಕಳೆದ ವಾರವಷ್ಟೇ ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದರು. ಆದರೀಗ ಒಂದೇ ವಾರದಲ್ಲಿ ಜೈಸ್ವಾಲ್ ಆ ಸ್ಥಾನವನ್ನು ಕಳೆದುಕೊಂಡಿದ್ದಾರೆ.

2 / 8

ಪರ್ತ್​ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ 161 ರನ್​ಗಳ ಇನ್ನಿಂಗ್ಸ್ ಕಟ್ಟಿದ್ದ ಯಶಸ್ವಿ ಜೈಸ್ವಾಲ್, ಐಸಿಸಿ ಟೆಸ್ಟ್ ರ್ಯಾಂಕಿಂಗ್​ನಲ್ಲಿ 2 ಸ್ಥಾನ ಮೇಲೇರಿ 2ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದರು. ಆದರೀಗ ಮತ್ತೆ ತಮ್ಮ ಹಳೆಯ ಸ್ಥಾನಕ್ಕೆ ಅಂದರೆ 4ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

3 / 8

ವಾಸ್ತವವಾಗಿ ಡಿಸೆಂಬರ್ 1 ರಂದು ಮುಕ್ತಾಯಗೊಂಡ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ 171 ರನ್​ಗಳ ಇನ್ನಿಂಗ್ಸ್ ಕಟ್ಟಿದ್ದರು. ಹೀಗಾಗಿ ಇದರ ಲಾಭವನ್ನು ಪಡೆದಿರುವ ಬ್ರೂಕ್ ಮತ್ತೊಮ್ಮೆ 2ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.

4 / 8

ವಾರದ ಹಿಂದೆ ಬ್ರೂಕ್ ಅವರ ಸ್ಥಾನವನ್ನು ಜೈಸ್ವಾಲ್ ಕಿತ್ತುಕೊಂಡಿದ್ದರೆ, ಇದೀಗ ಜೈಸ್ವಾಲ್ ಸ್ಥಾನವನ್ನು ಬ್ರೂಕ್ ವಶಪಡಿಸಿಕೊಂಡಿದ್ದಾರೆ. ಕೇನ್ ವಿಲಿಯಮ್ಸನ್ ಕೂಡ ಜೈಸ್ವಾಲ್​ರನ್ನು ಹಿಂದಿಕ್ಕಿದ್ದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಜೋ ರೂಟ್ ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಉಳಿದಿದ್ದಾರೆ.

5 / 8

ಹಾಗೆಯೇ ಡೇರಿಲ್ ಮಿಚೆಲ್ 753 ರೇಟಿಂಗ್‌ನೊಂದಿಗೆ ಮೊದಲಿನಂತೆ 5 ನೇ ಸ್ಥಾನದಲ್ಲಿದ್ದರೆ, ಭಾರತದ ರಿಷಬ್ ಪಂತ್ 736 ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಕಮೆಂಡು ಮೆಂಡಿಸ್ ಎರಡು ಸ್ಥಾನ ಮೇಲಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತೊಂದು ಸ್ಥಾನ ಕುಸಿದಿದ್ದು, 726 ರೇಟಿಂಗ್‌ನೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.

6 / 8

ಪಾಕಿಸ್ತಾನದ ಸೌದ್ ಶಕೀಲ್ ಈಗ ಒಂದು ಸ್ಥಾನ ಕುಸಿದು 9ನೇ ಸ್ಥಾನಕ್ಕೆ ತಲುಪಿದ್ದಾರೆ. ಈ ನಡುವೆ ದಕ್ಷಿಣ ಆಫ್ರಿಕಾದ ಟೆಸ್ಟ್ ನಾಯಕ ತೆಂಬಾ ಬವುಮಾ ಅದ್ಭುತ ಸಾಧನೆ ಮಾಡಿದ್ದು, ಈ ಬಾರಿ ರೇಟಿಂಗ್​ನಲ್ಲಿ 14 ಸ್ಥಾನ ಜಿಗಿತ ಪಡೆದಿದ್ದಾರೆ. ಅವರು ಈಗ 715 ರೇಟಿಂಗ್‌ನೊಂದಿಗೆ 10 ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

7 / 8

ಇನ್ನು ಬೌಲರ್ಗಳ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ. ಕಳೆದ ವಾರವಷ್ಟೇ ಅಗ್ರಸ್ಥಾನಕ್ಕೇರಿದ್ದ ಬುಮ್ರಾ ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

8 / 8

ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಅವರ ಪ್ರದರ್ಶನ ಅದ್ಭುತವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದ ಬುಮ್ರಾ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು.

Published On - 4:12 pm, Wed, 4 December 24

Loading...
Unable to load recommendations.
Follow Us