
ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿರಬಹುದು. ಅವರ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ಪಂಡಿತರು, ಅಭಿಮಾನಿಗಳು ಸಾಕಷ್ಟು ಟೀಕೆಗಳನ್ನು ಮಾಡುತ್ತಿರಬಹುದು. ಆದರೆ ಹಣ ಗಳಿಸುವ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಭಂಗ ಎದುರಾಗಿಲ್ಲ. ಇತ್ತೀಚಿನ ವರದಿಯ ಪ್ರಕಾರ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ವಿರಾಟ್ ಕೊಹ್ಲಿ ಎಂಬ ಮಾಹಿತಿ ಈಗ ಹೊರಬಿದ್ದಿದೆ.

Hopperhq.com ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಒಂದು Instagram ಪೋಸ್ಟ್‌ಗೆ ಬರೋಬ್ಬರಿ 8.69 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ. ವಿರಾಟ್ ಬಿಟ್ಟರೆ, ಏಷ್ಯಾದ ಯಾವುದೇ ಆಟಗಾರ ಅಥವಾ ಸೆಲೆಬ್ರಿಟಿ ಇಷ್ಟು ಸಂಭಾವನೆ ಪಡೆಯುತ್ತಿಲ್ಲ. ಆದರೆ ವಿಶ್ವ ಮಟ್ಟದಲ್ಲಿ ಮಾತನಾಡುವುದಾದರೆ ಕೊಹ್ಲಿ, ಈ ವಿಚಾರದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.


37 ವರ್ಷದ ರೊನಾಲ್ಡೊ ಅವರು 20 ವರ್ಷಗಳ ಹಿಂದೆ ಸ್ಪೋರ್ಟಿಂಗ್ ಲಿಸ್ಬನ್‌ನೊಂದಿಗೆ ತಮ್ಮ ಕ್ಲಬ್ ಫುಟ್‌ಬಾಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ 20 ವರ್ಷಗಳಲ್ಲಿ, ಅವರು ಸ್ಪೋರ್ಟಿಂಗ್ ಜೊತೆಗೆ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಕ್ಲಬ್ ತಂಡಗಳಿಗಾಗಿ ಆಡಿದ್ದಾರೆ. ಒಟ್ಟು 944 ಪಂದ್ಯಗಳನ್ನು ಆಡಿರುವ ರೊನಾಲ್ಡೊ 700 ಗೋಲುಗಳನ್ನು ಗಳಿಸಿದ್ದಾರೆ.

Virat Kohli
Published On - 2:51 pm, Fri, 22 July 22