Yuzvendra Chahal: UAE ಪಿಚ್​ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಚಹಲ್, ಆದರೂ…

| Updated By: ಝಾಹಿರ್ ಯೂಸುಫ್

Updated on: Sep 09, 2021 | 10:43 PM

Yuzvendra Chahal: ಅತೀ ಹೆಚ್ಚು ವಿಕೆಟ್ ಪಡೆದ ಬೌಲರುಗಳಲ್ಲಿ ಚಹಲ್ ಕೂಡ ಒಬ್ಬರು. ಹಾಗೆಯೇ ಯುಎಇ ಐಪಿಎಲ್​ನ ಟಾಪ್ 5 ವಿಕೆಟ್ ಟೇಕರ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಎಂಬುದು ವಿಶೇಷ.

1 / 5
ಐಸಿಸಿ ಟಿ 20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾವನ್ನು (Team India) ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ (Virat kohli) ಮುನ್ನಡೆಸಲಿರುವ ಈ ಬಳಗದಲ್ಲಿ ಒಟ್ಟು 18 ಮಂದಿ ಸ್ಥಾನ ಪಡೆದಿದ್ದಾರೆ. ಅದರಲ್ಲಿ 15 ಮಂದಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದು, ಉಳಿದ 3 ಆಟಗಾರರು ಮೀಸಲು ಆಟಗಾರರ ಪಟ್ಟಿಯಲ್ಲಿರಲಿದ್ದಾರೆ.

2 / 5
 ಕಳೆದ ಕೆಲ ವರ್ಷಗಳಿಂದ ಟಿ20 ತಂಡದಿಂದ ಹೊರಗುಳಿದಿದ್ದ ರವಿಚಂದ್ರನ್ ಅಶ್ವಿನ್​ಗೆ ಸ್ಥಾನ ನೀಡಲಾಗಿದ್ದು, ಹಾಗೆಯೇ ಯುಜುವೇಂದ್ರ ಚಹಲ್ ಅವರನ್ನು ಕೈ ಬಿಡಲಾಗಿದೆ. ಆದರೆ ಈ ಬಾರಿ ಯುಎಇನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದಾಗ್ಯೂ ಚಹಲ್​​ರನ್ನು ಕೈ ಬಿಟ್ಟಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

3 / 5
 ಏಕೆಂದರೆ ಕಳೆದ ಬಾರಿ ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ  ಬೌಲರುಗಳಲ್ಲಿ ಚಹಲ್ ಕೂಡ ಒಬ್ಬರು. ಹಾಗೆಯೇ ಯುಎಇ ಐಪಿಎಲ್​ನ ಟಾಪ್ 5 ವಿಕೆಟ್ ಟೇಕರ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸ್ಪಿನ್ನರ್ ಎಂಬುದು ವಿಶೇಷ.  ಹೌದು, ಯುಎಇನಲ್ಲಿ ನಡೆದ ಈ ಹಿಂದಿನ ಐಪಿಎಲ್ ಟೂರ್ನಿಯಲ್ಲಿ ಚಹಲ್ 15 ಪಂದ್ಯಗಳನ್ನು ಆಡಿದ್ದರು. ಈ ವೇಳೆ 343 ಬಾಲ್​ಗಳನ್ನು ಎಸೆದಿದ್ದ ಬಲಗೈ ಸ್ಪಿನ್ನರ್ ಕೇವಲ 405 ರನ್​ಗಳನ್ನು ಮಾತ್ರ ನೀಡಿದ್ದರು.

4 / 5
ಅಂದರೆ ಪ್ರತಿ ಓವರ್​ಗೆ 7 ರನ್​ಗಳ ಸರಾಸರಿಯಲ್ಲಿ ಮಾತ್ರ ರನ್​ ಬಿಟ್ಟುಕೊಟ್ಟಿದ್ದರು. ಅಷ್ಟೇ ಅಲ್ಲದೆ 21 ವಿಕೆಟ್ ಪಡೆಯುವ ಮೂಲಕ ಆರ್​ಸಿಬಿ 4 ವರ್ಷಗಳ ಬಳಿಕ ಮತ್ತೊಮ್ಮೆ ಪ್ಲೇ ಆಫ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಯುಎಇ ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಚಹಲ್ ಅವರನ್ನೇ ಇದೀಗ ತಂಡದಿಂದ ಕೈ ಬಿಡಲಾಗಿದೆ.

5 / 5
ಅಲ್ಲದೆ ಅನಾನುಭವಿ ರಾಹುಲ್ ಚಹರ್ ಹಾಗೂ ವರುಣ್ ಚಕ್ರವರ್ತಿಯನ್ನು ಸ್ಪಿನ್ನರ್​ ಆಗಿ ಆಯ್ಕೆ ಮಾಡಲಾಗಿದೆ. ಇತ್ತ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಚಹಲ್ ಹೊರಬೀಳುತ್ತಿದ್ದಂತೆ ಇತ್ತ ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Published On - 10:42 pm, Thu, 9 September 21