ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿದ್ದ ಯುಜ್ವೇಂದ್ರ ಚಹಾಲ್ 2 ಓವರ್ಗಳಲ್ಲಿ 4 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಈ ವಿಕೆಟ್ನೊಂದಿಗೆ ಚಹಾಲ್ ಹೊಸ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೌದು, ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಬೌಲರ್ ಎಂಬ ದಾಖಲೆ ಇದೀಗ ಚಹಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಭುವನೇಶ್ವರ್ ಕುಮಾರ್ ಹೆಸರಿನಲ್ಲಿತ್ತು. ಆದರೀಗ ಭುವಿಯನ್ನು ಹಿಂದಿಕ್ಕಿ ಯುಜ್ವೇಂದ್ರ ಚಹಾಲ್ ಅಗ್ರಸ್ಥಾನಕ್ಕೇರಿದ್ದಾರೆ. ಹಾಗಿದ್ರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ 5 ಬೌಲರ್ಗಳು ಯಾರೆಲ್ಲಾ ಎಂದು ನೋಡೋಣ...
1- ಯುಜ್ವೇಂದ್ರ ಚಹಾಲ್: ಸ್ಪಿನ್ ಮೋಡಿಗಾರ ಯುಜ್ವೇಂದ್ರ ಚಹಾಲ್ ಟೀಮ್ ಇಂಡಿಯಾ ಪರ 75 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 91 ವಿಕೆಟ್ ಕಬಳಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
2- ಭುವನೇಶ್ವರ್ ಕುಮಾರ್: ಟೀಮ್ ಇಂಡಿಯಾದ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಒಟ್ಟು 87 ಪಂದ್ಯಗಳಿಂದ 90 ವಿಕೆಟ್ ಕಬಳಿಸಿದ್ದಾರೆ.
3- ರವಿಚಂದ್ರನ್ ಅಶ್ವಿನ್: ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 65 ಟಿ20 ಪಂದ್ಯಗಳಿಂದ ಒಟ್ಟು 72 ವಿಕೆಟ್ ಪಡೆದಿದ್ದಾರೆ.
4- ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ 60 ಟಿ20 ಪಂದ್ಯಗಳಿಂದ 70 ವಿಕೆಟ್ ಕಬಳಿಸಿದ್ದಾರೆ.
5- ಹಾರ್ದಿಕ್ ಪಾಂಡ್ಯ: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 86 ಟಿ20 ಪಂದ್ಯಗಳನ್ನು ಆಡಿದ್ದು, ಈ ವೇಳೆ 75 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದರು. ಈ ಮೂಲಕ ಒಟ್ಟು 65 ವಿಕೆಟ್ ಕಬಳಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.