- Kannada News Photo gallery Cricket photos Yuzvendra Chahal is celebrating his 2nd wedding anniversary with Dhanashree Verma Latest Kannada News
Yuzvendra Chahal: ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ: ಇನ್ಸ್ಟಾದಲ್ಲಿ ವಿಶ್ ಮಾಡಿದ್ದು ಹೇಗೆ ನೋಡಿ
Dhanashree Verma: ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಅವರು ಡಿಸೆಂಬರ್ 22ಕ್ಕೆ ಮದುವೆಯಾಗಿ ಎರಡು ವರ್ಷಗಳಾಗಿದ್ದು ವಿಹಾವ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
Updated on: Dec 23, 2022 | 12:58 PM

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಅವರು ಡಿಸೆಂಬರ್ 22ಕ್ಕೆ ಮದುವೆಯಾಗಿ ಎರಡು ವರ್ಷಗಳಾಗಿದ್ದು ವಿಹಾವ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಪ್ರಸ್ತುತ ಚಹಲ್ ಕ್ರಿಕೆಟ್‌ನಿಂದ ದೂರವಿದ್ದು, ಪತ್ನಿಯೊಂದಿಗೆ ರಜಾದಿನಗಳನ್ನು ಕಳೆಯುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಹಲ್ ಪತ್ನಿ ಜೊತೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿವಾಹ ವಾರ್ಷಿಕೋತ್ಸವದ ದಿನ ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶುಭಕೋರುವ ಮೂಲಕ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಅದರಲ್ಲೂ ಧನಶ್ರೀ ''ನನ್ನ ಸ್ಪಿನ್ನಿಂಗ್ ಸ್ಟಾರ್ ಜೊತೆ 730 ದಿನಗಳು ಆಗಿವೆ'' ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.

2020 ಡಿಸೆಂಬರ್ 22 ರಂದು ಈ ಜೋಡಿಯ ವಿವಾಹ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವರ ಮದುವೆಯಲ್ಲಿ ಟೀಮ್ ಇಂಡಿಯಾದ ಅನೇಕ ಸ್ಟಾರ್ ಆಟಗಾರರು ಭಾಗಿಯಾಗಿದ್ದರು.

ಈ ಜೋಡಿ ತಮ್ಮ ಮದುವೆಯ ಬಳಿಕ ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ಐಪಿಎಲ್ ಪಂದ್ಯದಲ್ಲೂ ಧನಶ್ರೀ ತನ್ನ ಪತಿಗೆ ಹುರಿದುಂಬಿಸುತ್ತಿದ್ದರು.

ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದಾರೆ. ಅವರು ತಮ್ಮ ನೃತ್ಯದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮುಂಬೈನಲ್ಲಿ ತಮ್ಮದೇ ಆದ ನೃತ್ಯ ಸಂಸ್ಥೆಯನ್ನೂ ಹೊಂದಿದ್ದಾರೆ.

ಇತ್ತೀಚೆಗಷ್ಟೆ ಚಹಲ್-ಧನಶ್ರೀ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡಿದ್ದವು. ಬಳಿಕ ಚಹಲ್ ಪತ್ನಿ ತಮ್ಮ ಇನ್ಸ್ಟಾಗ್ರಾಂ ಮೂಲಕ ನಮ್ಮ ಸಂಬಂಧ ಕುರಿತಾದ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದರು.
























