Yuzvendra Chahal: ಆನಂದ.. ಪರಮಾನಂದ… RCBಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ಚಹಲ್

| Updated By: ಝಾಹಿರ್ ಯೂಸುಫ್

Updated on: Mar 18, 2024 | 7:53 AM

WPL 2024: ವುಮೆನ್ಸ್ ಪ್ರೀಮಿಯರ್ ಲೀಗ್​ನ 2ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸುವ ಮೂಲಕ ಆರ್​ಸಿಬಿ ತಂಡವು ಟ್ರೋಫಿಯನ್ನು ಎತ್ತಿಡಿದಿದೆ. ಈ ಗೆಲುವಿನ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಯುಜ್ವೇಂದ್ರ ಚಹಲ್ ಆರ್​ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

1 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಬಗ್ಗು ಬಡಿದು RCB ಕಿರೀಟ ಮುಡಿಗೇರಿಸಿಕೊಂಡಿದೆ.

2 / 7
ಇತ್ತ ಆರ್​ಸಿಬಿ ತಂಡ ಗೆಲ್ಲುತ್ತಿದ್ದಂತೆ, ಅತ್ತ ಸಂಭ್ರಮಿಸಿದವರಲ್ಲಿ ಯುಜ್ವೇಂದ್ರ ಚಹಲ್ ಕೂಡ ಒಬ್ಬರು. ಆದರೆ ಚಹಲ್ ಅವರದ್ದು ಕೇವಲ ಸಂಭ್ರಮವಾಗಿರಲಿಲ್ಲ. ಅದು ಪರಮಾನಂದವಾಗಿತ್ತು. ಇದನ್ನು ಟೀಮ್ ಇಂಡಿಯಾ ಆಟಗಾರ ಕನ್ನಡದಲ್ಲೇ ತಿಳಿಸಿದ್ದು ವಿಶೇಷ.

3 / 7
ಹೌದು, ಆರ್​ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಯುಜ್ವೇಂದ್ರ ಚಹಲ್ ತಮ್ಮ ಎಕ್ಸ್ ಖಾತೆಯಲ್ಲಿ RCB ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಕನ್ನಡದಲ್ಲೇ "ಆನಂದ.. ಪರಮಾನಂದ.... ಪರಮಾನಂದ...." ಎಂದು ಬರೆದುಕೊಳ್ಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದರು.

4 / 7
ಇದೀಗ ಶ್ರೀಮಂಜುನಾಥ ಸಿನಿಮಾದ ಜನಪ್ರಿಯ ಹಾಡಿನ ಸಾಲುಗಳನ್ನು ಬರೆದು ಆರ್​ಸಿಬಿ ತಂಡಯನ್ನು ಕನ್ನಡದಲ್ಲೇ ಅಭಿನಂದಿಸಿದ ಯುಜ್ವೇಂದ್ರ ಚಹಲ್ ಅವರ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಮಾಜಿ ಆರ್​ಸಿಬಿ ಆಟಗಾರನ ಅಭಿಮಾನಕ್ಕೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

5 / 7
ಅಂದಹಾಗೆ ಯುಜ್ವೇಂದ್ರ ಚಹಲ್ 2014 ರಿಂದ 2021 ರವರೆಗೆ ಆರ್​ಸಿಬಿ ಪರ ಆಡಿದ್ದರು. 7 ಸೀಸನ್​ಗಳಲ್ಲಿ 50 ಪಂದ್ಯಗಳಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಚಹಲ್ ಒಟ್ಟು 64 ವಿಕೆಟ್ ಪಡೆದಿದ್ದರು. ಅಲ್ಲದೆ ಆರ್​ಸಿಬಿ ತಂಡದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು.

6 / 7
ಇದಾಗ್ಯೂ ಐಪಿಎಲ್​ 2022 ರಲ್ಲಿ ಚಹಲ್ ಅವರನ್ನು ಆರ್​ಸಿಬಿ ರಿಲೀಸ್ ಮಾಡಿತ್ತು. ಇದೀಗ ಯುಜ್ವೇಂದ್ರ ಚಹಲ್ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿರುವ ದಾಖಲೆ ಬರೆದಿದ್ದಾರೆ.

7 / 7
ಇನ್ನು ಈ ಬಾರಿಯ ಐಪಿಎಲ್ ಮೂಲಕ ಹೊಸ ದಾಖಲೆ ಬರೆಯುವ ಅವಕಾಶ ಯುಜ್ವೇಂದ್ರ ಚಹಲ್ ಮುಂದಿದೆ. ಅಂದರೆ 187 ವಿಕೆಟ್​ಗಳನ್ನು ಹೊಂದಿರುವ ಚಹಲ್ 13 ವಿಕೆಟ್ ಕಬಳಿಸಿದರೆ ಐಪಿಎಲ್​ನಲ್ಲಿ 200 ವಿಕೆಟ್ ಪೂರೈಸಿದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ಯುಜ್ವೇಂದ್ರ ಚಹಲ್ ಕಡೆಯಿಂದ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.