Zimbabwe: ಝಿಂಬಾಬ್ವೆ ಅಬ್ಬರಕ್ಕೆ ಪಾಕಿಸ್ತಾನ್ ದಾಖಲೆ ಧೂಳೀಪಟ

| Updated By: ಝಾಹಿರ್ ಯೂಸುಫ್

Updated on: Jun 26, 2023 | 11:08 PM

Zimbabwe: ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಝಿಂಬಾಬ್ವೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು

1 / 7
 ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಝಿಂಬಾಬ್ವೆ ಹೊಸ ದಾಖಲೆ ನಿರ್ಮಿಸಿದೆ. ಯುಎಸ್​ಎ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ ನಾಯಕ ಸೀನ್ ವಿಲಿಯಮ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು.

2 / 7
ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಝಿಂಬಾಬ್ವೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲಿಯಮ್ಸ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು.

3 / 7
ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದ ಸೀನ್ ವಿಲಿಯಮ್ಸ್​ ಕೇವಲ 65 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ 21 ಫೋರ್​ ಹಾಗೂ 4 ಭರ್ಜರಿ ಸಿಕ್ಸ್​ಗಳೊಂದಿಗೆ 101 ಎಸೆತಗಳಲ್ಲಿ 174 ರನ್​ ಬಾರಿಸಿದರು. ಪರಿಣಾಮ ಝಿಂಬಾಬ್ವೆ ತಂಡವು ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 408 ಕಲೆಹಾಕಿತು.

4 / 7
409 ರನ್​ಗಳ ಬೃಹತ್ ಗುರಿ ಪಡೆದ ಯುಎಸ್​ಎ ತಂಡವು 104 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಝಿಂಬಾಬ್ವೆ ತಂಡ 304 ರನ್​ಗಳ ದಾಖಲೆಯ ಜಯ ತನ್ನದಾಗಿಸಿಕೊಂಡಿದೆ.

5 / 7
ವಿಶೇಷ ಎಂದರೆ ಇದು ಏಕದಿನ ಕ್ರಿಕೆಟ್​ನಲ್ಲಿ ಝಿಂಬಾಬ್ವೆ ಕಲೆಹಾಕಿದ ಗರಿಷ್ಠ ಸ್ಕೋರ್. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 400 ಕ್ಕಿಂತ ಅಧಿಕ ಸ್ಕೋರ್​ಗಳಿಸಿದ 7ನೇ ತಂಡ ಎನಿಸಿಕೊಂಡಿದೆ.

6 / 7
ಅದರಲ್ಲೂ ಏಕದಿನ ಕ್ರಿಕೆಟ್​ನಲ್ಲಿ ಒಟ್ಟು 953 ಪಂದ್ಯಗಳನ್ನಾಡಿರುವ ಪಾಕಿಸ್ತಾನ್ ತಂಡವು ಇದುವರೆಗೆ 400 ರನ್​ ಕಲೆಹಾಕಿಲ್ಲ. ಈ ಹಿಂದೆ ಝಿಂಬಾಬ್ವೆ ವಿರುದ್ಧ 399 ರನ್​ಗಳಿಸಿದ್ದು ಪಾಕ್ ತಂಡದ ಗರಿಷ್ಠ ಸ್ಕೋರ್.

7 / 7
ಇದೀಗ ಪಾಕಿಸ್ತಾನ್ ತಂಡಕ್ಕೆ ಅಸಾಧ್ಯವಾಗಿರುವುದನ್ನು ಝಿಂಬಾಬ್ವೆ ತಂಡ ಸಾಧಿಸಿ ತೋರಿಸಿದೆ. ಅದರಲ್ಲೂ 2015 ರಲ್ಲಿ ಪಾಕ್ ತಂಡ ಪೇರಿಸಿದ್ದ 399 ರನ್​ಗಳ ಸ್ಕೋರ್​ಗಳ ದಾಖಲೆಯನ್ನು ದಾಟಿ ಝಿಂಬಾಬ್ವೆ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.