ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದವರು ಅಲ್ಲಿಂದ ನಿವೃತ್ತರಾದ ಬಳಿಕ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯನಾಗಿರುತ್ತಾರೆ. ಕೆಲವರು ತರಬೇತುದಾರರಾದರೆ, ಇನ್ನೂ ಕೆಲವರು ಅಂಪೈರ್ ಅಥವಾ ನಿರೂಪಕರಾಗುತ್ತಾರೆ. ಆದರೆ ಕ್ರೀಡೆಯನ್ನು ತೊರೆದು ಮತ್ತೊಂದು ವೃತ್ತಿಯನ್ನು ಆರಿಸಿಕೊಂಡ ಅನೇಕ ಹೆಸರುಗಳಿವೆ. ಕೆಲವು ಕ್ರಿಕೆಟಿಗರು ತಮ್ಮ ವೃತ್ತಿಜೀವನವನ್ನು ಮಧ್ಯದಲ್ಲಿ ಬಿಟ್ಟು ಬೇರೆ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಕೆಲವರು ವಕೀಲರಾದರು ಮತ್ತು ಕೆಲವರು ಪೈಲಟ್ ಆದರು. ಕ್ರಿಕೆಟ್ ಆಡಿದ ನಂತರ ಬೇರೆ ಕೆಲಸ ಮಾಡಲು ಹೋದ ಇಂತಹ ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ.