
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೈಲರ್ ಇಂದು (ಡಿಸೆಂಬರ್ 05) ಬಿಡುಗಡೆ ಆಗಿದೆ. ಟ್ರೈಲರ್ ಕುತೂಹಲ ಮೂಡಿಸುವಂತಿದ್ದು, ದರ್ಶನ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್ ನೋಡಿದವರಿಗೆ ದರ್ಶನ್ ಪಾತ್ರವನ್ನು ಸುಲಭವಾಗಿ ಊಹಿಸಲು ಸಾಧ್ಯವಾಗದು. ವಿಲನ್ ಶೇಡ್ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿದ್ದಾರೆ.

ಇದರ ಜೊತೆಗೆ ಒಳಿತಿನ ಪರವಾಗಿ ಹೋರಾಡುವ ವ್ಯಕ್ತಿಯಾಗಿಯೂ ಕೆಲವು ಪ್ರೇಂಗಳಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದು, ಒಟ್ಟಾರೆ ಅವರ ಪಾತ್ರದ ಸುಳಿವು ಸ್ಪಷ್ಟವಾಗಿ ಟ್ರೈಲರ್ನಲ್ಲಿ ಸಿಗುತ್ತಿಲ್ಲ.

‘ಡೆವಿಲ್’ ಟ್ರೈಲರ್ನಲ್ಲಿ ಆಕ್ಷನ್, ಕಾಮಿಡಿ, ರೊಮ್ಯಾನ್ಸ್, ಪಾಲಿಟಿಕ್ಸ್, ರಿವೇಂಜ್ ಇನ್ನೂ ಕೆಲವು ಅಂಶಗಳು ನೋಡಲು ಸಿಗುತ್ತವೆ. ಕುತೂಹಲ ಮೂಡಿಸಲು ಟ್ರೈಲರ್ ಸಫಲವಾಗಿದೆ.

‘ಡೆವಿಲ್’ ಸಿನಿಮಾನಲ್ಲಿ ರಚನಾ ನಾಯಕಿಯಾಗಿದ್ದು ಅವರೊಟ್ಟಿಗಿನ ಕೆಲವು ದೃಶ್ಯಗಳು ಟ್ರೈಲರ್ನಲ್ಲಿವೆ. ಅರ್ಚನಾ ಟ್ರೈಲರ್ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

‘ಡೆವಿಲ್’ ಸಿನಿಮಾದ ಟ್ರೈಲರ್ನಲ್ಲಿ ಸಾಕಷ್ಟು ಗಮನ ಸೆಳೆಯುವ ಅಂಶಗಳಿವೆ. ಸಿನಿಮಾ ಸಾಕಷ್ಟು ರಿಚ್ ಆಗಿ ಮೂಡಿ ಬಂದಿರುವುದಕ್ಕೆ ಟ್ರೈಲರ್ನಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ.

‘ಡೆವಿಲ್’ ಸಿನಿಮಾನಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡ ಅವರಿಗೂ ಮಹತ್ವದ ಪಾತ್ರ ಇದ್ದಂತಿದೆ. ಟ್ರೈಲರ್ನಲ್ಲಿಯೂ ಅವರ ಪಾತ್ರ ಕೆಲವು ಬಾರಿ ಕಾಣಿಸಿಕೊಳ್ಳುತ್ತದೆ.

ಪ್ರಸ್ತುತ ಬಿಗ್ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಸಹ ‘ಡೆವಿಲ್’ ಸಿನಿಮಾನಲ್ಲಿ ನಟಿಸಿದ್ದು, ಅವರ ಒಂದು ದೃಶ್ಯದ ತುಣುಕನ್ನು ಟ್ರೈಲರ್ನಲ್ಲಿ ಸೇರಿಸಲಾಗಿದೆ.
Published On - 11:44 am, Fri, 5 December 25