
ನಟ ದರ್ಶನ್, ಯುವರಾಜ್ ಕುಮಾರ್ ಸಿನಿಮಾ ಸೆಟ್ಗೆ ಇಂದು (ಸೆಪ್ಟೆಂಬರ್ 1) ಭೇಟಿ ನೀಡಿದ್ದರು.

ಯುವರಾಜ್ ಕುಮಾರ್ ನಟನೆಯ 'ಯುವ' ಸಿನಿಮಾದ ಚಿತ್ರೀಕರಣ ಎಚ್ಎಂಟಿ ಫ್ಯಾಕ್ಟರಿಯಲ್ಲಿ ನಡೆಯುತ್ತಿದೆ.

ಹೊಸಕೋಟೆ ಘಟನೆ ಬಳಿಕ ದೊಡ್ಮನೆ ಹಾಗೂ ದರ್ಶನ್ ನಡುವೆ ಕಂದಕ ಏರ್ಪಟ್ಟಿತ್ತು, ಆ ಕಾರಣಕ್ಕೆ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ದರ್ಶನ್ ಹೊಸಪೇಟೆ ಪ್ರಕರಣದಲ್ಲಿ ಅಪ್ಪು ಅಭಿಮಾನಿಗಳ ವಿರುದ್ಧ ದೋಷಾರೋಪಣೆ ಕೇಳಿ ಬಂದಿದ್ದಾಗ ಯುವ ಅಭಿಮಾನಿಗಳ ಪರ ನಿಂತಿದ್ದರು.

ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಆ ಸಂದರ್ಭದಲ್ಲಿ ನಟ ಯುವ ರಾಜ್ಕುಮಾರ್ ಟ್ವೀಟ್ ಮಾಡಿದ್ದರು.

ಆದರೆ ಈಗ ಹಳೆಯದ್ದನ್ನು ಮರೆತು ಇಬ್ಬರೂ ಒಂದಾಗಿದ್ದಾರೆ. ಇಬ್ಬರು ಪರಸ್ಪರ ಕಹಿ ಮರೆತು ಆಲಿಂಗಿಸಿಕೊಂಡಿದ್ದಾರೆ.

ಯುವ ರಾಜ್ಕುಮಾರ್ 'ಯುವ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ, ದರ್ಶನ್ 'ಕಾಟೇರ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.