ಮೈಸೂರು ಅರಮನೆಯಲ್ಲಿ ಸರಳ ದಸರಾ: ಆಯುಧ, ಗಜಪಡೆ ಮತ್ತು ಫಿರಂಗಿ ಗಾಡಿಗಳಿಗೆ ಪೂಜೆ

ಮೈಸೂರು ಅರಮನೆಯಲ್ಲಿ ಸರಳ ದಸರಾ: ಆಯುಧ, ಗಜಪಡೆ ಮತ್ತು ಫಿರಂಗಿ ಗಾಡಿಗಳಿಗೆ ಪೂಜೆ

ಮೈಸೂರು: ಆಯುಧ ಪೂಜೆ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿದೆ. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ್ರು. ನಂತರ 10.50ರಿಂದ 11.15 ಶುಭಲಗ್ನದಲ್ಲಿ ಸವಾರಿ ತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ನೆರವೇರಿಸಿದ್ರು. ಅರಮನೆ ಒಳಗೆ ಸಂಪೂರ್ಣ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. 35 ಮಂದಿ ಸಿಬ್ಬಂದಿ ಭಾಗಿಯಾಗುತ್ತಿದ್ದ ಕಾರ್ಯಕ್ರಮದಲ್ಲಿ ಕೇವಲ 7 ರಿಂದ 8 […]

Ayesha Banu

|

Nov 23, 2020 | 12:39 PM

ಮೈಸೂರು: ಆಯುಧ ಪೂಜೆ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿದೆ. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ ಅರಮನೆಯ ಕಲ್ಯಾಣಮಂಟಪದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಿದ್ರು.

ನಂತರ 10.50ರಿಂದ 11.15 ಶುಭಲಗ್ನದಲ್ಲಿ ಸವಾರಿ ತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ನೆರವೇರಿಸಿದ್ರು. ಅರಮನೆ ಒಳಗೆ ಸಂಪೂರ್ಣ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ. 35 ಮಂದಿ ಸಿಬ್ಬಂದಿ ಭಾಗಿಯಾಗುತ್ತಿದ್ದ ಕಾರ್ಯಕ್ರಮದಲ್ಲಿ ಕೇವಲ 7 ರಿಂದ 8 ಮಂದಿ ಭಾಗಿಯಾಗಿದ್ದಾರೆ.

ದಸರಾ ಗಜಪಡೆಗೆ ಪೂಜೆ: ಅರಮನೆ ಆವರಣದಲ್ಲಿ ಅರ್ಜುನ, ವಿಜಯ, ಕಾವೇರಿ ದಸರಾ ಗಜಪಡೆಗೆ ಅರಿಸಿನ, ಕುಂಕುಮ ಮತ್ತು ಹೂವು ಹಾಕಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಗಿಯಾಗಿದ್ದರು. ಇನ್ನು ಪೊಲೀಸ್ ಇಲಾಖೆಯಿಂದ ಫಿರಂಗಿ ಗಾಡಿಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿದೆ.

Follow us on

Related Stories

Most Read Stories

Click on your DTH Provider to Add TV9 Kannada