Dates Benefits: ಚಳಿಗಾಲದಲ್ಲಿ ಒಣ ಖರ್ಜೂರ ಸೇವನೆಯ ಪ್ರಯೋಜನಗಳು ತಿಳಿಯಿರಿ
TV9 Web | Updated By: ಗಂಗಾಧರ ಬ. ಸಾಬೋಜಿ
Updated on:
Dec 26, 2022 | 10:30 PM
ಡ್ರೈ ಪ್ರೊಟ್ಸ್ನಲ್ಲಿ ಹಲವಾರು ಪೋಷಕಾಂಶಗಳಿವೆ. ಇದು ನಮ್ಮನ್ನು ಆರೋಗ್ಯವಾಗಿರಿಸವುದು ಮಾತ್ರವಲ್ಲದೆ, ದಿನವಿಡೀ ಶಕ್ತಿಯನ್ನು ತುಂಬುತ್ತದೆ. ಖರ್ಜೂರವು ಅಂತಹ ಹಣ್ಣುಗಳಲ್ಲಿ ಒಂದಾಗಿದೆ.
1 / 5
ನಮ್ಮ ಆರೋಗ್ಯದ ಮೇಲೆ ಒಣ ಹಣ್ಣುಗಳು ವಿಭಿನ್ನ ಪ್ರಾಮುಖ್ಯತೆಯನ್ನು ಬೀರಿತ್ತವೆ. ಡ್ರೈ ಪ್ರೊಟ್ಸ್ನಲ್ಲಿ ಹಲವಾರು
ಪೋಷಕಾಂಶಗಳಿವೆ. ಇದು ನಮ್ಮನ್ನು ಆರೋಗ್ಯವಾಗಿರಿಸವುದು ಮಾತ್ರವಲ್ಲದೆ, ದಿನವಿಡೀ ಶಕ್ತಿಯನ್ನು ತುಂಬುತ್ತದೆ.
ಖರ್ಜೂರವು ಅಂತಹ ಹಣ್ಣುಗಳಲ್ಲಿ ಒಂದಾಗಿದೆ.
2 / 5
ಚಳಿಗಾಲದಲ್ಲಿ ಹೃದ್ರೋಗ ಸಮಸ್ಯೆ ಉಂಟಾಗು ಸಾಧ್ಯತೆ ಹೆಚ್ಚಿರುತ್ತದೆ, ಆದ್ದರಿಂದ ಖಂಡಿತವಾಗಿ ಅವುಗಳನ್ನು
ನಮ್ಮ ಆಹಾರದ ಭಾಗವಾಗಿಸಿಕೊಳ್ಳಬಹುದು, ಖರ್ಜೂರದಲ್ಲಿರುವ ಪೊಟ್ಯಾಶಿಯಂ ಹೃದಯಾಘಾತದ
ಅಪಾಯವನ್ನು ಕಡಿಮೆ ಮಾಡುತ್ತದೆ.
3 / 5
ಖರ್ಜೂರವನ್ನು ತಿನ್ನುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ, ಏಕೆಂದರೆ ಇದರಲ್ಲಿರುವ ಫೈಬರ್
ಮಲವನ್ನು ಭಾರವಾಗಿಸುತ್ತದೆ ಮತ್ತು ದೇಹದಿಂದ ಹೊರಹಾಕುತ್ತದೆ.
4 / 5
ಖರ್ಜೂರದಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ ರಾಮಬಾಣ
ಎಂದೇ ಹೇಳಬಹುದು. ನಿಯಮಿತವಾಗಿ ಖರ್ಜೂರವನ್ನು ಸೇವಿಸುವುದರಿಂದ
ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಬಹುದು.
5 / 5
ಗರ್ಭಿಣಿಯರಿಗೆ ಖರ್ಜೂರ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಕಬ್ಬಿಣವು ತಾಯಿ ಮತ್ತು ಮಗುವಿಗೆ
ತುಂಬಾ ಉಪಯುಕ್ತವಾಗಿದೆ. ಖರ್ಜೂರದಲ್ಲಿರುವ ಪೋಷಕಾಂಶಗಳು ಗರ್ಭಾಶಯದ
ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.