Updated on: Jun 02, 2023 | 2:11 PM
ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿರುವ ರಕ್ಕಸಕೊಪ್ಪ ಜಲಾಶಯ.
ಇದೀಗ ದಿನೇದಿನೇ ಬೆಳಗಾವಿಯ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟ ಕಡಿಮೆಯಾಗುತ್ತಿದೆ.
ಈ ಹಿನ್ನೆಲೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ಹೀಗಾಗಿ ರಕ್ಕಸಕೊಪ್ಪ ಜಲಾಶಯಕ್ಕೆ ಮೇಯರ್, ಉಪಮೇಯರ್ ಭೇಟಿ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ್ ಅವರಿಗೆ ಕೆಯುಐಡಿಎಫ್‌ಸಿ ಅಧೀಕ್ಷಕ ಇಂಜಿನಿಯರ್ ಅಶೋಕ್ ಬರ್ಕುಳೆ ಸೇರಿ ಹಲವರು ಸಾಥ್ ನೀಡಿದರು.
ರಕ್ಕಸಕೊಪ್ಪ ಜಲಾಶಯಕ್ಕೆ 68 ಎಂಎಲ್‌ಡಿ ನೀರು ಸರಬರಾಜು ಸಾಮರ್ಥ್ಯದೆ. ಹೀಗಾಗಿ ರಕ್ಕಸಕೊಪ್ಪ ಜಲಾಶಯದಿಂದ 55 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿತ್ತು.
ನೀರಿನ ಮಟ್ಟ ಕಡಿಮೆ ಆದ ಕಾರಣ 30 ಎಂಎಲ್‌ಡಿ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿದೆ.
ಇದರಿಂದ ನೀರು ಸರಬರಾಜು ವ್ಯತ್ಯಯ ಆಗುತ್ತಿದ್ದು ಜನರು ಸಹಕರಿಸಬೇಕು ಎಂದು ಕೆಯುಐಡಿಎಫ್‌ಸಿ ಅಧೀಕ್ಷಕ ಇಂಜಿನಿಯರ್ ಅಶೋಕ್ ಬರ್ಕುಳೆ ಹೇಳಿದ್ದಾರೆ.