
ದೀಪಿಕಾ ದಾಸ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಫಿನಾಲೆ ತಲುಪಿದ್ದರು. ಎರಡನೇ ರನ್ನರ್ ಅಪ್ ಆಗಿ ದೊಡ್ಮನೆಯಿಂದ ಔಟ್ ಆಗಿದ್ದರು. ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ.

ದೀಪಿಕಾ ದಾಸ್ ಅವರು ದೊಡ್ಮನೆಯಿಂದ ಹೊರಬಂದ ನಂತರದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಮೊದಲ ಬಾರಿಗೆ ಫೋಟೋ ಹಂಚಿಕೊಂಡಿದ್ದಾರೆ.

ಅಪಾರ್ಟ್ಮೆಂಟ್ ಹೊರಭಾಗದಲ್ಲಿ ನಿಂತು ಅವರು ಹಾಯ್ ಮಾಡುತ್ತಿದ್ದಾರೆ. ‘ನಾನು ಮತ್ತೆ ಮರಳಿದ್ದೇನೆ. ಎಲ್ಲರೂ ಹೇಗಿದ್ದೀರಿ’ ಎಂದು ಕೇಳಿದ್ದಾರೆ ದೀಪಿಕಾ ದಾಸ್.

ಇದಕ್ಕೆ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ‘ನೀವು ಗೆಲ್ಲಬೇಕಿತ್ತು. ಎರಡನೇ ರನ್ನರ್ ಅಪ್ ಆಗಿದ್ದೀರಿ. ಆ ಖುಷಿ ಇದೆ’ ಎಂದು ಅನೇಕರು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಏಳನೇ ಸೀಸನ್ನಲ್ಲಿ ದೀಪಿಕಾ ದಾಸ್ ಅವರು ಸ್ಪರ್ಧಿ ಆಗಿ ಎಂಟ್ರಿ ಕೊಟ್ಟಿದ್ದರು. ಸೀಸನ್ 9ರಲ್ಲಿ ಅವರು ಮತ್ತೆ ದೊಡ್ಮನೆಗೆ ಕಾಲಿಟ್ಟರು.
Published On - 9:01 am, Wed, 4 January 23