
ದೀಪಿಕಾ ದಾಸ್ ಅವರು ಸಖತ್ ಕ್ಯೂಟ್ ಆಗಿ ಪೋಸ್ ನೀಡುತ್ತಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಜೀನ್ಸ್ ಶಾರ್ಟ್ಸ್ ಹಾಕಿರುವ ದೀಪಿಕಾ ನೀಲಿ ಬಣ್ಣದ ಕ್ರಾಪ್ ಟಾಪ್ ತೊಟ್ಟಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಜಗತ್ತನ್ನು ಬದಲಿಸಲು ನಿಮ್ಮ ನಗು ಬಳಸಿ. ಜಗತ್ತು ನಿಮ್ಮ ನಗುವನ್ನು ಬದಲಿಸಲು ಅವಕಾಶ ನೀಡಬೇಡಿ’ ಎಂದು ಅವರು ಬರೆದುಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ರಿಂದ ದೀಪಿಕಾ ದಾಸ್ ಖ್ಯಾತಿ ಹೆಚ್ಚಿತು. ಅವರು ಹೊಸ ಪ್ರಾಜೆಕ್ಟ್ ಘೋಷಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ದೀಪಿಕಾ ದಾಸ್ ಅವರು ಕಿರುತೆರೆ ಮೂಲಕ ಜನಪ್ರಿಯತೆ ಪಡೆದರು. ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದಾರೆ.