ಇದು ಧಾರವಾಡ ನಗರದ ಸಂಪಿಗೆ ನಗರ ಬಡಾವಣೆಯಲ್ಲಿರುವ ಬಸವರೆಡ್ಡಿ ಇಂಗ್ಲಿಷ್ ಮೀಡಿಯಂ ಶಾಲೆ. ಈ ಶಾಲೆಯಲ್ಲಿ ಇಂದು ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಏಕೆಂದರೆ ವಿಶ್ವ ವಿಜ್ಞಾನ ದಿನ ಅಂಗವಾಗಿ ಶಾಲೆಯಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಇನ್ನು ಈ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳೇ ತಯಾರಿಸಿದ್ದ, ವಿಜ್ಞಾನಕ್ಕೆ ಸಂಬಂಧಿಸಿದ ಬಗೆ ಬಗೆಯ ಯಂತ್ರಗಳನ್ನು ಪ್ರದರ್ಶಿಸಲಾಯಿತು.
ವಿಜ್ಞಾನ ಪ್ರಯೋಗದ ಬಗ್ಗೆ ಸಣ್ಣ ಸಣ್ಣ ಮಕ್ಕಳು ವಿವರವಾಗಿ ಹೇಳುವುದನ್ನು ನೋಡಿದರೆ ಅಚ್ಚರಿಯಾಗುವಂತಿತ್ತು. ಇದರಲ್ಲಿ ಪರಿಸರ, ಸೋಲಾರ್, ನೀರು, ಮಣ್ಣು, ಪ್ರಾಣಿ, ಪಕ್ಷಿಗಳ ಬಗ್ಗೆಯೂ ಮಕ್ಕಳು ವಿವರವಾಗಿ ಪ್ರಾತ್ಯಕ್ಷಿಕೆ ನೀಡಿದರು.
ಇಂದಿನ ದಿನಗಳಲ್ಲಿ ವಿಜ್ಞಾನದ ಅವಶ್ಯಕತೆ ಬಗ್ಗೆಯೂ ಚಿಕ್ಕ ಮಕ್ಕಳು ಅದ್ಭುತವಾಗಿ ತಿಳಿದುಕೊಂಡಿದ್ದು ಅಚ್ಚರಿ ಮೂಡಿಸುವಂತಿತ್ತು. ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದಿದ್ದ ಮಕ್ಕಳು ಇಡೀ ವಿಜ್ಞಾನ ಪ್ರದರ್ಶನದುದ್ದಕ್ಕೂ ಓಡಾಡಿಕೊಂಡು ಸಂಭ್ರಮ ಹೆಚ್ಚಿಸಿದರು.
ಸುಮಾರು ಐವತ್ತಕ್ಕೂ ಹೆಚ್ಚು ಬಗೆ ಬಗೆಯ ಪ್ರದರ್ಶನ ಕಂಡು ಬಂತು. ಶಾಲಾ ಪಠ್ಯದ ವಿಷಯದೊಂದಿಗೆ ದಿನನಿತ್ಯದ ನಮ್ಮ ಬದುಕಿನಲ್ಲಿ ಅವಶ್ಯಕವಾಗಿ ಬೇಕಾಗಿರೋ ಉಪಕರಣಗಳ ಬಗ್ಗೆಯೂ ಪ್ರದರ್ಶನದಲ್ಲಿ ತೋರಿಸಲಾಯಿತು.
6ಒಟ್ಟಿನಲ್ಲಿ ವಿಜ್ಞಾನ ದಿನದ ಅಂಗವಾಗಿ ನಡರದ ಈ ಪ್ರದರ್ಶನ ನಿಜಕ್ಕೂ ಅಲ್ಲೊಂದು ಹೊಸ ಲೋಕವನ್ನೇ ಸೃಷ್ಟಿಸಿತ್ತು ಅಂದರೆ ತಪ್ಪಾಗಲಾರದು.
Published On - 1:20 pm, Wed, 1 March 23