ಐಶ್ವರ್ಯಾ ಶಂಕರ್​-ಕ್ರಿಕೆಟಿಗ ರೋಹಿತ್​ ವಿವಾಹ; ಇಲ್ಲಿವೆ ಫೋಟೋಗಳು

Edited By:

Updated on: Oct 21, 2021 | 1:48 PM

ಐಶ್ವರ್ಯಾ ಹಾಗೂ ರೋಹಿತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಎಲ್ಲರೂ ಶುಭಾಶಯಗಳ ಮಳೆ ಸುರಿಸಿದ್ದಾರೆ.

1 / 4
ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಎಸ್. ಶಂಕರ್ ಮಗಳು ಐಶ್ವರ್ಯಾ ಅವರು ಕ್ರಿಕೆಟಿಗ ರೋಹಿತ್ ದಾಮೋದರನ್ ಜತೆ ಇಂದು (ಜೂನ್ 27) ಹಸೆಮಣೆ ಎರಿದ್ದಾರೆ. ತಮಿಳುನಾಡು ರಾಜಕಾರಣಿಗಳು ಮದುವೆಗೆ ಆಗಮಿಸಿ ನವ ದಂಪಯಿಯನ್ನು ಹರಸಿದ್ದಾರೆ.

2 / 4
ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ನೆರವೇರಿದೆ. ಕೊವಿಡ್ ಕಾರಣದಿಂದ ಮದುವೆಗೆ ಆಪ್ತರಿಗೆ ಮಾತ್ರ ಆಮಂತ್ರಣ ಇತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಮಗ, ರಾಜಕಾರಣಿ ಉದಯಾನಿಧಿ ಸ್ಟಾಲಿನ್, ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮಾ ಸುಬ್ರಮಣಿಯಮ್ ಕೂಡ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

3 / 4
ಐಶ್ವರ್ಯಾ ಹಾಗೂ ರೋಹಿತ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವ ದಂಪತಿಗೆ ಎಲ್ಲರೂ ಶುಭಾಶಯಗಳ ಮಳೆ ಸುರಿಸಿದ್ದಾರೆ. ಕೊವಿಡ್ ಸಂಖ್ಯೆಗಳು ಕಡಿಮೆ ಆದ ನಂತರದಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಸಲು ನಿರ್ದೇಶಕ ಶಂಕರ್ ನಿರ್ಧರಿಸಿದ್ದಾರೆ. ಈ ವೇಳೆ ಫಿಲ್ಮ್ ಇಂಡಸ್ಟ್ರಿಯ ಸಾಕಷ್ಟು ಜನರಿಗೆ ಆಮಂತ್ರಣ ಸಿಗುವ ಸಾಧ್ಯತೆ ಇದೆ.

4 / 4
ರೋಹಿತ್ ದಾಮೋದರನ್ ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್ಪಿಎಲ್) ಆಟಗಾರ. ರೋಹಿತ್ ತಂದೆ ದಾಮೋದರನ್ ಉದ್ಯಮಿ. ಟಿಎನ್ಪಿಎಕ್ನಲ್ಲಿರುವ ‘ಮಧುರೈ ಪ್ಯಾಂಥರ್ಸ್’ ಫ್ರಾಂಚೈಸಿ ಒಡೆತನವನ್ನು ದಾಮೋದರನ್ ಹೊಂದಿದ್ದಾರೆ. ರೋಹಿತ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆ.

Published On - 5:16 pm, Sun, 27 June 21