
'ಕಾಂತಾರ' ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಚಿತ್ರ. ನಟ ರಿಷಬ್ ಶೆಟ್ಟಿ ಅವರು 'ಕಾಂತಾರ' ಚಿತ್ರದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಅವರ ಡಿಮ್ಯಾಂಡ್ ಕೂಡ ಹೆಚ್ಚಿದೆ.

ಸದ್ಯ ರಿಷಬ್ ಶೆಟ್ಟಿ ಅವರು 'ಫಿಲ್ಮ್ ಕಂಪಾನಿಯನ್' ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಸಿದ್ದಾರೆ.

ಈ ವಿಚಾರವನ್ನು ನಟ ರಿಷಬ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಅದ್ಭುತ ಸಂಜೆ, ಅದ್ಭುತ ಜನ ಮತ್ತು ಅದ್ಭುತ ಚರ್ಚೆ' ಎಂದು ಬರೆದುಕೊಂಡಿದ್ದಾರೆ.

'ಫಿಲ್ಮ್ ಕಂಪಾನಿಯನ್' ಕಾರ್ಯಕ್ರಮದಲ್ಲಿ ಅನಿಲ್ ಕಪೂರ್, ವರುಣ್ ಧವನ್, ಆಯುಷ್ಮಾನ್ ಖುರಾನಾ, ಜಾನ್ವಿ ಕಪೂರ್, ರಾಜ್‌ಕುಮಾರ್ ರಾವ್, ವಿದ್ಯಾ ಬಾಲನ್ ಸೇರಿ ಹಲವರು ಫೋಟೋಗೆ ಪೋಸ್ ನೀಡಿದ್ದಾರೆ.

ಬಾಲಿವುಡ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಾರೆ ಅನ್ನೋ ಅನುಮಾನಗಳು ಕೂಡ ಶುರುವಾಗಿವೆ.