ಜೋಡಿ ಮೇಲೆ ಬಂದು ದೀಪಾವಳಿ ವಿಶ್ ಮಾಡಿದ ದಿವ್ಯಾ-ಅರವಿಂದ್
ದೇಶದೆಲ್ಲೆಡೆ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತಿದೆ. ದಿವ್ಯಾ ಉರುಡುಗ ಕೂಡ ಬೆಳಕಿನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ಅವರು ಹಾಗೂ ಅರವಿಂದ್ ಕೆಪಿ ಒಟ್ಟಾಗಿ ನಿಂತು ಪೋಸ್ ಕೊಟ್ಟು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
1 / 5
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದರು. ಇವರ ಮಧ್ಯೆ ಪ್ರೀತಿ ಹುಟ್ಟಿದ್ದು ಇದೇ ವೇದಿಕೆ ಮೇಲೆ. ಈಗ ಇಬ್ಬರೂ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಇವರು ದೀಪಾವಳಿ ವಿಶ್ ಮಾಡಿದ್ದಾರೆ.
2 / 5
ದೇಶದೆಲ್ಲೆಡೆ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತಿದೆ. ದಿವ್ಯಾ ಉರುಡುಗ ಕೂಡ ಬೆಳಕಿನ ಹಬ್ಬದ ಆಚರಣೆ ಮಾಡುತ್ತಿದ್ದಾರೆ. ಅವರು ಹಾಗೂ ಅರವಿಂದ್ ಕೆಪಿ ಒಟ್ಟಾಗಿ ನಿಂತು ಪೋಸ್ ಕೊಟ್ಟು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
3 / 5
ದಿವ್ಯಾ ಉರುಡುಗ ಅವರು ಹಿರಿತೆರೆಯಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಆ ಬಳಿಕ ಬಿಗ್ ಬಾಸ್ಗೆ ಅವರು ಎಂಟ್ರಿ ಕೊಟ್ಟರು. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಈಗ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.
4 / 5
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ನಿನಗಾಗಿ’ ಧಾರಾವಾಹಿಯಲ್ಲಿ ದಿವ್ಯಾ ಉರುಡುಗ ಅವರು ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿ ದೊಡ್ಡ ಉತ್ತಮ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ನಟಿಯ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. .
5 / 5
ದಿವ್ಯಾ ಹಾಗೂ ಅರವಿಂದ್ ಆದಷ್ಟು ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಇವರು ಒಟ್ಟಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ ಅನ್ನೋದು ವಿಶೇಷ.