ದೀಪಾವಳಿ ಹಬ್ಬಕ್ಕೆ ಸುಂದರವಾದ ರಂಗೋಲಿ ಡಿಸೈನ್ಸ್ಗಳು. ದೀಪಾವಳಿ ಹಬ್ಬದ ಶುಭಾಶಯವನ್ನು ರಂಗೋಲಿಯಲ್ಲಿ ಚಿತ್ರಿಸುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿ.
ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಲಾಗುತ್ತದೆ. ಬಣ್ಣದ ಬಣ್ಣದ ರಂಗೋಲಿ ಹುಡಿಯೊಂದಿಗೆ ಚಿತ್ರಿಸಿದ ಚಿತ್ರಕ್ಕೆ ದೀಪಗಳನ್ನಿಟ್ಟು ಅಲಂಕರಿಸಿ. ಇದು ನಿಮ್ಮ ಮನೆಯಲ್ಲಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತದೆ ಜೊತೆಗೆ ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಮನೆಯಲ್ಲಿ ನೀವು ಚಿತ್ರಿಸಿದ ರಂಗೋಲಿಯೇ ಎದ್ದು ಕಾಣುವಂತಹ ರಂಗೋಲಿ ನಿಮ್ಮ ಆಯ್ಕೆಯಾಗಿರಲಿ.
ಕೇವಲ ಎರಡು ಮೂರು ಬಣ್ಣಗಳನ್ನು ಬಳಸಿ ಸುಂದರವಾದ ರಂಗೋಲಿಯನ್ನು ಬಿಡಿಸಬಹುದು. ಚಿತ್ರಿಸಲು ಸುಲಭವಾದ ಮತ್ತು ನೋಡಲು ಆಕರ್ಷಕವಾಗಿ ಕಾಣಿಸುವ ಬಣ್ಣದ ಆಯ್ಕೆಗಳ ಜೊತೆಗೆ ರಂಗೋಲಿಯ ಆಯ್ಕೆಯೂ ಮೆಚ್ಚುವಂತಿರಲಿ.
ರಂಗೋಲಿ ಚಿತ್ರಿಸಿದ ಬಳಿಕ ಬಣ್ಣಗಳನ್ನು ತುಂಬಿ. ಆಗ ನೀವು ಚಿತ್ರಿಸಿದ ರಂಗೋಲಿ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ. ಸುತ್ತಲೂ ದೀಪಗಳನ್ನು ಬೆಳಗಿಸುವ ಮೂಲಕ ರಂಗೋಲಿಯ ಮೆರುಗು ಜೊತೆಗೆ ಮನೆಯಲ್ಲಿ ಹಬ್ಬದ ಮೆರುಗು ಹೆಚ್ಚಾಗುತ್ತದೆ. ನೋಡಲು ಅತ್ಯಂತ ಆಕರ್ಷಕವಾಗಿ ಕಾಣಿಸುತ್ತದೆ
ದೀಪಾವಳಿ ಹಬ್ಬ ಇನ್ನೇನು ಎದುರಿಗಿದೆ. ಸಂತೋಷದಿಂದ ಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ಜೊತೆಗೆ ಸಮೃದ್ಧಿ ಯಾವಾಗಲೂ ಇರಲಿ ಎಂದು ಬೇಡಿಕೊಳ್ಳುತ್ತಾ ಮನೆಯವರೆಲ್ಲಾ ಸೇರಿ ದೀಪ ಬೆಳಗುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯ ಮುಂದೆ ರಂಗೋಲಿ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಿರುವಾಗ ಸಿಂಪಲ್ ಡಿಸೈನ್ ಗಳಿರುವ ರಂಗೋಲಿಯನ್ನು ಆಯ್ದುಕೊಳ್ಳಿ.
ನವಿಲಿನ ಆಕಾರದ ಸುಂದರವಾದ ರಂಗೋಲಿ ಬಹಳ ಆಕರ್ಷಕವಾಗಿ ಕಾಣಿಸುತ್ತದೆ. ನವಿಲಿಗೆ ಹೋಲುವ ಬಣ್ಣದ ಆಯ್ಕೆ ನಿಮ್ಮದಾಗಿರಲಿ. ಜೊತೆಗೆ ದೀಪಗಳನ್ನು ರಂಗೋಲಿಯ ಸುತ್ತ ಇಡುವ ಮೂಲಕ ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ.