
ಈ ಬಾರಿಯ ದೀಪಾವಳಿ ಹಬ್ಬದಂದು ನಿಮ್ಮ ಮನೆಯ ಎದುರು ಸುಂದರವಾದ ರಂಗೋಲಿಯನ್ನು ಬಿಡಿಸಿ. ಬಣ್ಣ ಬಣ್ಣದ ಕಲರ್ ಫುಲ್ ರಂಗೋಲಿ ನಿಮ್ಮ ಮನೆಯ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇವರ ಮುಂದೆಯೂ ಚಿಕ್ಕದಾದ ರಂಗೋಲಿ ಇರಲಿ. ಸಾಂಪ್ರದಾಯಿಕವಾಗಿಯೂ ಜೊತೆಗೆ ಮನೆಯ ಅಲಂಕಾರದ ದೃಷ್ಟಿಯಿಂದಲೂ ರಂಗೋಲಿ ಬಿಡಿಸುವುದು ಹಬ್ಬದ ಸಂಭ್ರಮ ಹೆಚ್ಚಿಸಲು ಒಳ್ಳೆಯ ಮಾರ್ಗ. ರಂಗೋಲಿಯ ಸುತ್ತಲೂ ದೀಪಗಳನ್ನು ಇಡುವ ಮೂಲಕ ಅಲಂಕಾರವನ್ನು ಇನ್ನಷ್ಟು ಸುಂದರಗೊಳಿಸಿ.

ನೀವು ಹೂವಿನಿಂದಲೂ ರಂಗೋಲಿ ಚಿತ್ರವನ್ನು ಬಿಡಿಸಬಹುದು. ಇದು ಒಂದು ರೀತಿಯ ವಿಭಿನ್ನ ಶೈಲಿ. ಹಬ್ಬದಲ್ಲಿ ಹೂವು ಶ್ರೇಷ್ಠವೂ ಹೌದು. ಹಾಗಾಗಿ ಮನೆಯಲ್ಲಿ ವಿವಿಧ ಬಣ್ಣದ ಹೂವಿನ ದಳಗಳು ಜೊತೆಗೆ ಚಂದದ ಹೂವಿನ ಸಿಂಗಾರದೊಡನೆ ಮನೆಯನ್ನು ಅಲಂಕರಿಸಿ.

ಮನೆಯ ಎದುರು ಲೈಟಿಂಗ್ ವ್ಯವಸ್ಥೆ ಮಾಡಬಹುದು. ಕತ್ತಲೆಯಲ್ಲಿ ಹೊಳೆಯುವ ಬಣ್ಣದ ಲೈಟ್ಸ್ಗಳು ನೋಡಲು ಸುಂದರವಾಗಿ ಕಾಣುತ್ತದೆ. ಜೊತೆಗೆ ಬಿದುರಿನ ಎಳೆಗಳಿಂದ ಚೆಂಡುಗಳನ್ನು ತಯಾರಿಸಿ ಅದರೊಳಗೆ ಚಿಕ್ಕ ಬಲ್ಬ್ ಅಳವಡಿಸಿ ಲೈಟ್ ತಯಾರಿಸಬಹುದು. ಇದು ಸುಂದರವಾಗಿ ಕಾಣಿಸುವುದರ ಜೊತೆಗೆ ಈ ಬಾರಿಯ ದೀಪಾವಳಿಗೆ ಹೊಸತನವನ್ನು ತಂದುಕೊಡುತ್ತದೆ. ನೋಡಲು ಸುಂದರವಾಗಿ ಕಾಣಿಸುವ ಲೈಟಿಂಗ್ಸ್ ನಿಮ್ಮ ಮುಖದಲ್ಲಿ ನಗುವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬಟ್ಟಲಿನಲ್ಲಿ ನೀರು ತುಂಬಿಸಿ ಹೂವಿನ ಎಸಲುಗಳಿಂದ ಅಲಂಕರಿಸಿ. ಆ ಬಟ್ಟಲಿನ ಮೇಲೆ ದೀಪವನ್ನು ಇರಿಸಿ. ಇದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಮನೆಯ ಹಾಲ್ನಲ್ಲಿ ಅಥವಾ ಜಗುಲಿಯಲ್ಲಿ ಇರಿಸುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ತಯಾರಿಸಲು ತುಂಬಾ ಸರಳ ಜೊತೆಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

ಮನೆಯ ಎದುರು ಚಿಕ್ಕಿ ಗಿಡವಿದ್ದರೆ ಆ ಮರಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಬಹುದು. ಮರದ ಕೊಂಬೆಯ ಸುತ್ತಲೂ ಲೈಟ್ಸ್ಗಳು ಅದರಲ್ಲಿಯೂ ಮುಖ್ಯವಾಗಿ ಬಣ್ಣ ಬಣ್ಣದ ಲೈಟಿಂಗ್ಸ್ಗಳು ಹೆಚ್ಚು ಸುಂದರವಾಗಿ ಕಾಣಿಸುತ್ತದೆ. ಈ ರೀತಿಯಾಗಿ ಹೊಸ ಹೊಸ ಬಗೆಯ ಐಡಿಯಾಗಳು ನಿಮ್ಮ ಮನೆಯ ಸಂಭ್ರಮವನ್ನು ಜೊತೆಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ.