ಕೆಪಿಸಿಸಿ ಅಧ್ಯಕ್ಷ​ ಬಂದ ಹೆಲಿಕಾಪ್ಟರ್ ಇಂಚಿಂಚೂ ಪರಿಶೀಲಿಸಿದ ಅಧಿಕಾರಿಗಳು, ಫೋಟೋಗಳನ್ನ ಹರಿಬಿಟ್ಟ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

Updated on: Apr 23, 2023 | 5:51 PM

ನಿನ್ನೆ(ಏಪ್ರಿಲ್ 23) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಧರ್ಮಸ್ಥಳಕ್ಕೆ ಕುಟುಂಬ ಸಹಿತರಾಗಿ ಭೇಟಿ ನೀಡಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಡಿಕೆ ಶಿವಕುಮಾರ್​ ಕುಟುಂಬಸ್ಥರು ಆಗಮಿಸಿದ್ದ ಹೆಲಿಕಾಪ್ಟರ್​ ತಪಾಸಣೆಗೆ ಚುನಾವಣಾಧಿಕಾರಿಗಳು ಮುಂದಾಗಿದ್ದರು. ಆ ವೇಳೆ ಪೈಲಟ್ ಹಾಗೂ ಚುನಾವಣಾಧಿಕಾರಿಗಳು ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಇದಕ್ಕೆ ಡಿಕೆ ಶಿವಕುಮಾರ್​ ಫೋಟೋಗಳನ್ನು ಶೇರ್ ಮಾಡಿಕೊಂಡು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

1 / 6
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಲಿಕಾಪ್ಟರ್‌ ಅನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದಾರೆ.

2 / 6
ಚುನಾವಣಾ ಆಯೋಗದ ಅಧಿಕಾರಿಗಳು ತಮ್ಮ ಹೆಲಿಕಾಪ್ಟರ್​ ತಪಾಸಣೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರು ಕೆಲ ಫೋಟೋಗಳನ್ನು ಹಂಚಿಕೊಂಡು​ ಪ್ರತಿಕ್ರಿಯೆ ಕೊಟ್ಟಿದ್ದಾರೆ.

3 / 6
ಚುನಾವಣಾ ಆಯೋಗದ ಅಧಿಕಾರಿಗಳು ನಿನ್ನೆ ಮತ್ತು ಇಂದು ಎರಡೂ ದಿನ ನನ್ನ ಹೆಲಿಕಾಪ್ಟರ್‌ ಅನ್ನೇ ಪರಿಶೀಲನೆ ನಡೆಸಿದ್ದಾರೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

4 / 6

 ಅಧಿಕಾರಿಗಳು ಪ್ರತಿದಿನ ಪರಿಶೀಲಿಸಲು ನನ್ನ ಅಭ್ಯಂತರವೇನಿಲ್ಲ. ಆದರೆ, ಕಾಲಮಿತಿಯೊಳಗೆ ಪರಿಶೀಲನೆ ಮುಗಿಸಿ ಚುನಾವಣಾ ಪ್ರಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಡಿಕೆ ಶಿವಕುಮಾರ್​ ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

5 / 6
ನಿನ್ನೆ(ಏಪ್ರಿಲ್ 23) ಡಿಕೆ ಶಿವಕುಮಾರ್ ಅವರು ಧರ್ಮಸ್ಥಳಕ್ಕೆ ಕುಟುಂಬ ಸಹಿತರಾಗಿ ಭೇಟಿ ನೀಡಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಡಿಕೆ ಶಿವಕುಮಾರ್​ ಕುಟುಂಬಸ್ಥರು ಆಗಮಿಸಿದ್ದ ಹೆಲಿಕಾಪ್ಟರ್​ ಅನ್ನು ಚುನಾವಣಾಧಿಕಾರಿಗಳು ತಪಾಸಣೆ ಮಾಡಿದ್ದರು.

6 / 6
ಈ ವೇಳೆ ಪೈಲಟ್, ಇದು ಖಾಸಗಿ ಹೆಲಿಕಾಪ್ಟರ್, ಪರಿಶೀಲಿಸಲು ಅವಕಾಶವಿಲ್ಲವೆಂದು ಮಾತಿಗೆ ಇಳಿದಿದ್ದರು. ಪೈಲಟ್ ರಾಮದಾಸ್ ಹಾಗೂ ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿತ್ತು.

Published On - 5:44 pm, Sun, 23 April 23

Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Follow Us