Promise Day 2022: ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​ಗಳನ್ನು ಮಾಡಿ: ಬಂಧ ಗಟ್ಟಿಯಾಗಿಸಿಕೊಳ್ಳಿ

| Updated By: Pavitra Bhat Jigalemane

Updated on: Feb 11, 2022 | 11:40 AM

ಇಂದು ಫೆ.11 ರಂದು ಪ್ರೇಮಿಗಳ ವಾರದ ನಾಲ್ಕನೇ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮ ಪ್ರೀತಿಯ ಜೀವಕ್ಕೊಂದಿಷ್ಟು ಭರವಸೆಗಳು ನೀಡಿ. ಹಾಗಾದರೆ ಯಾವೆಲ್ಲಾ ರೀತಿಯ ಮಾತುಗಳನ್ನು ನೀಡಬೇಕು ಎನ್ನುವ ಮಾಹಿತಿ ಇಲ್ಲಿದೆ.

1 / 6
ಪ್ರತೀ ಪ್ರೇಮಿ ಬದುಕುವುದು ನಂಬಿಕೆಯ ಮೇಲೆ, ತನ್ನ ಸಂಗಾತಿ ಬಿಡೆನು ಎನ್ನುವ ಭರವಸೆಯಲ್ಲಿ. ಪ್ರೇಮಿಗಳ ವಾರದ ಈ ದಿನ ಪ್ರಾಮಿಸ್​ ಡೇ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವಕ್ಕೆ ಈ ಪ್ರಾಮಿಸ್​​ಗಳನ್ನು ಮಾಡಿ

2 / 6
ಎಂದಿಗೂ ದೂರಮಾಡುವುದಿಲ್ಲ: ಕೆಲವೊಮ್ಮೆ ಸಂದರ್ಭಗಳು ಸಂಬಂಧದಲ್ಲಿ ಅಭದ್ರತೆಯನ್ನು ಮೂಡಿಸುತ್ತದೆ. ಹೀಗಾಗಿ ಈ ದಿನ ಮನಸಿನಾಳದಿಂದ ಮಾತುಕೊಡಿ ಎಂದಿಗೂ ದೂರಮಾಡಿ ಹೋಗುವುದಿಲ್ಲ ಎಂದು.

3 / 6
ಜಗಳ, ಮುನಿಸು ಸಂಬಂಧದಲ್ಲಿ ಸಹಜ. ಹಾಗೆಂದ ಮಾತ್ರಕ್ಕೆ ಸಂಗಾತಿಯನ್ನು ನೋಯಿಸಬೇಕೆಂದಿಲ್ಲ. ತಾಳ್ಮೆಯಿಂದ ಕುಳಿತು ಮಾತನಾಡಿದರೆ ಸಮಸ್ಯೆಗೆ ಪರಹಾರ ಸಿಗುವುದು. ಆದ್ದರಿಂದ ಇಂದು ಪ್ರೇಮಿಗೆ ಪ್ರಾಮಿಸ್​ ಮಾಡಿ ಎಂದಿಗೂ ನೋಯಿಸುವುದಿಲ್ಲ ಎಂದು.

4 / 6
ಸುಳ್ಳು ಸಂಬಂಧದವನ್ನು ಹಾಳುಗೆಡುವುತ್ತದೆ. ಆದ್ದರಿಂದ ಸಂಗಾತಿಗೆ ಸತ್ಯ ಹೇಳಿ. ಯಾವ ವಿಷಯವನ್ನಾದರೂ ಆಗಿದ್ದಾಗಲೇ ಬಗೆಹರಿಸಿಕೊಳ್ಳಿ. ಹೀಗಾಗಿ ಸುಳ್ಳು ಹೇಳುವುದಿಲ್ಲ ಎಂದು ಪ್ರೀತಿಸುವ ಜೀವಕ್ಕೆ ಮಾತು ನೀಡಿ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಿ.

5 / 6
ಕೋಪ ಎಂತಹವರನ್ನೂ ನೋಯಿಸುತ್ತದೆ. ಹೀಗಾಗಿ ನಿಮ್ಮನ್ನು ಪ್ರೀತಿಸುವ ಜೀವದ ಮೇಲೆ ಎಂದಿಗೂ ಕೋಪಿಸಿಕೊಳ್ಳುವುದಿಲ್ಲ ಎಂದು ಮಾತು ನೀಡಿ. ಅದರಂತೆ ನಡೆದುಕೊಳ್ಳಿ.

6 / 6
ದುರಾಭ್ಯಾಸಗಳನ್ನು ಬಿಡುವೆನೆಂಬ ಮಾತು ನೀಡಿ. ಕುಡಿತ, ಧೂಮಪಾನ ಆರೋಗ್ಯಕ್ಕೂ ಹಾನಿಕರ ಜತೆಗೆ ಸಂಬಂಧಕ್ಕೂ ಹಾನಿಕರ ಹೀಗಾಗಿ ಅದನ್ನು ತ್ಯಜಿಸುವ ಮಾತು ನೀಡಿ. ಬಾಂಧವ್ಯ ಬಿಗಿಯಾಗಿಸಿಕೊಳ್ಳಿ.