
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಣದಲ್ಲಿ. ಕಳೆದೊಂದು ವಾರದಿಂದ ಇಲ್ಲಿನ ವೀರಭದ್ರೇಶ್ವರ ಜಾತ್ರೆ ನಡೆಯುತ್ತಿದ್ದು, ಕೊನೆಯ ದಿನವಾದ ಇಂದು ಕುಸ್ತಿಯನ್ನ ಆಯೋಜಿಸಲಾಗಿತ್ತು. ಪ್ರತಿ ವರ್ಷ ಇಲ್ಲಿ ಕುಸ್ತಿಯನ್ನ ನಡೆಸಲಾಗುತ್ತಿದ್ದು 101ರೂಪಾಯಿಯಿಂದ ಹಿಡಿದು 11 ಸಾವಿರ ವರೆಗೆ ಭಾಗವಹಿಸಿದ ಪಟುಗಳಿಗೆ ಹಣ ನೀಡಲಾಗುತ್ತದೆ.

ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಕ್ರೀಡೆ, ಇಂದು ನೊಡಲು ಸಿಗೊದು ಕೂಡಾ ತೀರಾ ಕಡಿಮೆ. ಆದರೆ ಈ ಜಾತ್ರೆಯಲ್ಲಿ ಪ್ರತಿ ವರ್ಷ ಈ ಆಟಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಆಟಗಾರರನ್ನ ಕರೆಸಿ ಆಡಿಸಲಾಗುತ್ತದೆ.

ಸುಮಾರು 100ಕ್ಕೂ ಹೆಚ್ಚು ಕುಸ್ತಿ ಪಟುಗಳು ಇಲ್ಲಿ ಭಾಗವಹಿಸಿದ್ದರು. ಒಂದು ಕಡೆ ಅತಿಯಾದ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸಿದ್ದರು ಕೂಡಾ ನೂರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಇನ್ನು ದೂರದ ಊರುಗಳಿಂದ ಬಂದಿದ್ದ ಕುಸ್ತಿ ಪಟುಗಳು, ಖಷಿ ಖಷಿಯಿಂದಲೇ ಕುಸ್ತಿಯಾಡಿ ಬಹುಮಾನವನ್ನ ಪಡೆದರು.

ಇಲ್ಲಿ ಹಣ ನೀಡುತ್ತಾರೆ ಎಂಬುದಕ್ಕಿಂತ ಕುಸ್ತಿ ಆಡಿ ತಮ್ಮ ಸಾಮರ್ಥ್ಯ ತೊರಿಸುತ್ತಾರೆ. ಪೈನಲ್ ಪಂದ್ಯ ಕೂಡ ಅಷ್ಟೇ ರೊಚಕತೆಯಿಂದ ಕೂಡಿತ್ತು. ಚಿಕ್ಕ ಮಕ್ಕಳಿಂದ ಹಿಡಿದು 40ವರ್ಷ ವಯಸ್ಸಿನವರೆಗಿನ ಯುವಕರು, ಪುರುಷರು ಇದರಲ್ಲಿ ಭಾಗವಹಿಸಿರುತ್ತಾರೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಮಹರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಕುಸ್ತಿ ಆಡಲು ಪಟುಗಳು ಬಂದಿದ್ದು ತಮಗೇ ತಕ್ಕ ಸಾಮರ್ಥ್ಯ ಪಟುವನ್ನ ಆಯ್ಕೆ ಮಾಡಿಕೊಂಡು ಕುಸ್ತಿಗೆ ಇಳಿದಿದ್ದರು.

ದೂರದ ಊರುಗಳಿಂದ ಬರುವ ಪಟುಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಕೂಡ ಇಲ್ಲಿ ಮಾಡಲಾಗಿರುತ್ತದೆ. ಜಾತಿ ಭೇದ ಮರೆತು ಹಿಂದಿನ ಕಾಲದ ಸಂಪ್ರದಾಯವನ್ನೇ ಉಳಿಸಿಕೊಂಡು ಬೆಳಸಿಕೊಂಡು ಹೋಗುವುದು ನಮ್ಮ ಜವಾಬ್ಧಾರಿ ಎನ್ನುತ್ತಾರೆ ದೇವಸ್ಥಾನ ಮಂಡಳಿಯವರು.

ನಶಿಸಿ ಹೋಗುತ್ತಿರುವ ಇಂತಹ ಕ್ರೀಡೆಗಳು ಇನ್ನೂ ಹಳ್ಳಿಯಲ್ಲಿ ಜಿವಂತವಾಗಿವೇ ಅನ್ನುವುದಕ್ಕೆ ಇದು ಕೂಡ ಸಾಕ್ಷಿ. ಇತ್ತ ಗ್ರಾಮಿಣ ಭಾಗದ ಯುವಕರು ನೆಚ್ಚಿನ ಕ್ರಿಡೆಗಳಲ್ಲಿ ಒಂದಾದ ಕುಸ್ತಿಗೂ ಕೂಡ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಅಂದಾಗ ಮಾತ್ರ ಇಂತಹ ಕ್ರೀಡೆಯನ್ನ ಬೆಳೆಸಿ ಉಳಿಸಲು ಸಾಧ್ಯವಾಗುತ್ತದೆ.