ಹಿಂದೂ ಧರ್ಮದಲ್ಲಿ ಶಕುನ ಎಂಬುದಕ್ಕೆ ತುಂಬಾ ಪ್ರಮುಖ್ಯತೆ ನೀಡುತ್ತಾರೆ. ಇದು ದೇಹಕ್ಕೆ ಸಂಬಂಧಿಸಿದ ಅನೇಕ ಶುಭ ಮತ್ತು ಅಶುಭ ಚಿಹ್ನೆಗಳನ್ನು ವಿವರಿಸುತ್ತದೆ.
ಇದರಲ್ಲಿ ಒಂದು ಅಂಗೈಯಲ್ಲಿ ತುರಿಕೆ. ಕೆಲವು ಜನರು ಇದ್ದಕ್ಕಿದ್ದಂತೆ ತಮ್ಮ ಅಂಗೈಗಳಲ್ಲಿ ತುರಿಕೆ ಅನುಭವಿಸಲು ಪ್ರಾರಂಭಿಸುತ್ತಾರೆ.
ತುರಿಕೆ ಇರುವ ಅಂಗೈ ಶುಭವೋ ಅಶುಭವೋ ಎಂಬುದು ಯಾವ ಅಂಗೈ ತುರಿಕೆ ಹೊಂದಿದೆ ಮತ್ತು ಅದು ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂಗೈಯಲ್ಲಿ ತುರಿಕೆ ಏನನ್ನು ಸೂಚಿಸುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಪುರುಷರ ಬಲ ಅಂಗೈಯಲ್ಲಿ ತುರಿಕೆ ಶುಭವೆಂದು ಹೇಳುತ್ತಾರೆ. ಪುರುಷರ ಎಡ ಅಂಗೈಯಲ್ಲಿ ತುರಿಕೆ ಅಶುಭ ಎಂದು ಹೇಳಲಾಗುತ್ತದೆ. ಇದಕ್ಕೆ ವಿರುದ್ಧವಾಗಿ ಮಹಿಳೆಯರ ಎಡ ಅಂಗೈಯಲ್ಲಿ ತುರಿಕೆ ಶುಭ, ಬಲ ಅಂಗೈ ಅಶುಭ ಎಂದು ಹೇಳುತ್ತಾರೆ ಜ್ಯೋತಿಷ್ಯ ತಜ್ಞರು.
ಮಹಿಳೆಯರಿಗೆ ಬಲಗೈಯಲ್ಲಿ ತುರಿಕೆ ಇರುವುದು ದುರದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಬಲಗೈ ತುರಿಕೆ ಎಂದರೆ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಅನಗತ್ಯ ವಸ್ತುಗಳಿಗೆ ಹಣ ಖರ್ಚು ಮಾಡಬೇಕಾಗಬಹುದು. ಅದೇ ರೀತಿ, ಎಡ ಅಂಗೈಯಲ್ಲಿ ತುರಿಕೆ ಇದ್ದರೆ, ಹಣಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ನೀವು ಸ್ವೀಕರಿಸುತ್ತೀರಿ ಎಂದರ್ಥ.