- Kannada News Photo gallery Nabha Natesh Looks like a Sanjay Leela Bhansali Movie Heroine Cinema News in Kannada
ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಹೀರೋಯಿನ್ ರೀತಿ ಕಾಣ್ತಿದ್ದಾರೆ ಕನ್ನಡದ ನಭಾ ನಟೇಶ್
ನಟಿ ನಭಾ ನಟೇಶ್ ಅವರು ಕನ್ನಡದವರು. ಈಗ ಅವರು ತೆಲುಗು ಇಂಡಸ್ಟ್ರಿಯಲ್ಲಿ ಸೆಟಲ್ ಆಗಿದ್ದಾರೆ. ಅವರು ಹಂಚಿಕೊಂಡಿರೋ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ. ಅವರ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಅಭಿಮಾನಿಗಳು ನಾನಾ ರೀತಿಯ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ.
Updated on: Mar 26, 2025 | 8:38 AM

ಕನ್ನಡದ ನಟಿ ನಭಾ ನಟೇಶ್ ಅವರು ಸದ್ಯ ಟಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಹಾಗಂತ ಅವರು ಫೋಟೋಶೂಟ್ ಮಾಡೋದನ್ನು ನಿಲ್ಲಿಸಿಲ್ಲ. ಸಮಯ ಸಿಕ್ಕಾಗ ವಿವಿಧ ರೀತಿಯ ಫೋಟೋಗಳಲ್ಲಿ ಮಿಂಚುತ್ತಾರೆ.

ಈಗ ನಭಾ ನಟೇಶ್ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಭಾ ಪ್ರತಿ ಬಾರಿ ಮಾಡರ್ನ್ ಡ್ರೆಸ್ ಹಾಕಿ ಬೋಲ್ಡ್ ಫೋಟೋಗಳ ಮೂಲಕ ಮಿಂಚುತ್ತಿದ್ದರು. ಆದರೆ, ಈ ಬಾರಿ ಅವರ ಆಯ್ಕೆ ಬದಲಾಗಿದೆ. ಟ್ರೆಡಿಷನಲ್ ಲುಕ್ನಲ್ಲಿ ಅವರು ಬಂದಿದ್ದಾರೆ.

ನಭಾ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಅವರ ಬೋಲ್ಡ್ನೆಸ್ ಕಂಡು ಫ್ಯಾನ್ಸ್ ಕಣ್ಣರಳಿಸಿದ್ದಾರೆ. ಅವರು ಸಂಜಯ್ ಲೀಲಾ ಭನ್ಸಾಲಿ ಚಿತ್ರದ ನಾಯಕಿ ರೀತಿ ಕಾಣುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರದ ನಾಯಕಿಯರು ಬಹುತೇಕ ಇದೇ ರೀತಿ ಉಡುಗೆ ಹಾಕುತ್ತಾರೆ. ಅವರ ಸಿನಿಮಾಗಳಲ್ಲಿ ನಟಿಯರ ಉಡುಗೆಯೇ ಹೆಚ್ಚು ಗಮನ ಸೆಳೆಯುತ್ತದೆ. ನಭಾ ಕೂಡ ಹಾಗೆಯೇ ಕಾಣಿಸಿದ್ದಾರೆ.

ನಭಾ ನಟೇಶ್ ಅವರು ಕನ್ನಡದಲ್ಲಿ ಮೊದಲು ನಟಿಸಿದರು. ಆ ಬಳಿಕ ಅವರಿಗೆ ಟಾಲಿವುಡ್ ಆಫರ್ ಬಂತು. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತಕ್ಕೆ ಒಳಗಾದರು. ಇದಾದ ಬಳಿಕ ಅವರು ಸಿನಿಮಾ ಮಾಡೋದು ಕಡಿಮೆ ಆಗಿದೆ.



















