Loan: ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಈ ವಿಚಾರಗಳನ್ನು ತಿಳಿದಿರಿ

ಸಾಲ ಪಡೆದುಕೊಳ್ಳುವುದು, ಅದರಿಂದ ಮನೆ ನಿರ್ಮಾಣ ಮಾಡಿಕೊಳ್ಳುವುದು, ವಾಹನ ಖರೀದಿ ಮಾಡುವುದು ಹೊಸದೇನೂ ಅಲ್ಲ. ಆದರೆ ಸಾಲ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಮೊದಲು ತಿಳಿದುಕೊಂಡಿರಬೇಕು. ಅಗತ್ಯಕ್ಕಿಂತ ಹೆಚ್ಚಿನ ಸಾಲ ಪಡೆದರೆ ಅನಗತ್ಯ ಹೊರೆಗೆ ದಾರಿ ಮಾಡಿಕೊಡಬಹುದು. ಆದಾಯದ ಮೂಲಗಳ ಮೇಲೂ ಇದು ಪರಿಣಾಮ ಬೀರಬಹುದು. ಸಾಲ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಚಾರಗಳ ಮಾಹಿತಿ ಇಲ್ಲಿದೆ.

Ganapathi Sharma
|

Updated on: Apr 08, 2023 | 9:45 AM

Dos and Donts While Applying For Loan, how to avail hassle free credit

ಹಣಕಾಸಿನ ಅಗತ್ಯಗಳಿಗೆ ಸಾಲವನ್ನು ಪಡೆದುಕೊಳ್ಳುವುದು ಸಹಜ. ಆದರೆ, ಸಾಲ ಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಎಲ್ಲಾ ದೃಷ್ಟಿಕೋನದಿಂದ ಆಲೋಚನೆ ಮಾಡಬೇಕು. ಸಾಲ ಪಡೆದುಕೊಳ್ಳುವ ಸಂದರ್ಭದ ಪ್ರಕ್ರಿಯೆಗಳು ಮತ್ತು ಷರತ್ತುಗಳು ಏನಿವೆ ಅನ್ನೋದು ನಿಮಗೆ ಸ್ಪಷ್ಟವಾಗಿರಬೇಕು.

1 / 6
Dos and Donts While Applying For Loan, how to avail hassle free credit

ಈ ದಿನಗಳಲ್ಲಿ, ಬಹುತೇಕ ಎಲ್ಲಾ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತಿವೆ. ಗ್ರಾಹಕರನ್ನು ಆಕರ್ಷಿಸುವ ಕೆಲಸ ಮಾಡುತ್ತಿವೆ. ಆದರೆ, ಗ್ರಾಹಕನಾದವನು ಯಾವ ಸಂಸ್ಥೆಯಿಂದ ಸಾಲ ಪಡೆದುಕೊಂಡರೆ ಒಳ್ಳೆಯದು? ಹಿಡನ್ ಚಾರ್ಜಸ್, ಹೆಚ್ಚಿನ ಬಡ್ಡಿ ದರ, ದಾಖಲಾತಿ ಒದಗಿಸುವ ವೇಳೆಯ ಗೊಂದಲಗಳು ಇತ್ಯಾದಿಗಳ ಬಗ್ಗೆ ತಿಳಿದಿರುವುದು ಉತ್ತಮ.

2 / 6
Dos and Donts While Applying For Loan, how to avail hassle free credit

ನಿಮಗೆ ಬೇಕಾದ್ದಷ್ಟನ್ನೇ ಸಾಲ ಪಡೆಯಿರಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನಿಮಗೆ ಎಷ್ಟು ಹಣ ಬೇಕು ಮತ್ತು ಯಾವ ಮೊತ್ತವನ್ನು ನೀವು ಪಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳಿ. ಇದನ್ನು ಲೆಕ್ಕಾಚಾರ ಮಾಡುವಾಗ, ಆರೋಗ್ಯ ವಿಮಾ ಪ್ರೀಮಿಯಂಗಳು, ಇತರ ಇಎಂಐಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇತರ ಮಾಸಿಕ ವೆಚ್ಚಗಳಂತಹ ನಿಮ್ಮ ಹಣಕಾಸಿನ ವೆಚ್ಚಗಳನ್ನು ಗಣನೆಯಲ್ಲಿ ಇಟ್ಟುಕೊಳ್ಳಿ.

3 / 6
Dos and Donts While Applying For Loan, how to avail hassle free credit

ಇಂದು ಹಲವಾರು ಪಾವತಿ ಆಯ್ಕೆಗಳು ಮತ್ತು ಶೆಡ್ಯೂಲ್​ಗಳು ಲಭ್ಯವಿವೆ. ಇವು ಸಾಮಾನ್ಯವಾಗಿ ಸಾಲ ನೀಡುವ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಭಿನ್ನವಾಗಿರುತ್ತವೆ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಉತ್ತಮವಾಗಿ ಹೊಂದಿಕೊಳ್ಳುವ ಮರುಪಾವತಿ ಮತ್ತು ಇಎಂಐ ಯೋಜನೆ ಗುರುತಿಸಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯ.

4 / 6
Dos and Donts While Applying For Loan, how to avail hassle free credit

ನೀವು ತೆಗೆದುಕೊಳ್ಳುತ್ತಿರುವ ಸಾಲದ ಪ್ರಕಾರವನ್ನು ಅವಲಂಬಿಸಿ ಬಡ್ಡಿದರವು ಬದಲಾಗಬಹುದು. ಇವುಗಳು ಸಾಮಾನ್ಯವಾಗಿ ಮಾಸಿಕ ಪಾವತಿಗಳಾಗಿರುವುದರಿಂದ, ಶೇಕಡಾವಾರು ಪಾಯಿಂಟ್ ವ್ಯತ್ಯಾಸವೂ ಸಹ ದೊಡ್ಡ ಮೊತ್ತದ ವ್ಯತ್ಯಾಸಕ್ಕೆ ಕಾರಣವಾಗಬಹುದು. ನಿಮಗೆ ಬೇಕಾದ ಮೊತ್ತ ಪಡೆದುಕೊಳ್ಳುವುದರ ಜತೆಗೆ ಕಡಿಮೆ ಬಡ್ಡಿ ದರ ಸಹ ಅಷ್ಟೇ ಮುಖ್ಯವಾಗುತ್ತದೆ.

5 / 6
Dos and Donts While Applying For Loan, how to avail hassle free credit

ಸಾಲ ಪಡೆಯುವಾಗ ಲೋನ್ ಡಾಕ್ಯುಮೆಂಟ್‌ನಲ್ಲಿನ ಎಲ್ಲ ನಿಯಮಗಳು ಮತ್ತು ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಸಾಲ ನೀಡುವ ಸಂಸ್ಥೆ ಸಂಕೀರ್ಣ ದಾಖಲಾತಿ ನೀಡಿ ಅದರ ಹಿಂದೆ ನಿಮ್ಮಿಂದ ಹೆಚ್ಚಿನ ಹಣ ಅಥವಾ ಬಡ್ಡಿ ವಸೂಲಿಯ ತಂತ್ರ ಹೆಣೆದಿರಬಹುದು. ಹಾಗಾಗಿ ಕಾಗದ ಪತ್ರಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಮುಂದುವರಿಯಬೇಕು.

6 / 6
Follow us