Weight Loss: ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ
TV9 Web | Updated By: Pavitra Bhat Jigalemane
Updated on:
Feb 18, 2022 | 4:35 PM
ಬದಾಲದ ಜೀವನಶೈಲಿಯಿಂದ ದೇಹದಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯವಾಗಿದೆ. ಅದನ್ನು ಸರಿಪಡಿಸಿಕೊಳ್ಳಲು ಕೇವಲ ಆಹಾರದಿಂದ ಮಾತ್ರವಲ್ಲ ಕೆಲವು ಪಾನೀಯಗಳಿಂದಲೂ ತೂಕ ಇಳಿಸಿಕೊಳ್ಳಬಹುದು. ಇಲ್ಲಿದೆ ಮಾಹಿತಿ.
1 / 10
ಕೆಲವು ಪಾನೀಯಗಳ ಮೂಲಕವೂ ಸುಲಭವಾಗಿ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ಅವು ಯಾವೆಲ್ಲಾ ಪಾನೀಯಗಳು ಎನ್ನುವ ಮಾಹಿತಿ ಇಲ್ಲಿದೆ ನೋಡಿ.
2 / 10
ಟೊಮೇಟೋ ಹಣ್ಣನ್ನು ಜ್ಯೂಸ್ ಮಾಡಿ ಅದಕ್ಕೆ ಒಂದು ಚಮಚ ನಿಂಬು ರಸವನ್ನು ಮಿಶ್ರಣ ಮಾಡಿ ಸೇವಿಸಿ
3 / 10
ಅರ್ಧ ಕಪ್ನಷ್ಟು ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಂಡು ಅದಕ್ಕೆ ಸೌತೆಕಾಯಿ ರಸವನ್ನು ಮಿಶ್ರಣ ಮಾಡಿ ಸೇವಿಸಿ,
4 / 10
ಸೇಲರಿ ಎಲೆಗಳ ಬಳಕೆಯಿಂದಲೂ ದೇಹದ ತೂಕವನ್ನು ಕಳೆದುಕೊಳ್ಳಬಹುದು. ಅರ್ಧ ಕಪ್ನಷ್ಟು ಸೆಲರಿ ಎಲೆಗಳನ್ನು ರುಬ್ಬಿಕೊಂಡು ನೀರಿಗೆ ಸೇರಿಸಿ ಸೇವಿಸಿ,
5 / 10
ಜೇನುತುಪ್ಪ ಮತ್ತು ನಿಂಬು ರಸವನ್ನು ನೀರಿಗೆ ಸೇರಿಸಿ ಕುಡಿಯಿರಿ. ಇದರಿಂದ ದೇಹದಲ್ಲಿರುವ ಕೊಬ್ಬು ಕರಗಿ ಅತಿಯಾದ ತೂಕ ಇಳಿಕೆಯಾಗುತ್ತದೆ.
6 / 10
ಗೋದಿ ಹುಲ್ಲು ಮತ್ತು ದ್ರಾಕ್ಷಿಯನ್ನು ಮಿಶ್ರಣ ಮಾಡಿ ಜ್ಯೂಸ್ ಮಾಡಿಕೊಂಡು ಕುಡಿಯಬಹುದು.
7 / 10
ಶುಂಠಿ ಮತ್ತು ನಿಂಬುವಿನ ಮಿಶ್ರಣ ಮಾಡಿ ನೀರಿಗೆ ಹಾಕಿ ಚಿಟಿಕೆ ಜೀರಿಗೆ ಪುಡಿಯನ್ನು ಹಾಕಿ ಪ್ರತಿದಿನ ಸೇವಿಸಿ ಇದರಿಂದ ಸುಲಭವಾಗಿ ದೇಹದ ತೂಕವನ್ನು ಕಳೆದುಕೊಳ್ಳಬಹುದು
8 / 10
ಕಾಫಿ ಸೇವನೆಯಿಂದಲೂ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಬಿಸಿ ಬಿಸಿ ಕಾಫಿಗೆ ಸ್ವಲ್ಪ ಡಾರ್ಕ್ ಚಾಕೋಲೇಟ್ಅನ್ನು ಸೇರಿಸಿಕೊಂಡು ಸೇವಿಸಿ.
9 / 10
ಗ್ರೀನ್ ಟೀ ಮತ್ತು ಪುದೀನಾ: ಗ್ರೀನ್ ಟೀ ತಯಾರಿಯ ವೇಳೆ ಒಂದೆರಡು ಪುದೀನಾ ಎಲೆಗಳನ್ನು ಹಾಕಿ ಕುದಿಸಿ. ಇದರ ಸೇವನೆಯಿಂದ ದೇಹದ ಅತಿಯಾದ ತೂಕವನ್ನು ಕಳೆದುಕೊಳ್ಳಬಹುದು.
10 / 10
ಎಳೆನೀರು ದೇಹಕ್ಕೆ ಅತ್ಯತ್ತಮ ಪದಾರ್ಥವಾಗಿದೆ. ದೇಹದ ತೂಕ ಇಳಿಕೆಗೆ ಪ್ರತಿದಿನ ಒಂದು ಎಳೆನೀರನ್ನು ಸೇವಿಸಿ.
Published On - 12:35 pm, Fri, 18 February 22