Ranji Trophy: ವಾಸಿಂ ಜಾಫರ್ ಅವರನ್ನು ದೇಶೀಯ ಕ್ರಿಕೆಟ್‌ನ ಸಚಿನ್ ತೆಂಡೂಲ್ಕರ್ ಎಂದು ಕರೆಯಲಾಗುತ್ತದೆ. ಅವರು ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಮೊದಲು ಮುಂಬೈ ಮತ್ತು ನಂತರ ವಿದರ್ಭ ಪರ ಆಡಿ 12038 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 40 ಶತಕಗಳನ್ನು ಗಳಿಸಿದ್ದಾರೆ.
Feb 17, 2022 | 9:18 PM
ವಾಸಿಂ ಜಾಫರ್ ಅವರನ್ನು ದೇಶೀಯ ಕ್ರಿಕೆಟ್‌ನ ಸಚಿನ್ ತೆಂಡೂಲ್ಕರ್ ಎಂದು ಕರೆಯಲಾಗುತ್ತದೆ. ಅವರು ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಮೊದಲು ಮುಂಬೈ ಮತ್ತು ನಂತರ ವಿದರ್ಭ ಪರ ಆಡಿ 12038 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 40 ಶತಕಗಳನ್ನು ಗಳಿಸಿದ್ದಾರೆ.
1 / 5
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಅಮೋಲ್ ಮಜುಂದಾರ್ ರಣಜಿ ಟ್ರೋಫಿಯಲ್ಲಿ 9202 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ಮೂರು ತಂಡಗಳಿಗಾಗಿ ಆಡಿದರು. ಮುಂಬೈ ಅಲ್ಲದೆ, ಅವರು ಅಸ್ಸಾಂ ಮತ್ತು ಆಂಧ್ರಪ್ರದೇಶವನ್ನು ಪ್ರತಿನಿಧಿಸಿದ್ದಾರೆ.
2 / 5
ಮಧ್ಯಪ್ರದೇಶದ ದೇವೇಂದ್ರ ಬುಂದೇಲಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ದೇವೇಂದ್ರ ರಣಜಿ ಟ್ರೋಫಿಯಲ್ಲಿ 9201 ರನ್ ಗಳಿಸಿದ್ದಾರೆ. ಅವರು ಬೇರೆ ಯಾವುದೇ ತಂಡಕ್ಕಾಗಿ ಆಡಿಲ್ಲ.
3 / 5
ಮಿಥುನ್ ಮನ್ಹಾಸ್ ಅಗ್ರ ಐದರಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಮೊದಲು ದೆಹಲಿ ಮತ್ತು ನಂತರ ಜಮ್ಮು ಮತ್ತು ಕಾಶ್ಮೀರ ಪರ ಆಡಿದ ಮಿಥುನ್, ಪ್ರಥಮ ದರ್ಜೆ ಮಾದರಿಯ ಈ ಟೂರ್ನಿಯಲ್ಲಿ 8554 ರನ್ ಗಳಿಸಿದ್ದಾರೆ.
4 / 5
1983ರ ವಿಶ್ವ ಚಾಂಪಿಯನ್ ತಂಡದ ಭಾಗವಾಗಿದ್ದ ಯಶ್ಪಾಲ್ ಸಿಂಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಯಶಪಾಲ್ ಸಿಂಗ್ ಸರ್ವೀಸ್ ಮತ್ತು ಸಿಕ್ಕಿಂ ಪರ ಆಡಿದ್ದರು. ಈ ಟೂರ್ನಿಯಲ್ಲಿ ಅವರು 8700 ರನ್ ಗಳಿಸಿದ್ದಾರೆ.