Updated on: Feb 17, 2022 | 7:32 PM
IPL 2022 ರ ಮೆಗಾ ಹರಾಜು ಮುಗಿದ ನಂತರ, ಈಗ ಸ್ಪರ್ಧೆಯ ತಯಾರಿ ಪ್ರಾರಂಭವಾಗಿದೆ. ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರನ್ನು 12.25 ಕೋಟಿ ರೂ.ಗೆ ಖರೀದಿಸಿತು.
ಮೆಗಾ ಹರಾಜಿನ ಮೂರು ದಿನಗಳ ನಂತರ KKR ಫ್ರಾಂಚೈಸ್ ಪ್ರಮುಖ ಘೋಷಣೆ ಮಾಡಿದೆ. ಕೋಲ್ಕತ್ತಾ ಶ್ರೇಯಸ್ ಅಯ್ಯರ್ ಅವರನ್ನು ತಂಡದ ಕ್ಯಾಪ್ಟನ್ ಎಂದು ಘೋಷಿಸಿದ್ದಾರೆ. ಇದೀಗ ತಂಡವನ್ನು ಮೂರನೇ ಪ್ರಶಸ್ತಿಗೆ ಕೊಂಡೊಯ್ಯುವ ಜವಾಬ್ದಾರಿ ಶ್ರೇಯಸ್ ಮೇಲಿದೆ.
ಶ್ರೇಯಸ್
ಶ್ರೇಯಸ್ ಅಯ್ಯರ್ ಅಂಡರ್-19 ಕ್ರಿಕೆಟ್ ಕೂಡ ಆಡಿದ್ದು, ಅಂದಿನ ಪಂದ್ಯಾವಳಿಯಲ್ಲಿ ಗಳಿಸಿದ ಹಣದಿಂದ ಅಯ್ಯರ್ ಹುಂಡೈ i20 ಖರೀದಿಸಿದ್ದರು . ಹಾಗಾಗಿ ಈಗಲೂ ಈ ಕಾರನ್ನು ಶ್ರೇಯಸ್ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದಾರೆ ಮತ್ತು ಓಡಿಸುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ಮಾಡೆಲ್ ನಿಕಿತಾ ಜಯಸಿಂಘನಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ಆಕೆಯ ಜೊತೆಗಿನ ಫೋಟೋವನ್ನು ಸ್ವತಃ ಶ್ರೇಯಸ್ ಪೋಸ್ಟ್ ಮಾಡಿದ್ದರು. ನಿಕಿತಾ ಆರ್ಟ್ ಸ್ಟೈಲಿಸ್ಟ್ ಆಗಿದ್ದು ಜಾಹೀರಾತಿನ ಸಮಯದಲ್ಲಿ ಇಬ್ಬರ ಪರಿಚಯವಾಯಿತು.
ನಿಕಿತಾ ಅವರು ಶ್ರೇಯಸ್ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಸಹ ಹಂಚಿಕೊಂಡಿದ್ದಾರೆ. 2022ರಲ್ಲಿ ಶ್ರೇಯಸ್ ಅವರ ಆದಾಯ 53 ಕೋಟಿ ರೂ. ಆಗಿದೆ. ಜೊತೆಗೆ ಅವರ ತಿಂಗಳ ಆದಾಯ ಒಂದು ಕೋಟಿಗೂ ಹೆಚ್ಚು. ಕ್ರಿಕೆಟ್ ಅಲ್ಲದೆ ಜಾಹೀರಾತಿನಿಂದಲೂ ಹಣ ಗಳಿಸುತ್ತಾರೆ.
ಶ್ರೇಯಸ್ ಅವರನ್ನು ಬಿಸಿಸಿಐನ ಗುತ್ತಿಗೆ ವರ್ಗದ ಬಿ ವರ್ಗಕ್ಕೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ಆಟಗಾರರು ಬಿಸಿಸಿಐನಿಂದ ವರ್ಷಕ್ಕೆ 3 ಕೋಟಿ ರೂ. ಎ ಕೆಟಗರಿ ಆಟಗಾರರು 7 ಕೋಟಿ ಹಾಗೂ ಬಿ ಕೆಟಗರಿ ಆಟಗಾರರು 5 ಕೋಟಿ ರೂ. ಪಡೆಯುತ್ತಾರೆ.
ಶ್ರೇಯಸ್ ಅಯ್ಯರ್ ಅವರು ಡಿಸೆಂಬರ್ 6, 1994 ರಂದು ಜನಿಸಿದರು. ತಾಯಿಯ ಹೆಸರು ರೋಹಿಣಿ ಮತ್ತು ತಂದೆಯ ಹೆಸರು ಸಂತೋಷ್ ಅಯ್ಯರ್. ಶ್ರೇಯಸ್ ಕುಟುಂಬ ಕೇರಳದ ತ್ರಿಶೂರ್ ಜಿಲ್ಲೆಯಿಂದ ಬಂದಿದೆ. ಪ್ರಸ್ತುತ, ಅವರ ಕುಟುಂಬ ಮುಂಬೈನ ವರ್ಲಿಯಲ್ಲಿ ವಾಸಿಸುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರನ್ನು ನಾಯಕನನ್ನಾಗಿ ಮಾಡಿದ ನಂತರ ಶ್ರೇಯಸ್ ಡೆಲ್ಲಿ ತಂಡವನ್ನು ತೊರೆದರು. ಎರಡು ಹೊಸ ಐಪಿಎಲ್ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್‌ನಿಂದ ನಾಯಕತ್ವವನ್ನು ಪಡೆಯದ ಕಾರಣ ಶ್ರೇಯಸ್ ಎರಡು ತಂಡಗಳಲ್ಲಿ ಆಸಕ್ತಿ ತೋರಿಸಲಿಲ್ಲ.