Drugs Case: ಮರಣ ದಂಡನೆ, ಜೀವಾವಧಿ ಶಿಕ್ಷೆ.. ಡ್ರಗ್ ಪ್ರಕರಣಗಳಿಗೆ ಈ ದೇಶಗಳಲ್ಲಿ ಇವೆ ಕಠಿಣ ಕಾನೂನು!

| Updated By: ganapathi bhat

Updated on: Oct 03, 2021 | 10:56 PM

Drug Case: ಮುಂಬೈನ ಡ್ರಗ್ ಕೇಸ್ ಈಗ ಭಾರತದ ಮತ್ತೊಂದು ಹೊಸ ಪ್ರಕರಣ. ಶಾರುಖ್ ಖಾನ್ ಮಗ ಆರ್ಯನ್ ಖಾನ್ ಸಹಿತ ಮೂರು ಮಂದಿ ಈ ಸಂಬಂಧ ಇಂದು ಅರೆಸ್ಟ್ ಆಗಿದ್ದಾರೆ. ಇದೀಗ ಮತ್ತೆ ಡ್ರಗ್ ಪ್ರಕರಣ ಜೋರಾಗಿ ಸದ್ದು ಮಾಡುತ್ತಿದೆ.

1 / 8
ಯುವಸಮುದಾಯ ಮಾದಕ ವ್ಯಸನಿಗಳಾಗದಂತೆ ತಡೆಯಲು ಜಗತ್ತಿನ ವಿವಿಧ ದೇಶಗಳಲ್ಲಿ ಕಠಿಣ ಕಾನೂನು ಇದೆ. ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವವರ ವಿರುದ್ಧ ಕೂಡ ಹಲವು ಕ್ರಮಗಳನ್ನು ಕೈಗೊಳ್ಳಲು ಜಗತ್ತಿನ ಹಲವು ದೇಶಗಳು ಕಾನೂನು ಹೊಂದಿವೆ. ಏನೇ ಆದರೂ ಮಾದಕ ದ್ರವ್ಯ ಪಿಡುಗಿನಿಂದ ಸಂಪೂರ್ಣ ಹೊರಬರಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕೂಡ ಡ್ರಗ್ಸ್ ವಿರುದ್ಧ ಕಾನೂನು ಇದೆ. ಆದರೆ, ಇಲ್ಲಿ ಕೂಡ ಈ ಪಿಡುಗಿನಿಂದ ನಮ್ಮನ್ನು ನಾವು ಪೂರ್ಣವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಂಬೈನ ಡ್ರಗ್ ಕೇಸ್ ಈಗ ಭಾರತದ ಮತ್ತೊಂದು ಹೊಸ ಪ್ರಕರಣ. ಶಾರುಖ್ ಖಾನ್ ಮಗ ಆರ್ಯನ್ ಖಾನ್ ಸಹಿತ ಮೂರು ಮಂದಿ ಈ ಸಂಬಂಧ ಇಂದು ಅರೆಸ್ಟ್ ಆಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಡ್ರಗ್ ವಿಚಾರ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇತ್ತು. ಇದೀಗ ಮತ್ತೆ ಡ್ರಗ್ ಪ್ರಕರಣ ಜೋರಾಗಿ ಸದ್ದು ಮಾಡಿದೆ.

2 / 8
ಮಲೇಷಿಯಾ: ಈ ದೇಶದಲ್ಲಿ ಡ್ರಗ್ ಮಾರಾಟ ಮಾಡುವವರಿಗೆ ಮರಣ ದಂಡನೆ ಶಿಕ್ಷೆ ನೀಡಲಾಗುತ್ತದೆ. ಒಂದು ವೇಳೆ ಯಾರಾದರೂ ಡ್ರಗ್ ಸೇವಿಸುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ ಅವರನ್ನು ಜೈಲಿಗೆ ಹಾಕುವುದರ ಜೊತೆಗೆ ದಂಡ ವಿಧಿಸಲಾಗುತ್ತದೆ. ಮಲೇಷಿಯಾದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ ಕೂಡ ಕಠಿಣ ಶಿಕ್ಷೆ ಕೊಡಲಾಗುತ್ತದೆ.

3 / 8
ಚೀನಾ: ಈ ದೇಶದಲ್ಲಿ ಡ್ರಗ್ ಜೊತೆಗೆ ಯಾರಾದರೂ ಕಂಡುಬಂದರೆ ಅಥವಾ ಸೇವಿಸಿದರೆ ಅವರನ್ನು ಮೊದಲು ಮಾದಕ ವ್ಯಸನ ಮುಕ್ತ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಡ್ರಗ್ ಸಂಬಂಧಿಸಿದ ಇತರ ಪ್ರಕರಣಗಳಲ್ಲಿ ಮರಣ ದಂಡನೆಯವರೆಗೂ ಇಲ್ಲಿ ಶಿಕ್ಷೆ ನೀಡಲಾಗುತ್ತದೆ.

4 / 8
ವಿಯೆಟ್ನಾಂ: ಈ ದೇಶದಲ್ಲಿ ಮಾದಕ ದ್ರವ್ಯ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣನೆ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ 1.3 ಪೌಂಡ್​ಗಿಂತ ಹೆಚ್ಚು ಹೆರಾಯಿನ್ ಜೊತೆಗೆ ಪತ್ತೆಯಾದರೆ ಅಂತವರಿಗೆ ಮರಣ ದಂಡನೆ ಶಿಕ್ಷೆ ನೀಡಲಾಗುತ್ತದೆ.

5 / 8
ಇರಾನ್: ಈ ದೇಶವು ಸಾಮಾನ್ಯವಾಗಿ ಯಾವುದೇ ಅಪರಾಧ ಕೃತ್ಯಗಳನ್ನು ಸಹಿಸದ ದೇಶ. ಮಾದಕ ದ್ರವ್ಯದ ವಿಚಾರದಲ್ಲಿ ಕೂಡ ಸರ್ಕಾರ ಅಂತದ್ದೇ ನಿಲುವು ತಾಳುತ್ತದೆ. ಮಾದಕ ದ್ರವ್ಯ ಸೇವನೆ ಅಥವಾ ಸಂಬಂಧಿಸಿದ ಪ್ರಕರಣಗಳಲ್ಲಿ ದೊಡ್ಡ ಮೊತ್ತದ ದಂಡ ಹಾಗೂ ಮರಣ ದಂಡನೆಯನ್ನು ಕೂಡ ವಿಧಿಸಲಾಗುತ್ತದೆ.

6 / 8
ಟರ್ಕಿ: ಈ ದೇಶದಲ್ಲಿ ಮಾದಕ ವ್ಯಸನ ಸಂಬಂಧಿಸಿದ ಪ್ರಕರಣಗಳಿಗೆ ದಂಡ ಹಾಗೂ ದೀರ್ಘಾವಧಿಯ ಜೈಲು ಶಿಕ್ಷೆ ನೀಡಲಾಗುತ್ತದೆ. ಮಾದಕ ದ್ರವ್ಯ ಮಾರಾಟ ಮಾಡಿದವರಿಗೆ ಹೆಚ್ಚು ದಂಡ ಹಾಕಲಾಗುತ್ತದೆ.

7 / 8
ಸೌದಿ ಅರೇಬಿಯಾ: ಈ ದೇಶದಲ್ಲಿ ಮದ್ಯಪಾನ ಸಂಪೂರ್ಣ ನಿಷಿದ್ಧವಾಗಿದೆ. ಅಂತಹ ಸಂದರ್ಭ ಮಾದಕ ದ್ರವ್ಯ ವ್ಯಸನವನ್ನು ಅಂತೂ ಈ ದೇಶ ಕಠಿಣವಾಗಿ ಶಿಕ್ಷಿಸುತ್ತದೆ. ಡ್ರಗ್ಸ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಲಾಗುತ್ತದೆ.

8 / 8
ನಾರ್ತ್ ಕೊರಿಯಾ: ಈ ದೇಶವನ್ನು ಬಹಳ ವಿಶೇಷ ಅಥವಾ ವಿಚಿತ್ರವಾಗಿಯೂ ವಿದೇಶಿ ಜನರು ಪರಿಗಣಿಸುತ್ತಾರೆ. ಇಲ್ಲಿ ಮಾದಕ ವ್ಯಸನವನ್ನು ನಿಷೇಧಿಸಲಾಗಿದೆ. ಡ್ರಗ್ ಸೇವನೆ ಮಾಡಿದ ಅಪರಾಧಿಗಳನ್ನು ಇಲ್ಲಿ ದೀರ್ಘಾವಧಿ ಕ್ಯಾಂಪ್​ಗೆ ಕಳಿಸಲಾಗುತ್ತದೆ. ಅವರು ಕುಟುಂಬ ಸದಸ್ಯರು ಅಥವಾ ಗೆಳೆಯರನ್ನು ಕೂಡ ಆಗ ಭೇಟಿ ಆಗಲು ಸಾಧ್ಯ ಇರುವುದಿಲ್ಲ.