AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Badminton Asia C’ships: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್​ಶಿಪ್​ನಲ್ಲಿಂದು ಕ್ವಾರ್ಟರ್ ಫೈನಲ್: ಪಿವಿ ಸಿಂಧು ಮೇಲೆ ಎಲ್ಲರ ಕಣ್ಣು

PV Sindhu: ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು ಅವರು ಇಂದು ಎರಡನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಆನ್‌ ಸೆ ಯಂಗ್‌ ವಿರುದ್ಧ ಸೆಣಸಲಿದ್ದಾರೆ. ಎಂಟನೇ ಶ್ರೇಯಾಂಕದ ಸಿಂಧು ಚೀನಾದ ಯುಯೆ ಹಾನ್ ಅವರನ್ನು 21-12, 21-15 ರಿಂದ ಸೋಲಿಸಿದರು.

Vinay Bhat
|

Updated on:Apr 28, 2023 | 11:20 AM

Share
ದುಬೈನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಪಿವಿ ಸಿಂಧು, ಎಚ್‌ಎಸ್ ಪ್ರಣಯ್ ಮತ್ತು ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂದು ತಮ್ಮ ಕ್ವಾರ್ಟರ್‌ಫೈನಲ್ ಪಂದ್ಯಗಳನ್ನು ಆಡಲಿದ್ದಾರೆ.

1 / 7
ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿವಿ ಸಿಂಧು ಅವರು ಇಂದು ಎರಡನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಆನ್‌ ಸೆ ಯಂಗ್‌ ವಿರುದ್ಧ ಸೆಣಸಲಿದ್ದಾರೆ. ಎಂಟನೇ ಶ್ರೇಯಾಂಕದ ಸಿಂಧು ಚೀನಾದ ಯುಯೆ ಹಾನ್ ಅವರನ್ನು 21-12, 21-15 ರಿಂದ ಸೋಲಿಸಿದರು.

2 / 7
ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಎಂಟನೇ ಶ್ರೇಯಾಂಕದ ಪ್ರಣಯ್ ಅವರು ಜಪಾನ್‌ನ ಕಾಂಟಾ ತ್ಸುನೇಯಾಮಾ ಅವರೊಂದಿಗೆ ಸೆಣೆಸಾಡಲಿದ್ದಾರೆ. ಇವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಚಿಕೊ ಔರಾ ದ್ವಿ ವಾರ್ಡೋಯೊ ಅವರನ್ನು 21-16, 5-21, 21-18 ರಿಂದ ಸೋಲಿಸಿದರು.

3 / 7
ಇದರ ನಡುವೆ ಕಿಡಂಬಿ ಶ್ರೀಕಾಂತ್ ಅವರು ಜಪಾನ್‌ನ ನಾಲ್ಕನೇ ಶ್ರೇಯಾಂಕದ ಕೊಡೈ ನರೋಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

4 / 7
ವಿಶ್ವ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತರಾದ ಆರನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಅವರು ಸೆಮಿಫೈನಲ್‌ನಲ್ಲಿ ಸ್ಥಾನಕ್ಕಾಗಿ ಮೂರನೇ ಶ್ರೇಯಾಂಕದ ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಅವರನ್ನು ಎದುರಿಸಲಿದ್ದಾರೆ. ಭಾರತದ ಈ ಜೋಡಿಯು ಕೊರಿಯಾದ ಜಿನ್ ಯೋಂಗ್ ಮತ್ತು ನಾ ಸುಂಗ್ ಸೆಯುಂಗ್ ಅವರನ್ನು 16 ರ ಸುತ್ತಿನಲ್ಲಿ ಸೋಲಿಸಿತ್ತು.

5 / 7
ಇನ್ನು ಮಿಶ್ರ ಡಬಲ್ಸ್ ಜೋಡಿ ರೋಹನ್ ಕಪೂರ್ ಮತ್ತು ಸಿಕ್ಕಿ ರೆಡ್ಡಿ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಎರಡನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಸಿಯೊ ಸೆಯುಂಗ್ ಜೇ ಮತ್ತು ಚೇ ಯು ಜಂಗ್ ವಿರುದ್ಧ ಜಯ ಸಾಧಿಸಿದ್ದರು. ಭಾರತದ ಜೋಡಿಯು ಇಂಡೋನೇಷ್ಯಾದ ಡೇಜನ್ ಫರ್ಡಿನಾನ್ಸ್ಯಾ ಮತ್ತು ಗ್ಲೋರಿಯಾ ಇಮ್ಯಾನುಯೆಲ್ ವಿಡ್ಜಾಜಾ ಜೋಡಿಯನ್ನು ಎದುರಿಸಲಿದೆ.

6 / 7
ಮಹಿಳಾ ಡಬಲ್ಸ್ ಜೋಡಿ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಲಾಸ್ಟ್-16 ನಲ್ಲಿ ದಕ್ಷಿಣ ಕೊರಿಯಾದ ಜಿಯೋಂಗ್ ನಾ-ಯುನ್ ಮತ್ತು ಕಿಮ್ ಹೈ-ಜಿಯಾಂಗ್‌ಗೆ ವಾಕ್‌ಓವರ್ ನೀಡುವ ಮೂಲಕ ಪಂದ್ಯಾವಳಿಯಿಂದ ಹೊರಬಿದ್ದರು.

7 / 7

Published On - 11:20 am, Fri, 28 April 23

Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ