ಭಾರೀ ಮಳೆಗೆ ಬೀದರ್​ ಜಿಲ್ಲೆಯ ಜನ ಕಂಗಾಲು; ಮನೆ ಕಳೆದುಕೊಂಡವರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

Edited By: ಕಿರಣ್ ಹನುಮಂತ್​ ಮಾದಾರ್

Updated on: Sep 12, 2024 | 3:23 PM

ಬೀದರ್​ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೂರಾರು ಹೇಕ್ಟರ್​ನಷ್ಟು ಬೆಳೆ ಹಾನಿಯಾಗಿದ್ದು, 360 ಮನೆಗಳು ಸಹ ಕುಸಿದಿವೆ. ಬೆಳೆ ಹಾನಿ ಹಾಗೂ ಮನೆ ಕುಸಿದ ಫಲಾನುಭವಿಗಳಿಗೆ ಪರಿಹಾರ ಹಾರ ಕೊಡುತ್ತೇವೆಂದು ಸರಕಾರ ಕಾಲಹರಣ ಮಾಡುತ್ತಿದೆ. ಇದು ಸಹಜವಾಗಿಯೇ ಬೆಳೆ ಹಾಗೂ ಮನೆಕಳೆದುಕೊಂಡವರ ಆಕ್ರೋಶ ಹೆಚ್ಚಿಸುವಂತೆ ಮಾಡಿದ್ದು, ಬೇಗ ಪರಿಹಾರ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ.

1 / 6
ಬೀದರ್​ ಜಿಲ್ಲೆಯಲ್ಲಿ ವಾರದ ಹಿಂದೆ ಸುರಿದ ಮಳೆಯಿಂದಾಗಿ 500 ಹೆಕ್ಟರ್​ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹುಲುಸಾಗಿ ಬೆಳೆದ ಉದ್ದು, ಸೋಯಾ, ಹೆಸರು ಬೆಳೆ ಹಾನಿಯಾಗಿದೆ. ಜೊತೆಗೆ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಸುಮಾರು 360 ಮನೆಗಳು ಬಾಗಶಃ ಕುಸಿದಿದ್ದು, ಮನೆ ಕಳೆದುಕೊಂಡವರನ್ನ ಕಂಗಾಲು ಮಾಡಿದೆ.

ಬೀದರ್​ ಜಿಲ್ಲೆಯಲ್ಲಿ ವಾರದ ಹಿಂದೆ ಸುರಿದ ಮಳೆಯಿಂದಾಗಿ 500 ಹೆಕ್ಟರ್​ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಿದ ಹುಲುಸಾಗಿ ಬೆಳೆದ ಉದ್ದು, ಸೋಯಾ, ಹೆಸರು ಬೆಳೆ ಹಾನಿಯಾಗಿದೆ. ಜೊತೆಗೆ ಜಿಲ್ಲೆಯ ವಿವಿಧ ಗ್ರಾಮದಲ್ಲಿ ಸುಮಾರು 360 ಮನೆಗಳು ಬಾಗಶಃ ಕುಸಿದಿದ್ದು, ಮನೆ ಕಳೆದುಕೊಂಡವರನ್ನ ಕಂಗಾಲು ಮಾಡಿದೆ.

2 / 6

ಆವತ್ತಿನ ದುಡಿಮೆಯಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಏಕಾಏಕಿ ಮನೆ ಕುಸಿದಿರುವ ಪರಿಣಾಮವಾಗಿ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಲೇ ಬೇಕಾದ ಅನಿವಾರ್ಯತೆ ಅವರಿಗೆ ಬಂದೊದಗಿದೆ. ಆದರೆ, ಮೊದಲೆ ಮನೆ ಕಟ್ಟುವ ಮುನ್ನ ಸಾಲಮಾಡಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಆ ಸಾಲವೇ ಇನ್ನೂ ತೀರಿಲ್ಲ. ಇದರ ನಡುವೆ ಮತ್ತೆ ಬಿದ್ದಿರುವ ಮನೆಯನ್ನ ಕಟ್ಟಿಕೊಳ್ಳಬೇಕಾದರೆ ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ.

3 / 6

ಇನ್ನು ಮನೆ ಕಳೆದುಕೊಂಡ ಕೆಲವರಿಗೆ ಪರಿಹಾರ ಕೊಟ್ಟರೆ, ಇನ್ನೂ ಕೆಲವರಿಗೆ ಪರಿಹಾರ ಕೊಡಬೇಕಾಗಿದೆ. ಆದರೆ, ಸರಕಾರ ನಮಗೆ ಹಣ ಕೊಡುವ ಬದಲು ಬಿದ್ದಿರುವ ಮನೆಯನ್ನ ಕಟ್ಟಿಸಿಕೊಡಿ ಎಂದು ಇಲ್ಲಿನ ಮಹಿಳೆಯವರು ಸರಕಾರ, ಜಿಲ್ಲಾಢಳಿತ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಮಾಡುತ್ತಿದ್ದಾರೆ. 

4 / 6

ಈ ವಿಚಾರದ ಬಗ್ಗೆ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನ ಕೇಳಿದರೆ ‘ಸರಕಾರ ಶೇಕಡಾ 20 ರಷ್ಟಕ್ಕಿಂತ ಕೆಳಗಡೆ ಮನೆ ಕುಸಿದಿದ್ದರೆ, ಅಂತಹ ಮನೆಗಳಿಗೆ 6 ಸಾವಿರದಾ 5 ನೂರು ರೂಪಾಯಿ ಕೊಡುತ್ತಿದ್ದಾರೆ. ಇನ್ನೂ ಶೇಕಡಾ 20ಕ್ಕಿಂತಲೂ ಜಾಸ್ತಿ ಮನೆ ಕುಸಿತವಾಗಿದ್ದರೆ ಅದಕ್ಕೆ 30 ಸಾವಿರ ರೂಪಾಯಿ ಪರಿಹಾರ ಕೊಡುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಿಗೆ ಮನೆ ಕುಸಿತವಾಗಿದ್ದರೆ ಅವರಿಗೆ 50 ಸಾವಿರ ರೂ. ಕೊಡುತ್ತಿದ್ದೇವೆ. ಇನ್ನು ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡಿದ್ದರೆ, ಅಂತಹ ಫಲಾನುಭವಿಗೆ ಮನೆಯನ್ನ ಕಟ್ಟಿಸಿಕೊಡಬೇಕೆಂದು ಸರಕಾರದ ಮಟ್ಟದಲ್ಲಿ ತಿರ್ಮಾನ ಮಾಡಲಾಗಿದೆ ಎಂದಿದ್ದಾರೆ.

5 / 6

ಇನ್ನು ವಾರದ ಹಿಂದೆ ಸುರಿದ ಮಹಾ ಮಳೆಯಿಂದಾಗಿ ಜಿಲ್ಲೆಯ 5 ನೂರಕ್ಕೂ ಹೆಚ್ಚು ಹೆಕ್ಟರ್​ನಷ್ಟು ಬೆಳೆ ಹಾನಿಯಾಗಿದೆ. ಅಲ್ಲಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತುಕೊಂಡಿದ್ದು, ಅಲ್ಪಾವಧಿಯ ಪ್ರಮುಖ ಬೆಳೆಗಳಾದ ಉದ್ದು, ಸೋಯಾ, ಹೆಸರು ಬೆಳೆಗೆ ಕುತ್ತು ತಂದಿದೆ. ಇತ್ತ ಸಾಲಾಸೋಲಾ ಮಾಡಿ ಬಿತ್ತಿದ ಬೆಳೆ ಕೈಗೆ ಬರುತ್ತೊ ಇಲಲವೋ ಎಂದು ರೈತರನ್ನ ಚಿಂತೆಗೀಡು ಮಾಡಿದೆ.

6 / 6

ಈ ಬಾರಿ ಬೀದರ್ ಜಿಲ್ಲೆಯ ರೈತರ ಸ್ಥಿತಿ ಶೋಚನೀಯವಾಗಿದೆ. ಸೋಯಾ, ಅವರೆ, ಉದ್ದು ಜೋಳ, ಬೆಳೆಗಾರರ ಪರಿಸ್ಥಿತಿ ಸಂಪೂರ್ಣವಾಗಿ ಹದೆಗಿಟ್ಟಿದ್ದು, ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸೋಯಾ, ಉದ್ದು ಬೆಳೆಯನ್ನೇ ನಂಬಿಕೊಂಡಿದ್ದ ರೈತರಿಗೆ ಬರಸಿಡಿಲಿನಂತೆ ಬಂದ ಮಳೆ, ರೈತರ ಬದುಕನ್ನ ಬರ್ಬಾದ್ ಮಾಡಿದೆ.

ಸುರೇಶ್ ನಾಯಕ್

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Loading...
Unable to load recommendations.
Follow Us