ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ದುಲ್ಕರ್ ಸಲ್ಮಾನ್; ‘ಕಿಂಗ್’ ರೀತಿ ಪೋಸ್ ಕೊಟ್ಟ ಹೀರೋ

Edited By:

Updated on: Aug 17, 2023 | 9:31 AM

ದುಲ್ಕರ್ ಅವರು ಹಂಚಿಕೊಂಡಿರುವ ಹೊಸ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ‘ನೀವು ನಿಜಕ್ಕೂ ಕಿಂಗ್’ ಎಂದು ಅನೇಕರು ಬರೆದುಕೊಂಡಿದ್ದಾರೆ. ದುಲ್ಕರ್ ಅವರು ಬ್ಯಾಕ್ ಟು ಬ್ಯಾಕ್ ಗೆಲುವಿನ ಖುಷಿಯಲ್ಲಿದ್ದಾರೆ.

1 / 7
ನಟ ದುಲ್ಕರ್ ಸಲ್ಮಾನ್ ಅವರು ಮಲಯಾಳಂ ಹೀರೋ. ಆದರೆ, ತಮ್ಮ ಕಾರ್ಯವ್ಯಾಪ್ತಿಯನ್ನು ಕೇವಲ ಕೇರಳಕ್ಕೆ ಮಾತ್ರ ಸೀಮಿತ ಮಾಡಿಕೊಂಡಿಲ್ಲ. ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆ ಇದೆ.

ನಟ ದುಲ್ಕರ್ ಸಲ್ಮಾನ್ ಅವರು ಮಲಯಾಳಂ ಹೀರೋ. ಆದರೆ, ತಮ್ಮ ಕಾರ್ಯವ್ಯಾಪ್ತಿಯನ್ನು ಕೇವಲ ಕೇರಳಕ್ಕೆ ಮಾತ್ರ ಸೀಮಿತ ಮಾಡಿಕೊಂಡಿಲ್ಲ. ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಮಲಯಾಳಂ ಚಿತ್ರರಂಗದಲ್ಲಿ ಬೇಡಿಕೆ ಇದೆ.

2 / 7

ಈ ವರ್ಷ ದುಲ್ಕರ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಆಗಸ್ಟ್ 24ರಂದು ‘ಕಿಂಗ್ ಆಫ್ ಕೋತ್ತಾ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ.

3 / 7

ದುಲ್ಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ದುಲ್ಕರ್ ಅವರು ಹಂಚಿಕೊಂಡಿರುವ ಹೊಸ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ‘ನೀವು ನಿಜಕ್ಕೂ ಕಿಂಗ್’ ಎಂದು ಅನೇಕರು ಬರೆದುಕೊಂಡಿದ್ದಾರೆ.

4 / 7

‘ಕಿಂಗ್ ಆಫ್ ಕೋತ್ತಾ’ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಸಾಕಷ್ಟು ಗಮನ ಸೆಳೆಯುತ್ತಿದೆ. ದುಲ್ಕರ್ ಪಾತ್ರವೂ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ.

5 / 7

ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರು ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಲವು ಸೂಪರ್ ಹಿಟ್ ಚಿತ್ರ ನೀಡಿರುವ ಅವರು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

6 / 7

ದುಲ್ಕರ್ ಸಲ್ಮಾನ್ ಅವರು ‘ಕಿಂಗ್ ಆಫ್ ಕೋತ್ತಾ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಭಿಲಾಶ್ ಜೋಶಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

7 / 7

ಕಳೆದ ವರ್ಷ ರಿಲೀಸ್ ಆದ ‘ಸೀತಾ ರಾಮಂ’ ಸಿನಿಮಾ ಮೂಲಕ ದುಲ್ಕರ್ ಸಲ್ಮಾನ್ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ಈ ಚಿತ್ರಕ್ಕೆ ಮೃಣಾಲ್ ಠಾಕೂರ್ ನಾಯಕಿ.

Published On - 6:30 am, Thu, 17 August 23

TV9 Web

TV9 Kannada

Read More
Loading...
Unable to load recommendations.
Follow Us