ಆರ್ಥಿಕ ಸಮೀಕ್ಷೆ 2026; ಜಿಡಿಪಿ, ಹಣದುಬ್ಬರ, ಎಫ್​ಡಿಐ, ಇನ್ಷೂರೆನ್ಸ್ ಇತ್ಯಾದಿ ಬಗ್ಗೆ ವರದಿಯಲ್ಲಿ ಹೇಳಿದ್ದಿದು

Updated on: Jan 29, 2026 | 4:25 PM

ನವದೆಹಲಿ, ಜನವರಿ 29: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯನ್ನು ಇಂದು ಸಂಸತ್​ನಲ್ಲಿ ಮಂಡಿಸಲಾಗಿದೆ. ಬಜೆಟ್​ಗೆ ಕೆಲ ದಿನ ಮುನ್ನ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡುವುದು ವಾಡಿಕೆ. ದೇಶದ ಆರ್ಥಿಕ ಸ್ಥಿತಿಗತಿ ಹೇಗಿದೆ ಎನ್ನುವುದರ ಅಮೂಲಾಗ್ರ ಚಿತ್ರಣವನ್ನು ದೇಶದ ಮುಂದಿಡಲಾಗುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರಾದ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆ ವತಿಯಿಂದ ಈ ಸಮೀಕ್ಷೆಯನ್ನು ತಯಾರಿಸಲಾಗಿದೆ. ಈ ವರದಿಯಲ್ಲಿ ಮುಖ್ಯಾಂಶಗಳೇನಿವೆ ಎನ್ನುವುದರ ಮಾಹಿತಿ ಇಲ್ಲಿದೆ...

1 / 5
ಜಿಡಿಪಿ ದರ: ಸಿಇಎ ನೇತೃತ್ವದಲ್ಲಿ ಸಿದ್ಧಗೊಂಡ, ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು. 2026-27ರಲ್ಲಿ ಆರ್ಥಿಕ ಬೆಳವಣಿಗೆ ಶೇ. 6.8-7.2ರ ಶ್ರೇಣಿಯಲ್ಲಿ ಇರಬಹುದು ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಜಿಡಿಪಿ ದರ: ಸಿಇಎ ನೇತೃತ್ವದಲ್ಲಿ ಸಿದ್ಧಗೊಂಡ, ನಿರ್ಮಲಾ ಸೀತಾರಾಮನ್ ಮಂಡಿಸಿದ 2026ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.4ರಷ್ಟು ಹೆಚ್ಚಬಹುದು. 2026-27ರಲ್ಲಿ ಆರ್ಥಿಕ ಬೆಳವಣಿಗೆ ಶೇ. 6.8-7.2ರ ಶ್ರೇಣಿಯಲ್ಲಿ ಇರಬಹುದು ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

2 / 5

ಹಣದುಬ್ಬರ ದರ: ಹಣದುಬ್ಬರ ದರ ಭಾರತದಲ್ಲಿ ಇತ್ತೀಚೆಗೆ ಬಹಳ ಕಡಿಮೆಗೊಂಡಿರುವುದನ್ನು ಆರ್ಥಿಕ ಸಮೀಕ್ಷೆಯಲ್ಲಿ ಹೈಲೈಟ್ ಮಾಡಲಾಗಿದೆ. ಆದರೆ, ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ಮುಂದಿನ ವರ್ಷ (2026-27) ಹಣದುಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹೇಳಿರುವ ಈ ಸಮೀಕ್ಷೆಯು, ಈ ಏರಿಕೆ ಚಿಂತೆಪಡುವಷ್ಟಿಲ್ಲ ಎಂದೂ ತಿಳಿಸಿದೆ.

3 / 5

ಇನ್​ಫ್ರಾಸ್ಟ್ರಕ್ಚರ್ ಅಗತ್ಯ: ಇನ್​ಫ್ರಾಸ್ಟ್ರಕ್ಚರ್ ಎಂದರೆ ರಸ್ತೆ, ರೈಲು ನಿರ್ಮಾಣ ಮಾತ್ರವಾಗೇ ಉಳಿದಿಲ್ಲ. ಡಿಜಿಟಲ್ ಸಿಸ್ಟಂ, ಕ್ಲೀನ್ ಎನರ್ಜಿ, ಜಲ ನಿರ್ವಹಣೆ, ಹೊಸ ತಂತ್ರಜ್ಞಾನಗಳು ಇತ್ಯಾದಿಯೆಲ್ಲವೂ ಇನ್​ಫ್ರಾಸ್ಟ್ರಕ್ಚರ್ ಎನಿಸಿಕೊಳ್ಳುತ್ತವೆ. ಭಾರತದ ಮುಂದಿನ ಬೆಳವಣಿಗೆಗೆ ಪ್ರಮುಖ ಆಧಾರ ಸ್ತಂಭಗಳಲ್ಲಿ ಇನ್​ಫ್​ರಾಸ್ಟ್ರಕ್ಚರ್ ಕೂಡ ಒಂದಾಗಿರುತ್ತದೆ ಎಂಬುದನ್ನು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

4 / 5

ಇನ್ಷೂರೆನ್ಸ್ ಸೆಕ್ಟರ್: ದೇಶದಲ್ಲಿ ಹೆಚ್ಚಿನ ಭಾಗದ ಜನರು ಇನ್ಷೂರೆನ್ಸ್ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಇನ್ಷೂರೆನ್ಸ್ ಕಂಪನಿಗಳಿಗೆ ಆದಾಯ ಹೆಚ್ಚುತ್ತಿದೆ. ಆದರೆ, ಹೆಚ್ಚು ಜನರಿಗೆ ಅದು ವ್ಯಾಪಿಸುತ್ತಿಲ್ಲ ಎನ್ನುವ ಅಂಶವನ್ನು ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಇನ್ಷೂರೆನ್ಸ್ ಉತ್ಪನ್ನಗಳ ಮಾರಾಟ ಅಧಿಕಗೊಳ್ಳಬೇಕು ಎನ್ನುವ ಸಲಹೆಯನ್ನೂ ಅದು ನೀಡಿದೆ.

5 / 5

ಎಫ್​ಡಿಐಗಳ ಹರಿವು: ಸಮೀಕ್ಷೆ ಪ್ರಕಾರ 2025ರ ಏಪ್ರಿಲ್​ನಿಂದ ನವೆಂಬರ್​ವರೆಗಿನ ಅವಧಿಯಲ್ಲಿ ಒಟ್ಟೂ ಎಫ್​ಡಿಐ ಒಳಹರಿವು 64.7 ಬಿಲಿಯನ್ ಡಾಲರ್ ಇದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 55.8 ಬಿಲಿಯನ್ ಡಾಲರ್ ವಿದೇಶೀ ನೇರ ಹೂಡಿಕೆಗಳು ಹರಿದುಬಂದಿದ್ದವು. ನಿವ್ವಳ ಎಫ್​ಡಿಐ ಒಳಹರಿವು ಏಳು ಪಟ್ಟು ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಹಂಚಿಕೊಳ್ಳಲಾಗಿದೆ.

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us