ಬಹುನಿರೀಕ್ಷಿತ ‘ಏಕ್ ಲವ್ ಯಾ’ ಸಿನಿಮಾವನ್ನು ವೀಕ್ಷಿಸಲು ರಾಜಕೀಯದ ಹಲವು ಮುಖಂಡರಿಗೆ ಪ್ರೇಮ್ ಆಹ್ವಾನ ನೀಡಿದ್ದಾರೆ. ಖುದ್ದಾಗಿ ಭೇಟಿ ನೀಡಿ ಅನೇಕರನ್ನು ಅವರು ಆಹ್ವಾನಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಕರ್ನಾಟಕ ಸರ್ಕಾರ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೂ ಗುಚ್ಛ ನೀಡುವ ಮೂಲಕ ಪ್ರೇಮ್ ಅವರು ಆತ್ಮೀಯವಾಗಿ ಆಹ್ವಾನ ನೀಡಿದ್ದಾರೆ.
ರಾಜಕೀಯದ ಅನೇಕ ಗಣ್ಯರ ಜೊತೆಗೆ ಪ್ರೇಮ್ ಅವರಿಗೆ ಒಡನಾಟ ಇದೆ. ಅವರೆಲ್ಲರೂ ಬಂದು ತಮ್ಮ ಸಿನಿಮಾ ವೀಕ್ಷಿಸಲಿ ಎಂಬುದು ಪ್ರೇಮ್ ಆಸೆ. ಅದಕ್ಕಾಗಿ ಫೆ.23ರಂದು ವಿಶೇಷ ಪ್ರದರ್ಶನವನ್ನು ಅವರು ಏರ್ಪಡಿಸಲಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ನಿರ್ದೇಶಕ ಪ್ರೇಮ್ ಅವರು ಆಹ್ವಾನ ನೀಡಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಕೊವಿಡ್ ಕಂಟಕದಿಂದ ಕುಗ್ಗಿರುವ ಕನ್ನಡ ಚಿತ್ರರಂಗಕ್ಕೆ ಬೆನ್ನೆಲುಬಾಗಿ ನಿಂತು ನಮ್ಮ ‘ಏಕ್ ಲವ್ ಯಾ’ ಸಿನಿಮಾ ವೀಕ್ಷಣೆ ಮಾಡುವುದರ ಮೂಲಕ ಮತ್ತೆ ಕನ್ನಡಿಗರಲ್ಲಿ ಭಾಷಾಭಿಮಾನ ಹಾಗೂ ಚಿತ್ರರಂಗದ ಮೇಲಿನ ಪ್ರೀತಿಯನ್ನು ಹೆಚ್ಚಿಸಬೇಕೆಂದು ಕೇಳಿಕೊಳ್ಳುತ್ತೇವೆ’ ಎಂದು ಪ್ರೇಮ್ ಹೇಳಿದ್ದಾರೆ.