Kannada News Photo gallery Emotional affair can also be dangerous for relationships, know what it is and how to avoid it kannada news
ಭಾವನಾತ್ಮಕ ಸಂಬಂಧ ಎಂದರೇನು? ಅದು ಅಪಾಯಕಾರಿ ಹೇಗೆ?
ದೇಹಕ್ಕೆ ಆಗುವ ಗಾಯಕ್ಕಿಂತ ಮನಸ್ಸಿಗೆ ಆಗುವ ಗಾಯ ಹೆಚ್ಚು ಗಾಢವಾಗಿರುತ್ತದೆ, ಅದು ಮಾಸುವುದೇ ಇಲ್ಲ ಎಂಬುದನ್ನು ನೀವು ಕೇಳಿರಬಹುದು. ಹಾಗಾಗಿ ದೈಹಿಕ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧವೇ ಹೆಚ್ಚು ಅಪಾಯಕಾರಿ.
1 / 7
ಯಾವುದೇ ಸಂಬಂಧ ಆರಂಭಗೊಳ್ಳುವುದು ಭಾವನಾತ್ಮಕವಾಗಿಯೇ, ಸ್ನೇಹವಿರಲಿ, ಪ್ರೀತಿ ಇರಲಿ ಪ್ರೀತಿ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ ಎಂದು ಎಷ್ಟೇ ಹೇಳಿದರೂ ಅದೂ ಕೂಡ ಭಾವನಾತ್ಮಕವಾಗಿಯೇ ಶುರುವಾಗುವುದು.
2 / 7
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜತೆಗೆ ದೈಹಿಕವಲ್ಲದ ರೀತಿಯಲ್ಲಿ ಹತ್ತಿರವಾದಾಗ ಅದನ್ನು ಭಾವನಾತ್ಮಕ ಸಂಬಂಧ ಎಂದು ಕರೆಯಲಾಗುತ್ತದೆ. ಅವರ ಮಧ್ಯೆ ಅನ್ಯೋನ್ಯತೆ ಹೆಚ್ಚಿರುತ್ತದೆ.
3 / 7
ಭಾವನಾತ್ಮಕವಾಗಿ ಒಬ್ಬರನ್ನು ದೂರ ಇಡಲು ಬಯಸುವಾಗ ನಿಮ್ಮ ಮನಸ್ಸು ಹೇಳುವ ಮಾತುಗಳು
ನಿಮ್ಮ ಸಂಗಾತಿಯಿಂದ ದೂರ ಇರುವುದು
ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಅಥವಾ ಲೈಂಗಿಕವಾಗಿರಲು ಆಸಕ್ತಿ ಇರುವುದಿಲ್ಲ
4 / 7
ನಿಮ್ಮ ಆಲೋಚನೆ ಹಾಗೂ ಭಾವನೆಗಳನ್ನು ಸಂಗಾತಿ ಬದಲಿಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೀರಿ
ನಿಮ್ಮ ಸಂಗಾತಿಗಿಂತ ನಿಮ್ಮ ಸ್ನೇಹಿತರೇ ನಿಮ್ಮನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಂತೆ ತೋರುತ್ತದೆ.
5 / 7
ಯಾರೋ ಮೋಸ ಮಾಡಿದ್ದಾರೆ ಎಂಬುದು ತುಂಬಾ ನೋವಿನ ಸಂಗತಿ ಹೌದು, ಮೋಸ ಎಂದ ತಕ್ಷಣ ಲೈಂಗಿಕತೆಯನ್ನೇ ಅದು ಒಳಗೊಂಡಿರಬೇಕೆಂದೇನಿಲ್ಲ, ಮಾನಸಿಕವಾಗಿ ಒಬ್ಬರು ಹತ್ತಿರವಾಗಿದ್ದರೆ ಅವರು ನಮಗೆ ಮೋಸಮಾಡಿದಾಗ ಆಗುವ ನೋವು ತುಸು ಹೆಚ್ಚೇ ಇರುತ್ತದೆ. ಅದು ಕೇವಲ ಪ್ರೇಮಿಗಳಿಗಲ್ಲ ಸ್ನೇಹಿತರಿಗೂ ಅನ್ವಯಿಸಬಹುದು.
6 / 7
ಭಾವನಾತ್ಮಕವಾಗಿ ಸಂಬಂಧ ಸಾಧಿಸಿದರೆ ಅದರಿಂದ ಹೊರಬರಲು ಸಾಧ್ಯವಿಲ್ಲ, ಹೀಗಾಗಿ ನಿಮ್ಮ ಭಾವನೆಗಳಿಗೆ ಸಂವೇದನಾಶೀಲರಾಗಿರಿ. ಆದಾಗ್ಯೂ, ನಿಮ್ಮ ಸಹೋದ್ಯೋಗಿ ಭಾವನಾತ್ಮಕ ಬೆಂಬಲಕ್ಕಾಗಿ ಕಾಯುತ್ತಿರುವ ವ್ಯಕ್ತಿ ನೀವಾಗುವುದನ್ನು ತಪ್ಪಿಸಲು ಕಚೇರಿಯಲ್ಲಿ ಅಷ್ಟಾಗಿ ಯಾರೊಂದಿಗೂ ಮಾತನಾಡಲು ಹೋಗಬೇಡಿ.
ಕಚೇರಿಯಲ್ಲಿ ಎಲ್ಲರೊಂದಿಗೂ ಮಾತನಾಡಿ, ಆದರೆ ಒಬ್ಬರೇ ಯಾರೊಂದಿಗೂ ಭಾವನಾತ್ಮಕವಾಗಿ ಮಾತನಾಡಬೇಡಿ, ಎಲ್ಲರಿದ್ದಾಗ ಅವರೊಂದಿಗೆ ಹರಟೆ ಹೊಡೆಯಿರಿ.
7 / 7
ಕೆಲವೊಮ್ಮೆ ನೀವು ಭಾವನಾತ್ಮಕವಾಗಿ ಒಬ್ಬರೊಂದಿಗೆ ಸಂಬಂಧ ಹೊದಿರುತ್ತೀರಿ ಆಗ ಬೇರೆ ವ್ಯಕ್ತಿ ಮತ್ತೊಬ್ಬರ ಎದುರಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಾಗಿರಲಿ, ಮಾತೆತ್ತಿದರೆ ನಿಮ್ಮ ಜತೆ ಜಗಳವಾಡುವುದು ಈ ರೀತಿಯ ಲಕ್ಷಣಗಳು ಕಂಡುಬಂದರೆ ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೇರಬೇಕಾಗುತ್ತದೆ ಇಲ್ಲವಾದಲ್ಲಿ ನೀವು ನೋವು ಅನುಭವಿಸುವುದು ಖಚಿತ.