
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ಹಿರಿಯ ಮಗ ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.

ಮಾಜಿ ಸಚಿವ, ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರ ಕುಟುಂಬ ಕಾನೂನು ತನಿಖೆ ಸುಳಿಗೆ ಸಿಲುಕಿ ಒದ್ದಾಡುತ್ತಿದೆ.

ಪ್ರಜ್ವಲ್ ರೇವಣ್ಣ

ಎಚ್ಡಿ ರೇವಣ್ಣ

ಇದೇ ಸಂತ್ರಸ್ಥೆ ಅಪಹರಣ ಕೇಸ್ ನಲ್ಲಿ ಜಾಮೀನು ಅರ್ಜಿ ವಜಾ ಆಗಿ ಬಂಧನ ಭೀತಿ ಎದುರಿಸಿದ್ದ ಭವಾನಿ ರೇವಣ್ಣ. ಹೈಕೋರ್ಟ್ ನಲ್ಲಿ ಸಿಕ್ಕ ನಿರೀಕ್ಣಣಾ ಜಾಮೀನಿನಿಂದ ಬಂಧನದ ಭೀತಿಯಿಂದ ಪಾರಾಗಿದ್ದಾರೆ.

ರೇವಣ್ಣ ಮೈಸೂರು ಜಿಲ್ಲೆಯ ಕೆ ಆರ್ ನಗರಕ್ಕೆ ಹೋಗುವಂತಿಲ್ಲ ಎನ್ನುವ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ಇನ್ನು ಭವಾನಿಗೆ ಕೆ ಆರ್ ನಗರ ಸೇರಿ ಹಾಸನ ಜಿಲ್ಲೆಗೂ ಬಾರದಂತೆ ಷರತ್ತು ವಿಧಿಸಿ ಅವರಿಗೆ ಜಾಮೀನು ನೀಡಿದೆ.

ಇದೀಗ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ರೇವಣ್ಣ ಅವರ ಹಿರಿಯ ಪುತ್ರ ವಿಧಾನಪರಿಷತ್ ಸದಸ್ಯ ಸೂರಜ್ ಕೂಡ ಅರೆಸ್ಟ್ ಆಗಿದ್ದಾರೆ.

ಸೂರಜ್.

ಒಟ್ಟಾರೆ ರೇವಣ್ಣ ಕುಟುಂಬಕ್ಕೆ ಶಾಕ್ ಮೇಲೆ ಶಾಕ್ ಎದುರಾಗ್ತಲೇ ಇದೆ. ಒಬ್ಬರ ಮೇಲಂತೆ ಒಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇದೀಗ ಸೂರಜ್ ರೇವಣ್ಣ ಅರೆಸ್ಟ್ ಆಗಿದ್ದು, ತನಿಖೆ ಎದುರಿಸುತ್ತಿದ್ದಾರೆ.
Published On - 10:34 am, Sun, 23 June 24