
ಕರ್ನಾಟಕ ಬೇಲ್ ಹೌಸ್ ಬಸವನಗುಡಿ: ಸೇವ್ ಪುರಿ, ಮಸಾಲಾ ಪುರಿ,ದಹಿ ಪುರಿಗಳಂತಹ ಚಾಟ್ಸ್ ಗಳನ್ನು ಇಷ್ಟ ಪಡುವವರು ಹೋಗಲೇಬೇಕಾದ ಬೆಂಗಳೂರಿನ ಟಾಪ್ ಚಾಟ್ಸ್ ಅಂಗಡಿಗಳಲ್ಲಿ ಇದೂ ಒಂದು. ಕೈಗೆಟುಕುವ ಬೆಲೆಯಲ್ಲಿ ರುಚಿಕರ ವಿವಿಧ ಬಗೆಯ ಚಾಟ್ಸ್ ಸಿಗುವುದು ಇಲ್ಲಿನ ವಿಶೇಷ.

ಹರಿ ಸೂಪರ್ ಸ್ಯಾಂಡ್‌ವಿಚ್ ಜಯನಗರದಲ್ಲಿರುವ ಈ ಸ್ಥಳದಲ್ಲಿ ರುಚಿಕರ ಸ್ಯಾಂಡ್‌ವಿಚ್‌ಗಳು ಮತ್ತು ಚಾಟ್‌ಗಳನ್ನು ಕೈಗೆಟುಕುವ ದರದಲ್ಲಿ ಸವಿಯಬಹುದಾಗಿದೆ. ಸ್ಯಾಂಡ್‌ವಿಚ್‌ಗಳೇ ಇಲ್ಲಿನ ವಿಶೇಷ.

ಬ್ರಾಹ್ಮಿನ್ಸ್ ಕಾಫಿ ಬಾರ್ ಬಸವನಗುಡಿ: ಬೆಂಗಳೂರಿನ ಬಸವನಗುಡಿಯಲ್ಲಿರುವ ಬ್ರಾಹ್ಮಣರ ಕಾಫಿ ಬಾರ್‌ನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಆಹಾರವನ್ನು ಸವಿಯಬಹುದು. ಮೃದುವಾದ ಮತ್ತು ಗರಿಗರಿಯಾದ ವಡಾಗಳು, ಬಿಸಿ ಬಿಸಿ ಅನ್ನ, ಇಡ್ಲಿ ಸಾಂಬಾರ್ ಇಲ್ಲಿನ ವಿಶೇಷ.

ವೀಣಾ ಸ್ಟೋರ್ ಮಲ್ಲೇಶ್ವರಂ: ನೀವು ಬೆಂಗಳೂರಿನಲ್ಲಿ ಅತ್ಯುತ್ತಮ ಬಿಸಿಬೇಳೆ ಬಾತ್, ಇಡ್ಲಿ ವಡಾ, ಖಾರಾ ಬಾತ್ ಮುಂತಾದ ತಿಂಡಿಗಳನ್ನು ಪಡೆದುಕೊಳ್ಳಲು ಬಯಸಿದರೆ, ಒಮ್ಮೆ ಇಲ್ಲಿಗೆ ಭೇಟಿ ನೀಡಿ. ಕೈಗೆಟುಕುವ ದರದಲ್ಲಿ ಸವಿಯಬಹುದಾಗಿದೆ

ಶಾ ಇ ದರ್ಬಾರ್ ಯಶವಂತಪುರ ಡಬಲ್ ಪನೀರ್ ರೋಲ್, ಡಬಲ್ ಎಗ್ ಚಿಕನ್ ರೋಲ್ , ವೆಜ್ ರೋಲ್ ಇಲ್ಲಿನ ವಿಶೇಷವಾಗಿದೆ. ಸಾಕಷ್ಟು ಸ್ಟೂಡೆಂಟ್ ಗಳ ಫೇವರೇಟ್ ಫುಡ್ ಸ್ಪಾಟ್ ಇದಾಗಿದೆ. ಇದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ತೆರೆದಿರುತ್ತದೆ.

CTR ಶೀನಗರ್ ಮಲ್ಲೇಶ್ವರಂ ಅಗಾಧ ಸಂಖ್ಯೆಯ ಗ್ರಾಹಕರಿಗೆ ನಿರಂತರವಾಗಿ ರುಚಿಕರವಾದ ಬೆಣ್ಣೆ ಮಸಾಲಾ ದೋಸೆಯನ್ನು ನೀಡುವುದು ಅಷ್ಟು ಸುಲಭವಲ್ಲ. ಆದರೆ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಸಿಟಿಆರ್ ಆರು ದಶಕಗಳಿಂದ ಅದ್ಭುತವಾಗಿ ಈ ಕೆಲಸ ಮಾಡುತ್ತಿದ್ದು, ದೋಸೆ ಪ್ರಿಯರಿಗೆ ಖುಷಿ ತಂದಿದೆ. ವಿವಿಧ ದೋಸೆಗಳ ಹೊರತಾಗಿ ಇಲ್ಲಿ ಇಡ್ಲಿ - ವಡಾ, ಕೇಸರಿ ಬಾತ್ ಮತ್ತು ಪೂರಿ ಸಾಗು ಲಭ್ಯವಿದೆ.

ಫುಡ್ ಸ್ಟ್ರೀಟ್ ಬೆಂಗಳೂರು ವಿ ವಿ ಪುರಂ: ವಿವಿಧ ಬಗೆಯ ಮಸಾಲೆ ದೋಸೆಯಿಂದ ಹಿಡಿದು ಸಿಹಿಯಾದ ದಾಲ್ ಹೋಳಿಗೆಯವರೆಗೆ, ಬೆಂಗಳೂರಿನ ಫುಡ್ ಸ್ಟ್ರೀಟ್‌ನಲ್ಲಿ ನೀವು ತಿನ್ನಲು ಬಯಸುವ ಹಲವಾರು ರೀತಿಯ ರುಚಿಯ ಆಹಾರಗಳಿವೆ. ಇಲ್ಲಿನ ಆಹಾರವೂ ಕೈಗೆಟಕುವ ದರದಲ್ಲಿದ್ದು, ಪಾವ್ ಭಾಜಿ ಸ್ಟಾಲ್, ಸ್ವೀಟ್ ಕಾರ್ನ್ ಸ್ಟಾಲ್, ಮಂಚೂರಿಯನ್ ಸ್ಟಾಲ್ ಸೇರಿದಂತೆ ಹಲವಾರು ಸ್ಟಾಲ್‌ಗಳು ಇಲ್ಲಿವೆ.
Published On - 3:44 pm, Sun, 30 October 22