Updated on: Apr 04, 2023 | 3:19 PM
ನಟಿ ಮೃಣಾಲ್ ಠಾಕೂರ್ ಅವರು ‘ಸೀತಾ ರಾಮಂ’ ಸಿನಿಮಾ ಮೂಲಕ ಫೇಮಸ್ ಆದರು. ಅವರು ಈ ಚಿತ್ರದಲ್ಲಿ ಸೀರೆ ಉಟ್ಟು ಸಖತ್ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದರು. ಈ ಪಾತ್ರ ಎಲ್ಲರ ಮನಸ್ಸಲ್ಲೂ ಅಚ್ಚಳಿಯಾಗಿ ಉಳಿದಿದೆ.
ಸೆಲೆಬ್ರಿಟಿಗಳು ಸಿನಿಮಾದಲ್ಲಿ ಮಾಡೋದು ಕೇವಲ ಪಾತ್ರ. ಆದರೆ, ಅವರು ತೆರೆ ಹಿಂದೆಯೂ ಅದೇ ರೀತಿ ಇರಬೇಕು ಎಂದು ಫ್ಯಾನ್ಸ್ ಬಯಸುತ್ತಾರೆ.
‘ಸೀತಾ ರಾಮಂ’ ಸಿನಿಮಾ ವಿಚಾರದಲ್ಲೂ ಇದೇ ರೀತಿ ಆಗಿದೆ. ಎಲ್ಲರೂ ಮೃಣಾಲ್ ಅವರನ್ನು ಸೀತೆ ಪಾತ್ರದ ರೀತಿಯೇ ಕಲ್ಪಿಸಿಕೊಳ್ಳುತ್ತಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ.
ಮೃಣಾಲ್ ಅವರು ಬಿಕಿನಿ ತೊಟ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಮೃಣಾಲ್ ಅವರ ಬಿಕಿನಿ ಫೋಟೋ ಎಲ್ಲರ ಗಮನ ಸೆಳೆದಿದೆ.
ಮೃಣಾಲ್ ಅವರ ಬಿಕಿನಿ ಫೋಟೋ ನೋಡಿ ಅನೇಕರಿಗೆ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈ ಫೋಟೋಗೆ ಫ್ಯಾನ್ಸ್ ನೆಗೆಟಿವ್ ಕಮೆಂಟ್ ಹಾಕುತ್ತಿದ್ದಾರೆ.