Updated on: Nov 29, 2022 | 3:58 PM
ಖತರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನ ಮೊದಲ ಸುತ್ತಿನಿಂದ ಮೂರು ತಂಡಗಳು ನಾಕೌಟ್ (ಪ್ರೀ ಕ್ವಾರ್ಟರ್ ಫೈನಲ್) ಹಂತಕ್ಕೇರಿದೆ. ಸೋಮವಾರ ನಡೆದ ಪಂದ್ಯದಲ್ಲಿ ಉರುಗ್ವೆ ವಿರುದ್ಧ 2 ಗೋಲುಗಳಿಂದ ಗೆಲುವು ದಾಖಲಿಸುವ ಮೂಲಕ ಪೋರ್ಚುಗಲ್ ಮುಂದಿನ ಹಂತಕ್ಕೇರುವುದನ್ನು ಖಚಿತಪಡಿಸಿಕೊಂಡಿತು.
ಅದಕ್ಕೂ ಮುನ್ನ ಸ್ವಿಟ್ಜರ್ಲ್ಯಾಂಡ್ ತಂಡವನ್ನು 1 ಗೋಲುಗಳ ಅಂತದಿಂದ ಮಣಿಸಿದ ಬ್ರೆಝಿಲ್ ನಾಕೌಟ್ ಹಂತಕ್ಕೆ ದಾಪುಗಾಲಿಟ್ಟಿತು. ಇನ್ನು ಈ ಬಾರಿಯ ವಿಶ್ವಕಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಹಂತಕ್ಕೇರಿದ ಮೊದಲ ತಂಡವೆಂದರೆ ಫ್ರಾನ್ಸ್.
ಇದರೊಂದಿಗೆ 32 ತಂಡಗಳಲ್ಲಿ ಮೂರು ತಂಡಗಳು 16ರ ಘಟ್ಟದಲ್ಲಿ ಆಡುವುದನ್ನು ಖಚಿತಪಡಿಸಿಕೊಂಡಿದೆ. ಆ ತಂಡಗಳು ಯಾವುದೆಂದರೆ...
ಬ್ರೆಝಿಲ್ (ಗ್ರೂಪ್-Group G)
ಪೋರ್ಚುಗಲ್ (ಗ್ರೂಪ್-H)
ಫ್ರಾನ್ಸ್ (ಗ್ರೂಪ್- D)
ಆಡಿರುವ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಡೆನ್ಮಾರ್ಕ್ ತಂಡಗಳನ್ನು ಮಣಿಸಿರುವ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು ಮುಂದಿನ ಹಂತಕ್ಕೇರಿದೆ.
ಇನ್ನು ಘಾನಾ ಹಾಗೂ ಉರುಗ್ವೆ ವಿರುದ್ಧ ಕಣಕ್ಕಿಳಿದ ಪೋರ್ಚುಗಲ್ ತಂಡವು 2 ಭರ್ಜರಿ ಜಯದೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.
ಇನ್ನು 5 ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡವು ಆಡಿದ 2 ಪಂದ್ಯಗಳಲ್ಲಿ ಸರ್ಬಿಯಾ ಹಾಗೂ ಸ್ವಿಟ್ಜರ್ಲ್ಯಾಂಡ್ ಜಯ ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಇನ್ನು ಎಲ್ಲಾ 32 ತಂಡಗಳಿಗೆ ಒಂದೊಂದು ಪಂದ್ಯ ಉಳಿದಿದ್ದು, ಇದರಲ್ಲಿ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಲಿರುವ 13 ತಂಡಗಳಾವುವು ಕಾದು ನೋಡಬೇಕಿದೆ.