
ಫಿಫಾ ವಿಶ್ವಕಪ್ 2022 ನವೆಂಬರ್ 20 ರಿಂದ ಕತಾರ್‌ನಲ್ಲಿ ಪ್ರಾರಂಭವಾಗುತ್ತದೆ. ಫುಟ್ಬಾಲ್ನ ಈ ಮಹಾಯುದ್ಧದಲ್ಲಿ, ಅನೇಕ ದಿಗ್ಗಜ ಆಟಗಾರರು ಮೈದಾನದಲ್ಲಿ ತಮ್ಮ ಕಾಲ್ಚೆಳಕ ತೋರಲಿದ್ದಾರೆ. ಒಂದೆಡೆ ಆಟಗಾರರು ಅದ್ಭುತ ಪ್ರದರ್ಶನದಿಂದ ಸುದ್ದಿಯಾದರೆ, ಇನ್ನು ಅವರ ಪತ್ನಿಯರು ಮತ್ತು ಗೆಳತಿಯರು ಸಹ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಲಿದ್ದಾರೆ. ಅಂತಹ ಖ್ಯಾತ ಫುಟ್ಬಾಲ್ ಆಟಗಾರರ ಮಡದಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬ್ರೆಜಿಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ನೇಮರ್ ಬಗ್ಗೆ ಫುಟ್ಬಾಲ್ ಜಗತ್ತಿನಲ್ಲಿ ತಿಳಿಯದವರಿಲ್ಲ. ಬ್ರೆಜಿಲ್ ತಂಡದ ಬೆನ್ನೇಲುಬಾಗಿರುವ ನೇಮರ್ಗೆ ಬ್ರೂನಾ ಮಾರ್ಕ್ವೆಜಿನ್ ಎಂಬ ಪ್ರೇಯಸಿ ಇದ್ದು, ಅವರು ಬ್ರೆಜಿಲಿಯನ್ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ತನ್ನ ಅದ್ಭುತ ಆಟದಿಂದ ವಿಶ್ವದೆಲ್ಲೆಡೆ ಹೆಸರುವಾಸಿಯಾಗಿರುವ ಕ್ರಿಸ್ಟಿಯಾನೋ ರೊನಾಲ್ಡೊ ಅನೇಕ ಮಾಡೆಲ್‌ಗಳೊಂದಿಗೆ ಡೇಟಿಂಗ್ ಮಾಡಿರುವುದು ಈಗ ಹಳೆಯ ವಿಚಾರ. ಸದ್ಯ ರೊನಾಲ್ಡೊ ತನ್ನ ಹಾಲಿ ಗೆಳತಿ ಜಾರ್ಜಿನಾ ರೊಡ್ರಿಗಸ್ ಜತೆ ಜೀವನ ನಡೆಸುತ್ತಿದ್ದು, ಈ ಇಬ್ಬರಿಗೂ ಒಂದು ಮಗುವಿದೆ.

ಇನ್ನು ಲಿಯೋನೆಲ್ ಮೆಸ್ಸಿ ವಿಶ್ವಕಪ್ಗಾಗಿ ತನ್ನ ಪತ್ನಿ ಆಂಟೋನೆಲ್ಲಾ ರೊಕುಝೊ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಆಂಟೋನೆಲ್ಲಾ ಹಾಗೂ ಮೆಸ್ಸಿ ಬಾಲ್ಯದ ಗೆಳೆಯರಾಗಿದ್ದು, 5 ವರ್ಷ ವಯಸ್ಸಿನವರಾಗಿದ್ದಾಗಿಂದಲೂ ಈ ಇಬ್ಬರಿಗೂ ಪರಿಚಯ ಇತ್ತು. ವಾಸ್ತವವಾಗಿ ಅಂಟೋನೆಲ್ಲಾ ಮೆಸ್ಸಿಯವರ ಸ್ನೇಹಿತನ ಸೋದರಸಂಬಂಧಿಯಾಗಿದ್ದಾರೆ.

ಉರುಗ್ವೆ ತಂಡದ ಸ್ಟ್ರೈಕರ್ ಲೂಯಿಸ್ ಸೌರೆಜ್ ಅವರ ಪತ್ನಿ ಸೋಫಿಯಾ ಬಾಲ್ಬಿ ಕೂಡ ಕತಾರ್‌ನಲ್ಲಿ ನಡೆಯಲಿರುವ 2022 ರ ಫಿಫಾ ವಿಶ್ವಕಪ್‌ಗೆ ಅವರೊಂದಿಗೆ ಹೋಗಿದ್ದಾರೆ. ಸದ್ಯ ಸೌರೆಜ್ ಮತ್ತು ಸೋಫಿಯಾ ಬಾಲ್ಬಿ ಮೂವರು ಮಕ್ಕಳ ಪೋಷಕರಾಗಿದ್ದಾರೆ.

ಜರ್ಮನಿಯ ಲೆಜೆಂಡರಿ ಫುಟ್ಬಾಲ್ ಆಟಗಾರ ಥಾಮಸ್ ಮುಲ್ಲರ್ ಅವರ ಪತ್ನಿ ಲಿಸಾ ಮುಲ್ಲರ್ ಕೂಡ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಿಸಾ ಮುಲ್ಲರ್ ಕೂಡ ಒಬ್ಬ ಅಥ್ಲೀಟ್ ಆಗಿದ್ದು, ಅವರು ಶೂಟಿಂಗ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.