ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮತದಾನ ನಡೆಯಲಿದೆ. ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುವುದನ್ನು ತಿಳಿಯಲು ಈ ಹಂತಗಳನ್ನು ಫಾಲೋ ಮಾಡಿ. ಮೊದಲು https://ceo.karnataka.gov.in ವೈಬ್ ಸೈಟ್ಗೆ ಭೇಟಿ ನೀಡಿ.
ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಹುಡುಕುವುದು ಎಂಬವುದನ್ನು ಕ್ಲಿಕ್ ಮಾಡಿ.
ಬಳಿಕ ನಿಮ್ಮ ಹೆಸರು, ವಯಸ್ಸು, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸಿ. ಹುಡುಕಿ ಕ್ಲಿಕ್ ಮಾಡಿ.
ನಿಮ್ಮಸ್ಕ್ರೀನ್ನ ಕೆಳಭಾಗದಲ್ಲಿ ನಿಮ್ಮ ಸಂಪೂರ್ಣ ವಿವರ ದೊರೆಯುತ್ತದೆ.
ಇದು ಮತದಾನದ ಪಟ್ಟಿಯಲ್ಲಿ ನಿಮ್ಮ ಹೆಸರು ತಿಳಿಯೂವ ಒಂದು ವಿಧಾನವಾದರೆ, ಈ ವಿಧಾನ ಮೂಲಕವೂ ನೀವು ತಿಳಿಯಬಹುದಾಗಿದೆ. ಪ್ಲೇ ಸ್ಟೋರ್ನಲ್ಲಿ ಓಟರ್ ಹೆಲ್ಪ್ಲೈನ್ ಆಪ್ನ್ನು ಡೌನ್ಲೋಡ್ ಮಾಡಿ.
ನಿಮಗೆ ಸೂಕ್ತವಾಗುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ. search your name electoral roll ಅನ್ನು ಕ್ಲಿಕ್ ಮಾಡಿ.
ಬಳಿಕ ನಿಮಗೆ ನಾಲ್ಕು ಆಯ್ಕೆಗಳು ಸಿಗುತ್ತವೆ.
ಸರ್ಚ್ ಬೈ ಬಾರ್ ಕೋಡ್, ಸರ್ಚ್ ಬೈ, ಕ್ಯೂಆರ್ ಕೋಡ್, ಸರ್ಚ್ ಬೈ ಡೀಟೈಲ್ಸ್ ಮತ್ತು ಸರ್ಚ್ ಬೈ ಎಪಿಕ್ ಸಂಖ್ಯೆ ನಿಮಗೆ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.
ಒಂದು ವೇಳೆ ನೀವು ಎಪಿಕ್ ಸಂಖ್ಯೆ ಆಯ್ಕೆ ಮಾಡಿಕೊಂಡಿದ್ದರೆ, ಇಲ್ಲಿ ನಿಮ್ಮ ಎಪಿಕ್ ಸಂಖ್ಯೆಯನ್ನು ನಮೂದಿಸಿ. ಮತಚಲಾಯಿಸಬೇಕಾದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ.
Published On - 9:17 pm, Tue, 9 May 23