First Look of Ram Lalla: ಅಯೋಧ್ಯೆ ರಾಮಮಂದಿರದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿದ ರಾಮಲಲ್ಲಾ ಪ್ರಾಣ ಪ್ರತಿಷ್ಠೆ

|

Updated on: Jan 22, 2024 | 1:55 PM

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿದ್ದಾರೆ. ಈ ವಿಗ್ರಹವನ್ನು ಕರ್ನಾಟಕದ ಅರುಣ್ ಯೋಗಿರಾಜ್ ಅವರು ಐದು ವರ್ಷದ ಮಗುವಿನಂತೆ ಚಿತ್ರಿಸಿದ್ದಾರೆ. ಬಂಗಾರ ಮತ್ತು ಹೂಗಳಿಂದ ಅಲಂಕೃತವಾಗಿರುವ ರಾಮಲಲ್ಲಾ ಮೂರ್ತಿ ಹೀಗಿದೆ.

1 / 8
ಪ್ರಧಾನಿ ಮೋದಿ ಸೋಮವಾರ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಿದ ನಂತರ ವಿಗ್ರಹದ ಮೊದಲ ನೋಟ ಇಲ್ಲಿದೆ

2 / 8
ಚಿನ್ನ ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ 51 ಇಂಚಿನ ರಾಮಲಲ್ಲಾ ವಿಗ್ರಹವನ್ನು ಇಂದು ಅಯೋಧ್ಯೆ ದೇವಸ್ಥಾನದಲ್ಲಿ ಭವ್ಯವಾದ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಸ್ವಲ್ಪ ಮೊದಲು ಬಹಿರಂಗಪಡಿಸಲಾಯಿತು.

3 / 8
ತಲೆಯಿಂದ ಪಾದದವರೆಗೆ ರಾಮಲಲ್ಲಾನನ್ನು  ಆಭರಣಗಳಿಂದ ಶೃಂಗರಿಸಲಾಗಿದೆ. ರಾಮಲಲ್ಲಾ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣವಿದೆ. ಹಣೆಗೆ ಬೆಳ್ಳಿ ಮತ್ತು ಕೆಂಪು ತಿಲಕದಿಂದ ಅಲಂಕರಿಸಲಾಗಿದೆ.

4 / 8
ಪ್ರಾಣ ಪ್ರತಿಷ್ಠಾ  ಕಾರ್ಯಕ್ರಮದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯದ ಗರ್ಭಗುಡಿಯಲ್ಲಿ ಹಲವಾರು ಸಂತರ ಉಪಸ್ಥಿತಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

5 / 8
ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಿಂದ ಕೆತ್ತಿದ 51 ಇಂಚಿನ ವಿಗ್ರಹವಾಗಿದೆ ಈ ರಾಮಲಲ್ಲಾ

6 / 8
ಹೊಸ ದೇವಾಲಯದ ನೆಲ ಮಹಡಿಯಲ್ಲಿರುವ ರಾಮ್ ಲಲ್ಲಾ ವಿಗ್ರಹವು ಐದು ವರ್ಷದ ರಾಮನನ್ನು ಪ್ರತಿನಿಧಿಸುತ್ತದೆ. ಇನ್ನೂ ನಿರ್ಮಾಣವಾಗಬೇಕಿರುವ ದೇವಾಲಯದ ಮೊದಲ ಮಹಡಿಯಲ್ಲಿ ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಸಹಿತ ರಾಮನ ವಿಗ್ರಹವಿದೆ.

7 / 8
ಅಯೋಧ್ಯಾ ಧಾಮದಲ್ಲಿ ಶ್ರೀ ರಾಮ್ ಲಲ್ಲಾ ಪ್ರಾಣಪ್ರತಿಷ್ಠೆ ಅಸಾಧಾರಣ ಕ್ಷಣವು ಎಲ್ಲರನ್ನು ಭಾವುಕರನ್ನಾಗಿಸಲಿದೆ. ಇದು ನನಗೆ ತುಂಬಾ ಸಂತೋಷವಾಗಿದೆ. ಈ ದೈವಿಕ ಕಾರ್ಯಕ್ರಮದ ಭಾಗವಾಗಿರಿ. ಜಯವಾಗಲಿ ಸಿಯಾ ರಾಮ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ

8 / 8
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವಾದ ಕೂಡಲೇ ಸೇನೆಯ ಹೆಲಿಕಾಪ್ಟರ್‌ಗಳು  ಪುಷ್ಪವೃಷ್ಟಿ ನಡೆಸಿವೆ

Published On - 1:45 pm, Mon, 22 January 24